ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಪಾಲಿಗೆ ಕಹಿಯಾಗಲಿದೆ ಸಕ್ಕರೆ

|
Google Oneindia Kannada News

ನವದೆಹಲಿ, ಜೂ.23 : ರೈಲ್ವೆ ಬೆಲೆ ಏರಿಕೆ ನಂತರ ಜನರ ಪಾಲಿಗೆ ಸಕ್ಕರೆಯೂ ಕಹಿಯಾಗುವ ಸಾಧ್ಯತೆ ಇದೆ. ಸಕ್ಕರೆ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಮದು ಸುಂಕ ಹೆಚ್ಚಾದರೆ, ಸಕ್ಕರೆ ದರವೂ 2 ರಿಂದ 3ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

ನವದೆಹಲಿಯಲ್ಲಿ ಸೋಮವಾರ ಮಾತನಾಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್, ಸಕ್ಕರೆ ಮೇಲಿನ ಆಮದು ಸುಂಕವನ್ನು ಶೇ 15 ರಿಂದ 25 ಏರಿಕೆ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ. ಆಮದು ಸುಂಕ ಹೆಚ್ಚಾದರೆ ಈಗಾಗಲೇ ಕೆಜಿಗೆ 40 ರೂ. ಆಸುಪಾಸಿನಲ್ಲಿರುವ ಸಕ್ಕರೆಯ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

Sugar

ದೇಶದ ಹಲವು ರಾಜ್ಯಗಳಲ್ಲಿ ಉತ್ಪಾದನಾ ದರಕ್ಕಿಂತಲೂ ಕಡಿಮೆ ದರದಲ್ಲಿ ಸಕ್ಕರೆಯನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಕ್ಕರೆ ಮಿಲ್‌ ಗ‌ಳು ಸಿಕ್ಕಿಹಾಕಿಕೊಂಡಿವೆ. ಇದರಿಂದಾಗಿ ಮಿಲ್‌ಗ‌ಳು ರೈತರಿಗೆ ನೀಡಬೇಕಾದ ಬಾಕಿ ಮೊತ್ತ 9000 ಕೋಟಿ ರೂ. ಮೀರಿದೆ. [ಸಕ್ಕರೆ ಬೆಲೆ ಏರಿಕೆಗೆ ರಮ್ಯಾ ಟ್ವೀಟ್ ಬಾಣ]

ಆದ್ದರಿಂದ ಕೇಂದ್ರ ಸರ್ಕಾರ ಸಕ್ಕರೆ ಸದ್ಯ ಶೇ 10ರಷ್ಟಿರುವ ಆಮದು ಸುಂಕವನ್ನು 15ಕ್ಕೆ ಏರಿಕೆ ಮಾಡಲು ಮುಂದಾಗಿದೆ. ಸುಂಕೆ ಏರಿಕೆ ಮಾಡುವ ಮೂಲಕ ವಿದೇಶದಿಂದ ಆಮದಾಗುತ್ತಿರುವ ಸಕ್ಕರೆ ಮೇಲೆ ಕಡಿವಾಣ ಹೇರುವ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಳ ಮಾಡಿದರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಹೆಚ್ಚಳವಾಗುತ್ತದೆ. ಪ್ರತಿ ಕೆಜಿಗೆ 2ರಿಂದ 3 ರೂ. ದರ ಹೆಚ್ಚಳವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ರೈಲ್ವೆ ದರ ಹೆಚ್ಚಳ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಿಸುತ್ತದೆಯೇ ಎಂದು ಕಾದು ನೋಡಬೇಕು.

ರಮ್ಯಾ ವಿರೋಧ : ಸಕ್ಕರೆ ಮೇಲಿನ ಆಮದು ಸುಂಕ ಏರಿಕೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ರಮ್ಯಾ ಅವರು ಸಕ್ಕರೆ ಬೆಲೆ ಏರಿಕೆ, ರೈತರು, ಎಥಾನಾಲ್ ಬಳಕೆ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

English summary
Sugar prices are likely yo shoot up as the Union government has increase the import duty on the product to 25 per cent. Food and Civil Supplies Minister Ram Vilas Paswan said, import duty would be hiked by 25 per cent from the current 15 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X