ಉನ್ನಾವೋ ಪ್ರಕರಣದಲ್ಲಿ ಮೋದಿ ಹೆಸರು ತಂದ ರಾಹುಲ್, ಸ್ವಾಮಿಯಿಂದ ತರಾಟೆ
ನವದೆಹಲಿ, ಆಗಸ್ಟ್ 24: ಇಡೀ ದೇಶದ ಗಮನ ಸೆಳೆದಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಸಾಕ್ಷಿಯೊಬ್ಬರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂರಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜರ್ಮನಿಯಲ್ಲಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ, ಅಲ್ಲಿ ಮಾಡಿದ ಭಾಷಣದಲ್ಲಿ, ಉನ್ನಾವೋ ಪ್ರಕರಣದ ಸಾಕ್ಷಿಯೊಬ್ಬರು ಮೃತರಾಗಿರುವುದನ್ನು ಉಲ್ಲೇಖಿಸಿ, "ನಮ್ಮ ಹೆಣ್ಣು ಮಕ್ಕಳಿಗೆ ನೀವು ನೀಡುವ ನ್ಯಾಯ ಇದೆಯೇ ಮಿ.56?" ಎಂದು ಪ್ರಶ್ನಿಸಿದ್ದರು.
"ಬಿಜೆಪಿ ಶಾಸಕ ಕುಲದೀಪ್ ಸೇನ್ಗಾರ್ ಆರೋಪಿಯಾಗಿರುವ ೦ಉನ್ನಾವೋ ಅತ್ಯಾಚಾರ ಮತ್ತು ಸಾಕ್ಷಿಯ ಸಾವು ಪ್ರಕರಣದಲ್ಲಿ ಯಾವುದೋ ಪಿತೂರಿಯವ ವಾಸನೆ ಬರುತ್ತಿಲ್ಲವೇ? ನಮ್ಮ ಹೆಣ್ಣುಮಕ್ಕಳಿಗೆ ನೀವು ನೀಡುವ ನ್ಯಾಯ ಇದೆಯೇ? ಎಂದು ರಾಹುಲ್ ಗಾಂಧಿ ಕೇಳಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, "ರಾಹುಲ್ ಗಾಂಧಿ ಅವರು ವಿಶ್ವಮಟ್ಟದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಾನ ಕಳೆಯುತ್ತಿದ್ದಾರೆ. ಇದು ಸರಿಯಲ್ಲ. ಇಂಥ ಟ್ರಿಕ್ ಗಳಿಂದ ರಾಹುಲ್ ಗಾಂಧಿ ಜಯ ಸಾಧಿಸಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಲಿದ್ದಾರೆ.
2017 ರ ಜೂನ್ ನಲ್ಲಿ ಉತ್ತರ ಪ್ರದೇಶದ ಉನ್ನಾವೋ ಎಂಬಲ್ಲಿ ಅಪ್ರಾಪ್ತೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ವರದಿಯಾಗಿತ್ತು. ಈ ಘಟನೆಯಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆನ್ಗಾರ್ ಎಂಬುವವರ ಕೈವಾಡವಿದೆಯೆಂದು ಅವರನ್ನು ಈಗಾಗಲೇ ಪೊಲೀಸರು ವಶಸಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications