ಮಾಯಾವತಿ ನಿರ್ಧಾರ ಬೆಂಬಲಿಸಿದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ, ಅಕ್ಟೋಬರ್ 04: ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ ನಡೆಯನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಬೆಂಬಲಿಸಿದ್ದಾರೆ.

"ಸ್ವತಂತ್ರವಾಗಿ ಸ್ಪರ್ಧಿಸುವ ಮಾಯಾವತಿಯವರ ನಿರ್ಧಾರ ಸ್ವಾಗತಾರ್ಹ. ಅವರಿಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಒಳ್ಳೆಯ ಜನಬೆಂಬಲವಿದೆ. ಒಂಟಿಯಾಗಿ ಸ್ಪರ್ಧಿಸುವ ಸಾಮರ್ಥ್ಯ ಅವರಿಗಿದೆ" ಎಂದು ಸ್ವಾಮಿ ಹೇಳಿದರು.

'ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಯಾರೂ ದಿಕ್ಕಿಲ್ಲ. ಅವರ ಎಲ್ಲಾ ನಾಯಕರ ಮೇಲೂ ನಾನೇ ಪ್ರಕರಣ ದಾಖಲು ಮಾಡಿದ್ದೇನೆ! ಕಾಂಗ್ರೆಸ್ ಪಕ್ಷವೀಗ ನಾಯಕರ ಪಕ್ಷವಾಗಿ ಉಳಿದಿಲ್ಲ, ಜೋಕರ್ ಗಳ ಪಕ್ಷವಾಗಿದೆ. ಇವೆಲ್ಲವೂ ಗೊತ್ತಾಗಿದ್ದರಿಂದಲೇ ಮಾಯಾವತಿ ಕಾಂಗ್ರೆಸ್ ನಿಂದ ದೂರವುಳಿದರು' ಎಂದು ಅವರು ಅಭಿಪ್ರಾಯಪಟ್ಟರು.

Subramanian Swamy supports Mayawatis decision

ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಗೆ ಕಾಂಗ್ರೆಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ಬುಧವಾರದಂದು ಸ್ಪಷ್ಟಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+