ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಗೆ ಸ್ಪರ್ಧೆ ಇಲ್ಲ: ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ?

|
Google Oneindia Kannada News

Recommended Video

ಲೋಕಸಭೆಗೆ ಸ್ಪರ್ಧೆ ಇಲ್ಲ: ಸಚಿವೆ ಸುಷ್ಮಾ ಸ್ವರಾಜ್ ರಾಜಕೀಯ ನಿವೃತ್ತಿ..! | Oneindia Kannada

ನವದೆಹಲಿ, ನವೆಂಬರ್ 20: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅಚ್ಚರಿ ಮೂಡಿಸಿದ್ದಾರೆ.

ಆಡಳಿತಾರೂಢ ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಸುಷ್ಮಾ, ಮೋದಿ ಸರ್ಕಾರದ ಬಹು ಪ್ರಭಾವಿ ಸಚಿವರೂ ಆಗಿದ್ದಾರೆ.

ವಿರೋಧ ಪಕ್ಷಗಳ ಮಹಾಮೈತ್ರಿಕೂಟವನ್ನು ಎದುರಿಸಿ ಮತ್ತೆ ಅಧಿಕಾರಕ್ಕೇರುವ ಉತ್ಸಾಹದಲ್ಲಿರುವ ಎನ್‌ಡಿಎ ಸರ್ಕಾರಕ್ಕೆ ಇದು ಆಘಾತಕಾರಿ ಸಂಗತಿಯಾಗಿದೆ.

ವಿಡಿಯೋ: ಭಜನೆ ಹಾಡಿ ಸುಷ್ಮಾ ಸ್ವರಾಜ್ ಮನಗೆದ್ದ ಕುವೈತ್ ಹಾಡುಗಾರವಿಡಿಯೋ: ಭಜನೆ ಹಾಡಿ ಸುಷ್ಮಾ ಸ್ವರಾಜ್ ಮನಗೆದ್ದ ಕುವೈತ್ ಹಾಡುಗಾರ

ಮಧ್ಯಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್, 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅನಾರೋಗ್ಯದ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ 66 ವರ್ಷದ ಸುಷ್ಮಾ ಹೇಳಿದ್ದಾರೆ.

ಮನಸ್ಸಿನಲ್ಲಿ ನಿರ್ಧಾರ

ಮನಸ್ಸಿನಲ್ಲಿ ನಿರ್ಧಾರ

'ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಆದರೆ, ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಬಾರದು ಎಂದು ನನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ' ಎಂಬುದಾಗಿ ಅವರು ಹೇಳಿದ್ದಾರೆ.

ವಿಶ್ವಸಂಸ್ಥೆ: ಉಗ್ರರ ನೆರಳಾಗಿರುವ ಪಾಕ್ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿವಿಶ್ವಸಂಸ್ಥೆ: ಉಗ್ರರ ನೆರಳಾಗಿರುವ ಪಾಕ್ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿ

ರಾಜಕೀಯ ನಿವೃತ್ತಿ?

ರಾಜಕೀಯ ನಿವೃತ್ತಿ?

ಅನಾರೋಗ್ಯದ ಕಾರಣದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಅವರು, ಉಳಿದಂತೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಮುಂದುವರಿಯಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ನಿರಂತರ ಓಡಾಟ ಮತ್ತು ಕೆಲಸದ ಒತ್ತಡದಿಂದ ಬಳಲಿರುವ ಅವರು ರಾಜಕೀಯ ಜೀವನದಿಂದಲೂ ನಿವೃತ್ತರಾಗುತ್ತಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಭಯೋತ್ಪಾದನೆ ಮೂಲೋತ್ಪಾಟನೆಗೆ ಜಾಗತಿಕ ವೇದಿಕೆಯಲ್ಲಿ ಸುಷ್ಮಾ ಧ್ವನಿ ಭಯೋತ್ಪಾದನೆ ಮೂಲೋತ್ಪಾಟನೆಗೆ ಜಾಗತಿಕ ವೇದಿಕೆಯಲ್ಲಿ ಸುಷ್ಮಾ ಧ್ವನಿ

ರಾಜ್ಯಸಭೆ ಮೂಲಕ ಸಂಸತ್‌ಗೆ

ರಾಜ್ಯಸಭೆ ಮೂಲಕ ಸಂಸತ್‌ಗೆ

ಆದರೆ, ಅವರನ್ನು ರಾಜ್ಯಸಭೆಯ ಮೂಲಕ ಪಕ್ಷವು ಮತ್ತೆ ಸಂಸತ್‌ಗೆ ಕರೆತರಲಿದೆ. ಖಡಕ್ ಮಾತು ಮತ್ತು ನಿರ್ಧಾರಗಳಿಂದ ಪಕ್ಷದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಅವರ ಅಗತ್ಯ ಸರ್ಕಾರಕ್ಕಿದೆ. ಹೀಗಾಗಿ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡದೆ ಇದ್ದರೂ ಅವರನ್ನು ಸಂಸತ್‌ನಿಂದ ದೂರ ಇರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪತ್ನಿಯರನ್ನು ತ್ಯಜಿಸುವ ಎನ್‌ಆರ್‌ಐಗಳಿಗೆ ಕಾನೂನಿನ ಕುಣಿಕೆಪತ್ನಿಯರನ್ನು ತ್ಯಜಿಸುವ ಎನ್‌ಆರ್‌ಐಗಳಿಗೆ ಕಾನೂನಿನ ಕುಣಿಕೆ

ರಾಜಕೀಯ ಕಾರಣಗಳಿಲ್ಲ

ರಾಜಕೀಯ ಕಾರಣಗಳಿಲ್ಲ

ಸುಷ್ಮಾ ಸ್ವರಾಜ್ ಅವರು ಸೋಂಕಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಕಾರಣಕ್ಕಾಗಿ ಚುನಾವಣೆಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಅವರು 11 ಚುನಾವಣೆಗಳನ್ನು ಎದುರಿಸಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅನಾರೋಗ್ಯಕ್ಕೆ ಒಳಗಾಗಿದ್ದ ಸುಷ್ಮಾ

ಅನಾರೋಗ್ಯಕ್ಕೆ ಒಳಗಾಗಿದ್ದ ಸುಷ್ಮಾ

ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, ಎರಡು ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮದುಮೇಹ ಸಂಬಂಧಿ ಸಮಸ್ಯೆ ಅನುಭವಿಸಿದ್ದ ಸುಷ್ಮಾ, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

1977ರಲ್ಲಿ 25ನೇ ವಯಸ್ಸಿನಲ್ಲಿ ಹರಿಯಾಣದ ಸಚಿವರಾಗುವ ಮೂಲಕ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

English summary
Union Minister Sushma Swaraj announced that she will not contest in 2019 Lok Sabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X