ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಬಾಲಕಿಯ ಶಸ್ತ್ರಚಿಕಿತ್ಸೆಗೆ ಅಗತ್ಯ ನೆರವು ನೀಡಿದ ಸುಷ್ಮಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಪಾಕಿಸ್ತಾನದ ಬಾಲಕಿಯೊಬ್ಬಳಿಗೆ ಹೆಚ್ಚಿನ ಚಿಕಿತ್ಸೆಗೆ ಭಾರತಕ್ಕೆ ಬರಲು ಭಾರತ ಸರ್ಕಾರ ನೆರವಿನ ಹಸ್ತ ಚಾಚಿದೆ.

ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ

ಭಾರತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಆ ಬಾಲಕಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ನೀಡಿದ್ದಾರೆ.

Sushma Swaraj grants visa to 7-yr-old Pak girl for open heart surgery in India

ವೀಸಾಕ್ಕಾಗಿ ಬಾಲಕಿಯ ತಾಯಿ ಈ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಟ್ವಿಟ್ಟರ್ ನಲ್ಲಿ ಅರ್ಜಿಯ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದರು.

ಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್: 'ಸೊಕ್ಕಿನ' ಭಾಷಣವೆಂದ ಚೀನಾಪಾಕ್ ವಿರುದ್ದ ಸುಷ್ಮಾ ಡೆಡ್ಲಿ ಸ್ಪೀಚ್: 'ಸೊಕ್ಕಿನ' ಭಾಷಣವೆಂದ ಚೀನಾ

ಅವರ ಟ್ವೀಟ್ ಗೆ ಉತ್ತರಿಸಿರುವ ಸುಷ್ಮಾ ಸ್ವರಾಜ್, ''ಹೌದು. ನಾವು 7 ವರ್ಷದ ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗಲು ವೀಸಾ ನೀಡಿದ್ದೇವೆ. ಬಾಲಕಿಯ ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ.'' ಎಂದು ತಿಳಿಸಿದ್ದಾರೆ.

English summary
External Affairs Minister Sushma Swaraj on Wednesday granted medical visa to seven-year-old Pakistani girl from Karachi for undergoing an open heart surgery in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X