ಸದ್ಯದಲ್ಲೇ ಮೋದಿ ಸರಕಾರಕ್ಕೆ ISO ಸರ್ಟಿಫಿಕೇಟ್ !

ನವದೆಹಲಿ, ಜೂನ್ 19: ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಉದಾರೀಕರಣಕ್ಕೆ ತೆರೆದುಕೊಂಡ ನಂತರ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುರೂಪವಾಗಲು ಐಎಸ್ಒ ಪ್ರಮಾಣಪತ್ರ ಪಡೆಯುವ ಹಪಾಹಪಿ ದೇಶದಲ್ಲಿ/ರಾಜ್ಯದಲ್ಲಿ ವ್ಯಾಪಕವಾಗಿ ಕಂಡುಬಂದಿತ್ತು. ಅದಾದ ನಂತರ ಐಎಸ್ಒ ಸರ್ಟಿಫಿಕೇಟ್ ಪಡೆದ ಸಂಸ್ಥೆಗಳು ಗುಣಮಟ್ಟವನ್ನು ಕಾಪಾಡಿಕೊಂಡವಾ? ಅಥವಾ ಐಎಸ್ಒ ಸರ್ಟಿಫಿಕೇಟ್ ಒಂದು ಫ್ಯಾಷನ್ ಟ್ಯಾಗ್ ಆಗಿ ಉಳಿಯಿತಾ? ಎಂಬುದು ಹೊರಜಗತ್ತಿಗೆ ತಿಳಿದುಬರಲಿಲ್ಲ.

ಇದೀಗ ದೇಶದ ಚುಕ್ಕಾಣಿ ಹಿಡಿದಿರುವ, ಪಾರದರ್ಶಕತೆಗೆ ಒತ್ತುನೀಡುತ್ತಿರುವ, ಪ್ರಧಾನಿ ನರೇಂದ್ರ ಮೋದಿ ಸಹ ಐಎಸ್ಒ ಸರ್ಟಿಫಿಕೇಟ್ ಗುಣಮಟ್ಟ ಗಳಿಸಲು ತಾಕೀತು ಮಾಡಿದ್ದಾರೆ. ಅಂದರೆ ದಿಲ್ಲಿಯಲ್ಲಿರುವ ಭಾರತ ಸರಕಾರಕ್ಕೆ ISO 9001 ಸರ್ಟಿಫಿಕೇಟ್ ಗಳಿಸಲು ಯತ್ನಿಸುತ್ತಿದ್ದಾರೆ. ಅಂದಹಾಗೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅಲ್ಲಿನ ತಮ್ಮ ರಾಜ್ಯ ಸರಕಾರಕ್ಕೆ ಇಂತಹ ಸರ್ಟಿಫಿಕೇಟ್ ಪಡೆದಿದ್ದರು.

Thanks to Prime Minister Narendra Modi efforts GOI to get world’s first ISO 9001 certificate

ದಿಲ್ಲಿಯಲ್ಲಿ ಭಾರತ ಸರಕಾರವು ISO 9001 ಸರ್ಟಿಫಿಕೇಟ್ ಪಡೆಯುವ ಸಂಬಂಧ ಕೇಂದ್ರ ಕಾರ್ಯದರ್ಶಿ ಪ್ರಜಾಪತಿ ತ್ರಿವೇದಿ ಅವರು ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಿಗೆ ಪತ್ರ ಬರೆದು ಯೋಜನೆಯ ಬಗ್ಗೆ ತಿಳಿಯಹೇಳಿದ್ದಾರೆ.

ನಮ್ಮ ಸಮಗ್ರ ಮತ್ತು ಸರ್ವಾಂಗೀಣ ಅವಲೋಕನದ ಮೂಲಕ ನಾವು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ISO 9001 ಪ್ರಮಾಣೀಕೃತ ಸರಕಾರವನ್ನು ಸ್ಥಾಪಿಸಬಹುದಾಗಿದೆ. ಇದರ ಪ್ರಧಾನ ಉದ್ದೇಶ ತ್ವರಿತವಾಗಿ ನಿರ್ಣಯಗಳ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ. ತನ್ಮೂಲಕ ಎಲ್ಲಾ ಇಲಾಖೆಗಳಲ್ಲೂ ವೃತ್ತಿಪರ ನೈಪುಣ್ಯತೆಯನ್ನು ಸಾಧಿಸಬಹುದಾಗಿದೆ ಎಂದು ಪ್ರಜಾಪತಿ ತ್ರಿವೇದಿ ಅವರು ಪ್ರತಿಪಾದಿಸಿದ್ದಾರೆ.

ಏನಿದು ISO 9001 Certificate?
International Organization for Standardization ಸಂಸ್ಥೆಯು ಪ್ರಮಾಣೀಕರಿಸುವ ಗುಣಮಟ್ಟದ ಮಾನದಂಡ ಪ್ರಕ್ರಿಯೆ. ನಾಯಕತ್ವ, ಕ್ಷಿಪ್ರ ನಿರ್ಣಯಗಳನ್ನು ಕೈಗೊಳ್ಳುವುದು, ನಾನಾ ಪ್ರಕ್ರಿಯೆ ಹಂತಗಳನ್ನು ಒಂದುಗೂಡಿಸುವುದು, ದಾಖಲೆಗಳನ್ನು ಉತ್ತಮ ರೀತಿಯಲ್ಲಿ ಪಾಲಿಸುವುದು, ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವುದು, ಅಂತಿಮವಾಗಿ ಈ ಪ್ರಕ್ರಿಯೆಗಳಲ್ಲಿ ಜನತೆ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತಾಗುವುದು ಇದರ ವೈಶಿಷ್ಟ್ಯ.

ಗಮನಾರ್ಹವೆಂದರೆ ಈಗಾಗಲೇ ಕೇಂದ್ರದ 72 ಇಲಾಖೆಗಳ ಪೈಕಿ 37 ಇಲಾಖೆಗಳ ಅದಾಗಲೇ ISO scheme ಅನುಸಾರ ಕಾರ್ಯನಿರತವಾಗಿವೆ. ಹಿಂದಿನ ಯುಪಿಎ ಸರಕಾರ ಿದನ್ನು ಜಾರಿಗೊಳಿಸಲು ಯತ್ನಿಸಿ, ವಿಫಲವಾಗಿತ್ತು.

ಹಿರಿಯ ಸಚಿವರ ಅಧೀನದಲ್ಲಿದ್ದ ಕೆಲ ಸಚಿವಾಲಯಗಳು ಈ ವ್ಯವಸ್ಥೆಗೆ ಮಣೆ ಹಾಕಲು ಹಿಂದೇಟು ಹಾಕಿದ್ದವು. ಹಾಗಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಆಡಳಿತಾವಧಿಯಲ್ಲಿ ISO scheme ಹಳ್ಳಹಿಡಿದಿತ್ತು. ಹಾಲಿ ಪ್ರಧಾನಿ ಈ ಬಾರಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಟಿಬದ್ಧರಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+