ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ಮಂಜೂರು

By Mahesh
|
Google Oneindia Kannada News

ನವದೆಹಲಿ, ಜ.20: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಮಂಗಳವಾರ ಶುಭ ಸುದ್ದಿ ಕೊಟ್ಟಿದೆ. ಓಬಳಾಪುರಂ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜಾಮೀನು ಪಡೆದು ವಾರ ಕಳೆಯುವುದರೊಳಗೆ ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು. ಒಟ್ಟು ಐದು ಅದಿರು ನಾಪತ್ತೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೆಡ್ಡಿ (ಮಕರ ರಾಶಿ) ಅವರಿಗೆ ಈಗ ನಾಲ್ಕು ಪ್ರಕರಣದಲ್ಲಿ ಬೇಲ್ ಸಿಕ್ಕಿತ್ತು. ಬಾಕಿ ಉಳಿದಿದ್ದ ಈ ಒಂದು ಪ್ರಕರಣದಲ್ಲೂ ಜಾಮೀನು ಸಿಕ್ಕಿರುವುದರಿಂದ ಜೈಲಿನಿಂದ ಹೊರಬರಲಿದ್ದಾರೆ. [ಮಕರ ರಾಶಿಗೆ ಅದೃಷ್ಟವೋ ಅದೃಷ್ಟ]

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು. [ಈ ಹಿಂದಿನ ಷರತ್ತುಗಳೇನು?]

Supreme Court grants bail to Gali janardhana Reddy

ಯಾವಾಗ ಜೈಲಿನಿಂದ ಹೊರಕ್ಕೆ?: ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರತಿ ಈಗ ಆಂಧ್ರಪ್ರದೇಶದ ಹೈಕೋರ್ಟ್ ತಲುಪಬೇಕಾಗುತ್ತದೆ. ಅಲ್ಲಿಂದ ಬಿಡುಗಡೆ ಮಾಡುವ NOC ಹಾಗೂ ಕೋರ್ಟ್ ಪ್ರತಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ತಲುಪಬೇಕು.

ಸಂಜೆಯೊಳಗೆ ಈ ಎಲ್ಲಾ ಪ್ರಕ್ರಿಯೆ ಮುಗಿದರೆ ಇಂದೇ ಗಾಲಿ ರೆಡ್ಡಿ ಜೈಲಿನಿಂದ ಹೊರಬರಲಿದ್ದಾರೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಬಹುತೇಕ ಇನ್ನೆರಡು ದಿನಗಳಲ್ಲಿ ಗಾಲಿ ರೆಡ್ಡಿ ಬಿಡುಗಡೆಯ ನಿರೀಕ್ಷೆಯಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[ಎಎಂಸಿ: ರೆಡ್ಡಿಗೆ ಷರತ್ತುಬದ್ಧ ಜಾಮೀನು]

ಸಿಬಿಐ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ವಿಧಿಸಿದ ಷರತ್ತುಗಳು: [ಗಾಲಿ ರೆಡ್ಡಿ ಆಪ್ತ, ಸಿಬಿಐ ನಿರ್ದೇಶಕರ ಭೇಟಿ ಏಕೆ?]
* ಮೂರು ತಿಂಗಳು ಯಾವುದೇ ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತಿಲ್ಲ.
* ಬೆನ್ನು ನೋವು, ಮಧುಮೇಹದಿಂದ ಬಳಲುತ್ತಿರುವ ಗಾಲಿ ರೆಡ್ಡಿ ಅವರು ಕುಟುಂಬ ಸದಸ್ಯರ ಜೊತೆ ನೆಲೆಸಬಹುದು.
* 2011ರ ಸೆ.5ರಂದು ಬಳ್ಳಾರಿಯಲ್ಲಿ ಬಂಧನಕ್ಕೊಳಪಟ್ಟಿದ್ದ
* 30 ಲಕ್ಷ ರು ಶ್ಯೂರಿಟಿ, ವೈಯಕ್ತಿಕ ಬಾಂಡ್ ಸಲ್ಲಿಕೆ.
* ಪಾಸ್ ಪೋರ್ಟ್ ಕೋರ್ಟಿಗೆ ಸಲ್ಲಿಸಬೇಕು. ಬಳ್ಳಾರಿಗೆ ತೆರಳುವಂತಿಲ್ಲ.ವಿದೇಶಕ್ಕೆ ಹಾರುವಂತಿಲ್ಲ
* ಸಾಕ್ಷಿಗಳ ನಾಶ ಪಡಿಸುವುದು, ಬೆದರಿಕೆ ಒಡ್ಡುವಂತಿಲ್ಲ.

English summary
Supreme Court granted bail to former minister Gali Janardhana Reddy in Obulapuram mining case. Former minister Gali Reddy is in Parappana Agrahara Jail Bangalore from past three and half years facing several charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X