ಚೀನಾದ TikTok Appನ್ನು ನಂ.1 ಸ್ಥಾನಕ್ಕೇರಿಸಿದ ಭಾರತೀಯರು
ನವದೆಹಲಿ, ಏಪ್ರಿಲ್ 14: ಟಿಕ್ ಟಾಕ್ ಅಪ್ ಭಾರತೀಯರು ಅತಿ ಹೆಚ್ಚು ಬಳಸುವ ಅಪ್‌ಗಳಲ್ಲಿ ಒಂದಾಗಿದೆ. ಈಗ ಅದು ಗೂಗಲ್ ಪ್ಲೇ ಸ್ಟೋರ್‌ನಲ್ಲಿಯೂ ಅತಿ ಹೆಚ್ಚು ಡೌನ್‌ಲೋಡ್ ಆದ ಅಪ್ ಆಗಿದೆ.
ಲಾಕ್‌ಡೌನ್ ಸಮಯದಲ್ಲಿ ಜನರು ಮನೆಯಲ್ಲಿಯೇ ಇರಬೇಕಾಗಿದೆ. ಈ ಸಮಯದಲ್ಲಿ ಟಿಕ್ ಟಾಕ್ ಬಳಕೆ ಹೆಚ್ಚಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟಿಕ್ ಟಾಕ್ 1 ಬಿಲಿಯನ್ ಡೌನ್ ಲೋಡ್ ಆಗಿದೆ. ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆದ ಅಪ್ ಇದಾಗಿದೆ.
ಕೊರೊನಾ ವೈರಸ್ ಚೀನಾದಲ್ಲಿ ಶುರುವಾಗಿ, ಭಾರತಕ್ಕೂ ಹಬ್ಬಿತು. ಪರಿಣಾಮ ಇಡೀ ದೇಶ ಲಾಕ್‌ಡೌನ್ ಮಾಡುವ ಸಂದರ್ಭ ಬಂತು. ಆದರೆ, ಲಾಕ್‌ಡೌನ್ ವೇಳೆ ಅದೇ ಚೀನಾದ ಅಪ್ ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ.

ಶೇಕಡ 29.5 ರಷ್ಟು ಹೆಚ್ಚು
ಭಾರತದಲ್ಲಿ ಕಳೆದ ತಿಂಗಳು ಟಿಕ್ ಟಾಕ್ 115.2 ಮಿಲಿಯನ್ ಡೌನ್‌ಲೋಡ್ ಆಗಿದೆ. ಮಾರ್ಚ್‌ನಲ್ಲಿ ಶೇಕಡ 29.5 ರಷ್ಟು ಹೆಚ್ಚು ಡೌನ್‌ಲೋಡ್ ಆಗಿದೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಇರುವ ಜನರ ಪೈಕಿ ಅನೇಕರು ಟಿಕ್ ಟಾಕ್ ಮೊರೆ ಹೋಗಿದ್ದಾರೆ. ವಿಡಿಯೋಗಳನ್ನು ಮಾಡಿ ಸಮಯ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ಗೆ ಹಿಂದೆಯೂ ಟಿಕ್ ಟಾಕ್ ಭಾರತದಲ್ಲಿ ದೊಡ್ಡ ಜನಪ್ರಿಯತೆ ಪಡೆದುಕೊಂಡಿದೆ.

ಬೈಟ್ ಡ್ಯಾನ್ಸ್ ಒಡೆತನ
ಕೊರೊನಾ ವೈರಸ್ ಚೀನಾದಲ್ಲಿ ಶುರುವಾಗಿತ್ತು. ನಂತರ ಅದು ವಿಶ್ವಕ್ಕೆ ಹಬ್ಬಿದೆ. ಭಾರತಕ್ಕೂ ಕೊರೊನಾ ಕಾಲಿಟ್ಟು, ಇಡೀ ದೇಶ ಲಾಕ್‌ಡೌನ್ ಮಾಡುವ ಸಂದರ್ಭ ಬಂತು. ಸದ್ಯ ಭಾರತದಲ್ಲಿ ಏಪ್ರಿಲ್ 30ರ ವರೆಗೆ ಲಾಕ್ ಡೌನ್ ಮುಂದುವರೆದಿದೆ. ಆದರೆ, ಲಾಕ್‌ಡೌನ್ ವೇಳೆ ಅದೇ ಚೀನಾದ ಬೈಟ್ ಡ್ಯಾನ್ಸ್ ಕಂಪನಿಯ ಅಪ್ ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ.

ಅಭಿಯಾನಕ್ಕೆ ಸೋಲು
ಕೊರೊನಾ ವೈರಸ್ ಚೀನಾದಿಂದ ಬಂದಿದ್ದು, ಈ ವೈರಸ್‌ನಿಂದ ಭಾರತಕ್ಕೆ ತುಂಬ ತೊಂದರೆ ಆಗಿದೆ. ಹೀಗಾಗಿ, ಚೀನಾದ ಟಿಕ್ ಟಾಕ್ ಅಪ್ ಅನ್ನು ಅನ್ ಇನ್ಸ್ಟಾಲ್ ಮಾಡಿ ಎಂದು ಅಭಿಯಾನ ಶುರು ಆಗಿತ್ತು. ಕೆಲವರು ಅನ್ ಇನ್ಸ್ಟಾಲ್ ಮಾಡಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಆದರೆ, ನಂತರ ಈ ಅಭಿಯಾನಕ್ಕೆ ದೊಡ್ಡ ಬೆಂಬಲ ಸಿಗಲಿಲ್ಲ.

100 ಕೋಟಿ ದೇಣಿಗೆ ನೀಡಿದ ಟಿಕ್ ಟಾಕ್
ಒಂದು ಕಡೆ ಸಮಯ ಕಳೆಯಲು ಅನೇಕರು ಟಿಕ್ ಟಾಕ್ ಮೊರೆ ಹೋಗಿದ್ದಾರೆ. ಮತ್ತೊಂದು ಕಡೆ ಒಳ್ಳೆಯ ಸಂದೇಶವನ್ನು ನೀಡಲು ವೈದ್ಯರು ಸಹ ಟಿಕ್ ಟಾಕ್ ಅಪ್ ಬಳಸಿಕೊಂಡಿದ್ದಾರೆ. ಅದರ ಮೂಲಕ ಸ್ಫೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಕೊರೊನಾ ಹೋರಾಟಕ್ಕೆ ಭಾರತಕ್ಕೆ ಟಿಕ್ ಟಾಕ್ ಸಂಸ್ಥೆ 100 ಕೋಟಿ ದೇಣಿಗೆ ನೀಡಿದೆ. ಇದು ಮೆಚ್ಚುಗೆ ಪಡೆಯುವ ವಿಷಯವಾಗಿದೆ.












Click it and Unblock the Notifications