ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ

Recommended Video

      ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ | Oneindia Kannada

      ನವದೆಹಲಿ, ಸೆಪ್ಟೆಂಬರ್ 27: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ ಕೆಲವು ವಿಡಿಯೋಗಳು ಬಿಡುಗಡೆಗೊಂಡಿವೆ.

      ಕಳೆದ ಜೂನ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋವೊಂದು ಬಿಡುಗಡೆಯಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

      ಇದೀಗ ಅದರ ಮುಂದಿನ ಭಾಗ ಎಂಬಂತೆ ಮತ್ತೆ ಕೆಲವು ವಿಡಿಯೋಗಳು ಬಿಡುಗಡೆಯಾಗಿದ್ದು, ಪಾಕ್ ವಿರುದ್ಧ ಭಾರತೀಯ ಸೇನೆ ಸರ್ಜಿಕಲ್ ನಡೆಸಿದ್ದೇ ಸುಳ್ಳು ಎಂದವರಿಗೆ ಉತ್ತರ ಸಿಕ್ಕಂತಾಗಿದೆ.

      2016 ರ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆಯು ಪಾಕಿಸ್ತಾನದ ಗಡಿಯೊಳಗೆ ನುಸುಳಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು.

      ಇಂದು ಬಿಡುಗಡೆಗೊಂಡ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋಗಳು ಇಲ್ಲಿವೆ ನೋಡಿ.

      Array

      ಉಗ್ರರ ನೆಲೆ ಧ್ವಂಸಗೊಳಿಸಿದ ಭಾರತೀಯ ಸೇನೆ

      ಪಾಕಿಸ್ತಾನದ ಗಡಿಯೊಳಗೆ ಭಾರತೀಯ ಸೇನೆಯ ಯೋಧರು ನುಸುಳಿ ದಾಳಿ ನಡೆಸಿದ ಈ ವಿಡಿಯೋದಲ್ಲಿ ಉಗ್ರರ ನೆಲೆ ಧ್ವಂಸಗೊಳ್ಳುತ್ತಿರುವ ಚಿತ್ರಣವಿದೆ.

      Array

      ಸುಳ್ಳು ಎಂದಿದ್ದವರಿಗೆ ಛಾಟಿ ಏಟು!

      ಇನ್ನೆರಡು ದಿನಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ನ ಎರಡನೇ ವರ್ಷಾಚರಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಸರ್ಕಾರ ಈ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಸುಳ್ಳು ಎಂದಿದ್ದವರಿಗೆ ಈ ಮೂಲಕ ಛಾಟಿ ಏಟು ನೀಡಿದೆ.

      ಶ್ರೇಯಸ್ಸು ಯಾರಿಗೆ ಸಲ್ಲಬೇಕು?

      ಶ್ರೇಯಸ್ಸು ಯಾರಿಗೆ ಸಲ್ಲಬೇಕು?

      ಸರ್ಜಿಕಲ್ ಸ್ಟ್ರೈಕ್ ಮೂಲಕ ಜಗತ್ತಿಗೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಇತ್ತೀಚೆಗಷ್ಟೇ ಬಿಜೆಪಿ ಅಧ್ಯಕ್ಶಶ ಅಮಿತ್ ಶಅ ಹೇಳಿಕೊಂಡಿದ್ದರು. ಆದರೆ 'ಸರ್ಜಿಕಲ್ ಸ್ಟ್ರೈಕ್ ನಡೆದಿದ್ದೇ ಸುಳ್ಳು. ಅಕಸ್ಮಾತ್ ನಡೆದಿದ್ದರೂ ಆದು ಸೈನಿಕರ ಪರಿಶ್ರಮ. ಶ್ರೇಯಸ್ಸೇನಿದ್ದರೂ ಅವರಿಗೇ ಸಲ್ಲಬೇಕು. ಬಿಜೆಪಿ ಅದರ ಲಾಭ ಪಡೆಯುತ್ತಿದೆ ಎಂದು ಕಾಂಗ್ರೆಸ್ ದೂರಿತ್ತು.'

      ಚಿರತೆಯ ಮಲ-ಮೂತ್ರ ಬಳಕೆ

      ಚಿರತೆಯ ಮಲ-ಮೂತ್ರ ಬಳಕೆ

      ಸರ್ಜಿಕಲ್ ದಾಳಿ ನಡೆಸುವ ಸ್ಥಳಕ್ಕೆ ತಲುಪುವ ದಾರಿಯಲ್ಲಿ ನಾಯಿಗಳು ಬೊಗಳದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಚಿರತೆಯ ಮಲ ಮೂತ್ರಗಳನ್ನು ರಸ್ತೆಯುದ್ಧಕ್ಕೂ ಸಿಂಪಡಿಸಿದ್ದೆವು ಎಂಬ ರೋಚಕ ಮಾಹಿತಿಯನ್ನು ಇತ್ತೀಚೆಗಷ್ಟೇ ಬ್ರಿಗೆಡಿಯರ್ ಕಮ್ಯಾಂಡರ್ ಆಗಿ ಸೇವೆ ಸಲ್ಲಿದ್ದ ರಾಜೇಂದ್ರ ನಿಂಬೋರ್ಕರ್ ನೀಡಿದ್ದರು. ಆ ಭಾಗದಲ್ಲಿ ಆಗಾಗ ನಾಯಿಗಳ ಮೇಲೆ ಚಿರತೆಗಳು ದಾಳಿ ನಡೆಸುತ್ತಿದ್ದುದರಿಂದ ರಸ್ತೆಯಲ್ಲಿ ಬಿದ್ದಿದ್ದ ಚಿರತೆಯ ಮಲಮೂತ್ರಗಳನ್ನು ಕಂಡು ನಾಯಿಗಳು ಹೆದರಿ ಮರೆಯಾಗಿದ್ದವು. ಆಗ ಸೈನಿಕರು ಸುಲಭವಾಗಿ ಆ ಭಾಗದಲ್ಲಿ ಚಲಿಸುವುದಕ್ಕೆ ಸಾಧ್ಯವಾಗಿತ್ತು ಎಂಬ ಮಾಹಿತಿಯನ್ನು ಅವರು ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+