• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದ 10 ರಾಜ್ಯಗಳಲ್ಲಿ ಶೇ. 77ರಷ್ಟು ಕೋವಿಡ್-19 ಸಕ್ರಿಯ ಪ್ರಕರಣಗಳಿವೆ: ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ

|

ನವದೆಹಲಿ, ನವೆಂಬರ್ 28: ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಕೋವಿಡ್‌-19 ಪ್ರಕರಣಗಳಲ್ಲಿ ಶೇಕಡಾ 77ರಷ್ಟು ಪ್ರಕರಣಗಳನ್ನು 10 ರಾಜ್ಯಗಳು ಹೊಂದಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಿಶ್ವದಾದ್ಯಂತ ಕೋವಿಡ್-19 ಎರಡನೇ ಅಲೆಯನ್ನು ಗಮಸಿದ್ದೇವೆ. ಆದರೆ ಭಾರತದ ಜನಸಂಖ್ಯೆಯ ಗಾತ್ರ ಮತ್ತು ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನಾವು ಸೋಂಕು ಹರಡುವುದನ್ನು ಗಮನಾರ್ಹವಾಗಿ ನಿರ್ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇಂದ್ರವು ತಿಳಿಸಿದೆ.

ಮಾಸ್ಕ್ ಧರಿಸದಿದ್ದರೆ ಕೊವಿಡ್-19 ರೋಗಿಗಳ ಸೇವೆ ಮಾಡಬೇಕು!

ನವೆಂಬರ್ 24ರ ಹೊತ್ತಿಗೆ ದೇಶದಲ್ಲಿ 9.2 ಮಿಲಿಯನ್ ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 0.44 ಮಿಲಿಯನ್ ಸಕ್ರಿಯ ಪ್ರಕರಣಗಳಿವೆ. ಇದು ಪ್ರಸ್ತುತ ಸಂಚಿತ ಪ್ರಕರಣಗಳಲ್ಲಿ ಶೇಕಡಾ 4.7ರಷ್ಟು ಆಗಿದ್ದು, ಚೇತರಿಕೆ ದರವು ಶೇಕಡಾ 93.76ಕ್ಕೆ ಏರಿದೆ. ಸುಮಾರು 86 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕಳೆದ ಎಂಟು ವಾರಗಳಲ್ಲಿ ದಿನಕ್ಕೆ ಸರಾಸರಿ ಪ್ರಕರಣಗಳು ಶೇಕಡಾ 50ರಷ್ಟು ಕಡಿಮೆಯಾಗಿದೆ. ಸದ್ಯ ಎರಡು ರಾಜ್ಯಗಳು ಮಾತ್ರ 50,000ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಹೊಂದಿವೆ. ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 33ರಷ್ಟಿದೆ ಎಂದು ಗೃಹ ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಜಾಗತಿಕವಾಗಿ ಸಾವಿನ ಸರಾಸರಿ ಪ್ರಮಾಣ (ಸಿಎಫ್‌ಆರ್‌) ಶೇಕಡಾ 2.36ಕ್ಕೆ ಹೋಲಿಸಿದರೆ, ಭಾರತದ ಸಾವಿನ ಪ್ರಕರಣಗಳ ಪ್ರಮಾಣ ಶೇಕಡಾ 1.46ರಷ್ಟಿದೆ ಮತ್ತು ಒಟ್ಟು ಸಾವಿನ ಸಂಖ್ಯೆ 0.13 ಮಿಲಿಯನ್ ಆಗಿದೆ ಎಂದು ತಿಳಿಸಿದೆ.

ಭಾರತದಲ್ಲಿ ಶೇಕಡಾ 77ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ರಾಜ್ಯಗಳು ಇಂತಿವೆ:

ಮಹಾರಾಷ್ಟ್ರ: 18.9%

ಕೇರಳ: 14.7%

ದೆಹಲಿ: 8.5%

ಪಶ್ಚಿಮ ಬಂಗಾಳ: 5.7%

ಕರ್ನಾಟಕ: 5.6%

ಉತ್ತರ ಪ್ರದೇಶ: 5.4%

ರಾಜಸ್ಥಾನ: 5.5%

ಛತ್ತೀಸಗಡ: 5.0%

ಹರಿಯಾಣ: 4.7%

ಆಂಧ್ರಪ್ರದೇಶ: 3.1%

English summary
The Centre on Friday told the Supreme Court that ten States have almost 77 per cent of the active covid-19 caseload of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X