ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ9 ರಂದು ಮೋದಿ ಕೊಲ್ಕತ್ತಾ ಭೇಟಿ, ಭಾರೀ ಭದ್ರತೆ

|
Google Oneindia Kannada News

ನವದೆಹಲಿ, ಮೇ 5 : ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅಲ್ ಖೈದಾ ಸಂಘಟನೆ ವಿಡಿಯೋ ಸಂದೇಶದ ಮೂಲಕ ಹೇಳಿರುವ ಕಾರಣ ಅವರ ಭದ್ರತೆಗೆ ಕೇಂದ್ರ ಹೆಚ್ಚಿನ ಗಮನ ನೀಡಿದೆ. ಮೇ 9ರಂದು ಮೋದಿ ಕೋಲ್ಕತ್ತಾಗೆ ಭೇಟಿ ನೀಡಲಿದ್ದು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಲಾಲ್ ಬಜಾರ್ ಪೊಲೀಸರು ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳನ್ನು ಅಂತಿಮಗೊಳಿಸುತ್ತಿದ್ದಾರೆ. ಅಗತ್ಯವಿದ್ದರೆ ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲು ಪೊಲೀಸರು ಮುಂದಾಗಿದ್ದಾರೆ. [ಅಲ್ ಖೈದಾ ವಿಡಿಯೋ ಬಗ್ಗೆ ತನಿಖೆ]

Narendra Modi

ಮೇ 9ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಪಂಜಾಬ್-ಕೋಲ್ಕತ್ತಾ ನಡುವಿನ ಐಪಿಎಲ್ ಪಂದ್ಯವಿದೆ, ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಪೊಲೀಸರು ಭದ್ರತೆ ಬಗ್ಗೆ ಹೆಚ್ಚಿನ ಗಮನ ವಹಿಸಿದ್ದಾರೆ. ಮೋದಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ಕಮಾಂಡೋಗಳು ಮೇ 6ರಂದು ಕೋಲ್ಕತ್ತಾಗೆ ತೆರಳಲಿದ್ದಾರೆ.

ನರೇಂದ್ರ ಮೋದಿ ಅವರಿಗೆ ಮೂರರಿಂದ ಐದು ಸ್ತರದ ಭದ್ರತೆ ನೀಡಲು ಕೋಲ್ಕತ್ತಾ ಪೊಲೀಸರು ಸಜ್ಜಾಗಿದ್ದಾರೆ. ನಗರಕ್ಕೆ ಆಗಮಿಸುವ ಎಸ್‌ಪಿಜಿ ಕಮಾಂಡೋಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಪೊಲೀಸರು ಕೈಗೊಳ್ಳಲಿದ್ದಾರೆ.

ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಮೇ 9ರಂದು ರಾಮಕೃಷ್ಣ ಮಠದ ಸ್ವಾಮಿ ಆತ್ಮಾಸ್ಥಾನಂದ್‌ ಮಹಾರಾಜ್‌ರನ್ನು ಭೇಟಿ ಮಾಡಲಿದ್ದಾರೆ. ರಾಮಕೃಷ್ಣ ಮಠದ ಕೇಂದ್ರ ಕಚೇರಿ ಇಲ್ಲಿದ್ದು, 2013ರ ನಂತರ ಪ್ರಧಾನಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

English summary
An al-Qaida video that mentions Prime Minister Narendra Modi has put security agencies on alert ahead of the PM's visit to Kolkata on May 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X