ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಮಸೀದಿ ಧ್ವಂಸ ಸಂಭ್ರಮಾಚರಣೆ ಬೆಂಬಲಿಸಿದ ಸ್ವಾಮಿ!

|
Google Oneindia Kannada News

ನವದೆಹಲಿ, ಡಿಸೆಂಬರ್ 06: "ಬಾಬ್ರಿ ಮಸೀದಿ ಧ್ವಂಸವಾದ ದಿನ(1992, ಡಿಸೆಂಬರ್ 06)ವನ್ನು 'ಸಂಭ್ರಮದಿಂದ ಆಚರಿಸುವ' ವಿಶ್ವ ಹಿಂದು ಪರಿಷತ್ ಕ್ರಮವನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸ್ವಾಗತಿಸಿದ್ದಾರೆ. ಆದರೆ ಈ ಸಂಭ್ರಮಾಚರಣೆಯೂ 'ಶಾಂತಿಯುತ ಹಾದಿಯಿಂದ ನಡೆಯಬೇಕು' ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಬಾಬ್ರಿ ಮಸೀದಿ ಧ್ವಂಸ ದಿನವನ್ನು ಸಂಭ್ರಮಿಸುವ ಅಧಿಕಾರ ವಿಎಚ್ ಪಿ ಗೆ ಇದೆ. ಏಕೆಂದರೆ 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಚಳವಳಿಯ ಮುಂದಾಳತ್ವ ವಹಿಸಿದ್ದವರಲ್ಲಿ ಅವರೇ ಪ್ರಮುಖರು. ಅಷ್ಟಕ್ಕೂ ಅಯೋಧ್ಯೆಯ ಆ ಜಾಗದಲ್ಲಿ ಇದ್ದಿದ್ದು ರಾಮ ಮಂದಿರ. ಅದು ರಾಮ ಜನ್ಮಭೂಮಿ. ಅಲ್ಲಿ ಆಬರ್ ದೇವಾಲಯವನ್ನು ಕೆಡವಿ, ಮಸೀದಿ ನಿರ್ಮಿಸಿದ. ಆ ಸಂದರ್ಭದಲ್ಲಿ 4000-5000 ಜನರನ್ನು ಕೊಲ್ಲಲಾಯಿತು ಎನ್ನಲಾಗುತ್ತದೆ. ಅಂಥ ಮಸೀದಿಯನ್ನು ಕೆಡವಲಾಯಿತು. ಅದನ್ನು ವಿಎಚ್ ಪಿ ಆಚರಿಸುವುದು ತಪ್ಪಲ್ಲ, ಆದರೆ ಅದು ಶಾಂತಿಯುತ ಹಾದಿಯಲ್ಲಿ ನಡೆಯಬೇಕಷ್ಟೆ" ಎಂದು ಸ್ವಾಮಿ ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸವಾಗಿ 26 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಬಾಬ್ರಿ ಮಸೀದಿ ಧ್ವಂಸವಾಗಿ 26 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ವಿಎಚ್ ಪಿಯು ಬಾಬ್ರಿ ಮಸೀದಿ ಧ್ವಂಸವಾದ ಡಿಸೆಂಬರ್ 6 ಅನ್ನು ದೇಶದಾದ್ಯಂತ 'ಶೌರ್ಯ ದಿನ'ವನ್ನಾಗಿ ಆಚರಿಸುತ್ತದೆ.

Subramanian swamy supports VHP for celebrating Babri Masjid demolition

25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್

ಬಾಬ್ರಿ ಮಸೀದಿ ದ್ವಂಸವಾಗಿ ಇಂದಿಗೆ 26 ವರ್ಷಗಳು ಸಂದಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆಯೂ ಕೇಂದ್ರ ಸರ್ಕಾರ ಚಿಂತಿಸುತ್ತಿರುವ ಕಾರಣ ಈ ಬಾರಿ ಅಯೋಧ್ಯೆಯಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.

English summary
BJP leader Subramanian Swamy supports VHP(Vishwa Hindu Parishat) for celebrating Babri demolition anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X