ಗ್ಲಾಮರ್ ಗೊಂಬೆ ಸನ್ನಿ ಲಿಯೋನ್ ವಿರುದ್ಧ ಎಫ್ ಐಆರ್

Posted By:
Subscribe to Oneindia Kannada

ನವದೆಹಲಿ, ಫೆ. 09: ಬಾಲಿವುಡ್ಡಿನ 'ಬೇಬಿ ಡಾಲ್' ಸನ್ನಿ ಲಿಯೋನ್ ವಿರುದ್ಧ ಲೂಧಿಯಾನಾದಲ್ಲಿ ಪ್ರತಿಭಟನೆ ನಡೆದ ನಂತರ ಮಸ್ತಿಝಾದೆ ನಟಿಯ ಮೇಲೆ ನವದೆಹಲಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ ಐಆರ್ ಹಾಕಿದ್ದಾರೆ.

ಸನ್ನಿ ಲಿಯೋನ್ ಅಭಿನಯದ 'ಮಸ್ತಿಝಾದೆ' ಚಿತ್ರ ಪ್ರದರ್ಶನ ವಿರೋಧಿಸಿ ಬುಧವಾರ (ಫೆಬ್ರವರಿ 03) ದಂದು ಹಿಂದೂ ನ್ಯಾಯ ಪೀಠದ ಕಾರ್ಯಕರ್ತರು ಲೂಧಿಯಾನದಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಸನ್ನಿ ಲಿಯೋನ್, ವೀರ್ ದಾಸ್ ಅವರ ವಿರುದ್ಧ ದೆಹಲಿಯ ಅದರ್ಶ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.[ಮಸ್ತಿಝಾದೆ ಚಿತ್ರದ ಗ್ಯಾಲರಿ]

ದೂರು ನೀಡಿರುವ ವಕೀಲ ಗೌರವ್ ಗುಲಾಟಿ ಅವರ ಪ್ರಕಾರ, ಇಬ್ಬರು ಕಲಾವಿದರು ದೇಗುಲದ ಒಳಗೆ ಕಾಂಡೋಮ್ ಪ್ರಚಾರ ನಡೆಸುತ್ತಾ ಅಶ್ಲೀಲ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ದೇಗುಲದ ಪಾವಿತ್ರ್ಯತೆ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ದೂರಿದ್ದಾರೆ. [27 ತರಹೇವಾರಿ ಬಿಕಿನಿಯಲ್ಲಿ ಸನ್ನಿಯ ಸೊಗಸು]

Sunny Leone, Vir Das in trouble, FIR filed against both actors for condom scene in a temple

'ಮಸ್ತಿಝಾದೆ ಚಿತ್ರದ ಟ್ರೈಲರ್ ನೋಡೋಕೆ ಆಗುವುದಿಲ್ಲ. ಅದರಲ್ಲೂ ನಟಿ ಸನ್ನಿ ಲಿಯೋನ್ ವೈಯ್ಯಾರ, ಬಳುಕಾಟ ನಮ್ಮ ಯುವ ಜನತೆ ದಿಕ್ಕು ತಪ್ಪಿಸುತ್ತಿದೆ. ಈ ಚಿತ್ರದಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಸಮಾಜದ ಆರೋಗ್ಯ ಹದಗೆಡಿಸುವ ಇಂಥ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ. ಅವಾಚ್ಯ ಶಬ್ದ ಹಾಗೂ ಅಶ್ಲೀಲ ದೃಶ್ಯಗಳಿರುವ ಇಂಥ ಚಿತ್ರವನ್ನು ಸೆನ್ಸಾರ್ ಮಂಡಳಿ ಹೇಗೆ ಪಾಸ್ ಮಾಡಿದರೋ ಗೊತ್ತಿಲ್ಲ' ಎಂದು ಕಾರ್ಯಕರ್ತರು ಪ್ರಶ್ನಿಸಿದ್ದರು.

ಸೆನ್ಸಾರ್ ಬೋರ್ಡ್ ನಿಂದ 'ಎ' ಪ್ರಮಾಣ ಪತ್ರ ಪಡೆದು ಜನವರಿ 29, 2016ರಂದು ದೇಶದೆಲ್ಲೆಡೆ ಬಿಡುಗಡೆಯಾಗಿರುವ ವಯಸ್ಕರ ಕಾಮಿಡಿ ಚಿತ್ರ 'ಮಸ್ತಿಝಾದೆ' ಈಗಾಗಲೇ 20ಕೋಟಿ ರು ಗೂ ಅಧಿಕ ಮೊತ್ತ ಬಾಚಿಕೊಂಡಿದೆ.

ಚಿತ್ರದ ಪೋಸ್ಟರ್, ಟ್ರೈಲರ್ ರಿಲೀಸ್ ಆದ ದಿನದಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸೆನ್ಸಾರ್ ಮಂಡಳಿಯಲ್ಲೂ ಕೂಡಾ ಎರಡು ಬಾರಿ ರಿಜೆಕ್ಟ್ ಆಗಿತ್ತು. ಸೆಂಟರ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ ಅಥವಾ ಸಂಕ್ಷಿಪ್ತವಾಗಿ ಸೆನ್ಸಾರ್ ಬೋರ್ಡ್ ನ ಎರಡು ಸಮಿತಿಗಳಿಂದ ಮಸ್ತಿಝಾದೆ ತಿರಸ್ಕರಿಸಲ್ಪಟ್ಟು ನಂತರ ಎ ಸರ್ಟಿಫಿಕೇಟ್ ಪಡೆದು ತೆರೆ ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After protests in Ludhiana, now more trouble has come for Bollywood actress Sunny Leone as a case has been filed against her in New Delhi.
Please Wait while comments are loading...