ದೆಹಲಿ ಕೌರ್ ಪ್ರಕರಣಕ್ಕೊಂದು ಲಭಿಸಿದೆ ಪ್ರತ್ಯಕ್ಷ ಸಾಕ್ಷಿ
ನವದೆಹಲಿ, ಆಗಸ್ಟ್, 26 : ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೆಹಲಿ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದ್ದು, ಈ ಪ್ರಕರಣ ಕುರಿತಾಗಿ ಇದೀಗ ಪ್ರತ್ಯಕ್ಷ ಸಾಕ್ಷಿಯೊಂದು ಲಭಿಸಿದೆ.
ತಿಲಕ್ ನಗರದ ಬಳಿ ಟ್ರಾಫಿಕ್ ಸಿಗ್ನಲ್ ಬಳಿ ನಡೆದ ಘಟನೆ ವೀಕ್ಷಿಸಿದ ವ್ಯಕ್ತಿಯೊಬ್ಬರು ಸಾಕ್ಷಿ ಹೇಳಲು ಮುಂದಾಗಿ ಜಸ್ಲೀನ್ ಕೌರ್ ಅವರ ಸೋಗಲಾಡಿ ಮಾತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.[ದೆಹಲಿ ಜಸ್ಲೀನ್ ಕೌರ್ ಪ್ರಕರಣ ರಾಜಕೀಯ ತಿರುವು ಪಡೆಯಿತೇ?]

ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷ ಸಾಕ್ಷಿ ಇದರಲ್ಲಿ ಯುವಕನ ತಪ್ಪಿಲ್ಲ. ಈಕೆಯೇ ಹುಡುಗನ ಬಳಿ ಬಂದು ಧಮಕಿ ಹಾಕಿದ್ದಾಳೆ. ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಪ್ಪು ಎಸಗಿದ್ದಾಳೆ ಎಂದು ಹೇಳಿದ್ದಾರೆ.
ತಿಲಕ್ ನಗರ ನಿವಾಸಿ ಹಾಗೂ ಆಪ್ ಕಾರ್ಯಕರ್ತೆ ಜಸ್ಲೀನ್ ಕೌರ್ ಟ್ರಾಫಿಕ್‌ನಲ್ಲಿ ರೇಗಿಸಿದ ಸರ್ಜಿತ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಳು. ಈ ಪ್ರಯುಕ್ತ ಐಪಿಎಸ್ ಸೆಕ್ಷನ್ 354 ಎ ಹಾಗೂ 509 ರ ಪ್ರಕಾರ ಸರ್ಜಿತ್ ನನ್ನು ಬಂಧಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಕೌರ್ ಹಾಕಿರುವ ಸ್ಟೇಟಸ್ ಕಂಡು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಗಣ್ಯರು ಆಕೆಯನ್ನು ಬೆಂಬಲಿಸಿ ಅಭಿನಂದಿಸಿದ್ದರು. ಇನ್ನು ಕೆಲವು ಮಂದಿ ಈಕೆ ಸುಳ್ಳು ಹೇಳುತ್ತಿದ್ದಾಳೆ. ನಾಟಕ ಆಡುತ್ತಿದ್ದಾಳೆ ಎಂದು ಜಸ್ಲೀನ್ ವಿರುದ್ಧ ಕಿಡಿಕಾರಿದ್ದರು.












Click it and Unblock the Notifications