ಜೈಲು ತಪ್ಪಿಸಿಕೊಳ್ಳಲು ನ್ಯಾ. ಕರ್ಣನ್ ಮುಂದಿರುವ ಹಾದಿಯೇನು?
ನವದೆಹಲಿ, ಮೇ 9: ನ್ಯಾಯಾಂಗ ನಿಂದನೆ ಆರೋಪದಡಿ ಪಶ್ಚಿಮ ಬಂಗಾಳ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ ವಿಧಿಸಿರುವ ಆರು ತಿಂಗಳ ಜೈಲು ವಾಸ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಅವರ ಮುಂದಿರುವ ದಾರಿಗಳೇನು ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.
ನ್ಯಾ. ಕರ್ಣನ್ ಅವರ ಮುಂದಿರುವ ಅತ್ಯುತ್ತಮ ಆಯ್ಕೆಯೆಂದರೆ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತಮ್ಮ ವಿರುದ್ಧ ನೀಡಿರುವ ತೀರ್ಪನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲು ಕೋರಬಹುದು.[ನ್ಯಾಯಮೂರ್ತಿ ಕರ್ಣನ್ ಗೆ ಸುಪ್ರೀಂ ಆರು ತಿಂಗಳು ಜೈಲು]

ಅಲ್ಲದೆ, ಸಂವಿಧಾನದ 147ನೇ ಕಲಂ ಪ್ರಕಾರ, ತಮ್ಮ ವಿರುದ್ಧದ ತೀರ್ಪನ್ನು ಮರು ಪರಿಶೀಲನೆ ಮಾಡಬೇಕೆಂದು ಅರ್ಜಿ ಸಲ್ಲಿಸಬಹುದು.
ಹೀಗೆ, ತೀರ್ಪನ್ನು ಮರುಪರಿಶೀಲಿಸಲು ಹಾಗೂ ಪುನರ್ ವಿಮರ್ಶೆ ಮಾಡಲು ಸುಪ್ರೀಂ ಕೋರ್ಟ್ ಅನ್ನು ಕೋರಲು ನ್ಯಾ. ಕರ್ಣನ್ ಅವರಿಗೆ ಸಕಾರಣವೂ ಇದೆ.
ಮಂಗಳವಾರ ಬೆಳಗ್ಗೆ ನ್ಯಾ. ಕರ್ಣನ್ ಅವರಿಗೆ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಈ ಆದೇಶ ಸಂಕ್ಷಿಪ್ತವಾಗಿದ್ದು, ತೀರ್ಪಿನ ಹಿಂದಿನ ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ.
ಆದ್ದರಿಂದ, ಸುಪ್ರೀಂ ಕೋರ್ಟ್ ನೀಡಿರುವ ಶಿಕ್ಷೆಯ ಹಿಂದಿನ ಕಾರಣಗಳು ತಮಗೆ ತಿಳಿದಿಲ್ಲವಾದ್ದರಿಂದ ಈ ತೀರ್ಪನ್ನು ತಾತ್ಕಾಲಿಕವಾಗಿ ಅಮಾನತು ಮಾಡಬೇಕೆಂದು ನ್ಯಾ. ಕರ್ಣನ್ ಮೇಲ್ಮನವಿಯಲ್ಲಿ ಹೇಳಬಹುದಾಗಿದೆ.












Click it and Unblock the Notifications