'ಪೊರಕೆ ಹಿಡಿದು 19 ಕೋಟಿ ಸಂಗ್ರಹಿಸಲು ಸಾಧ್ಯವೇ?'
ನವದೆಹಲಿ, ನ.12: ಆಮ್ ಆದ್ಮಿ ಪಕ್ಷದ ನಿಧಿ ಸಂಗ್ರಹದ ವಿರುದ್ಧ ತನಿಖೆ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಆದೇಶಿದಿದ ಬೆನ್ನಲ್ಲೇ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರು ತನಿಖೆಗೆ ಆಗ್ರಹಿಸಿದ್ದಾರೆ.
ಪೊರಕೆ ಹಿಡಿದು ತಿರುಗಾಡುವ ಮೂಲಕ 19 ಕೋಟಿ ರು ಸಂಗ್ರಹ ಸಾಧ್ಯವೇ? ಆಮ್ ಆದ್ಮಿ ಪಕ್ಷಕ್ಕೆ ಬಂದಿರುವ ದೇಣಿಗೆಗಳ ವಿವರ ಲಭ್ಯವಿದ್ದರೂ ದೇಣಿಗೆ ಯಾವ ಮೂಲದಿಂದ ಬಂದಿದೆ ಎಂಬುದರ ಬಗ್ಗೆ ಪಾರದರ್ಶಕತೆ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ತನಿಖೆ ನಡೆಸಲು ಒಪ್ಪಲೇ ಬೇಕು ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
ಅರವಿಂದ್ ಅವರು 13ಕ್ಕೂ ಅಧಿಕ ದೇಶಗಳ ಹೆಸರುಗಳನ್ನು ನೀಡಿದ್ದಾರೆ ಹೊರತೂ ಅಲ್ಲಿಂದ ಯಾರು ಇವರ ಪಕ್ಷಕ್ಕೆ ಹಣ ನೀಡಿದರು ಎಂಬುದರ ಮಾಹಿತಿ ನೀಡಿಲ್ಲ. ಇದು ಸಂಶಯಕ್ಕೆ ಎಡೆಮಾಡಿದೆ. ಸತ್ಯ ಎಂದಿದ್ದರೂ ಹೊರ ಬರಲೇ ಎಂದಿದ್ದಾರೆ.

ಗೃಹ ಸಚಿವಾಲಯದ ತನಿಖೆಯನ್ನು ಸ್ವಾಗತಿಸಿರುವ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪಾರ್ಟಿ ಫಂಡ್ ಮೂಲಗಳ ಬಗ್ಗೆ ಮೊದಲಿಗೆ ತನಿಖೆಯಾಗಲಿ. ಆಮ್ ಆದ್ಮಿ ಪಕ್ಷದ ಮೇಲೆ ಮಾತ್ರ ಏಕೆ? ಎಂದು ಪ್ರಶ್ನಿಸಿದ್ದಾರೆ.
ನವದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಪಕ್ಷಕ್ಕೆ ಹರಿದು ಬಂದಿರುವ ಆದಾಯ ಮತ್ತು ಖಾತೆಯ ವಿವರಗಳ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಸ್ಪ್ರರ್ಧಿಸಿ ಮುಕ್ತ ಆಡಳಿತ ನೀಡುವುದಕ್ಕಾಗಿ ಸಮಾಜದ ಎಲ್ಲ ಸ್ತರಗಳಿಂದ ದೇಣಿಗೆ ಸ್ವೀಕರಿಸಲಾಗಿದೆ. ನೆರವು ನೀಡಿದವರಲ್ಲಿ ಹೆಚ್ಚಿನವರು ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. 6.20 ಕೋಟಿ ರೂ. ಭಾರತೀಯರು, ಉಳಿದಂತೆ ಅಮೆರಿಕ, ಹಾಂಕಾಂಗ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಅರಬ್ ಸಂಯುಕ್ತ ರಾಷ್ಟ್ರಗಳಿಂದ ದೇಣಿಗೆ ಬಂದಿರುವುದಾಗಿ ಆಮ್ ಆದ್ಮಿ ಪಕ್ಷ ಹೇಳಿತ್ತು.
ಮುಂಬರುವ ಚುನಾವಣೆಗಾಗಿ 20 ಕೋಟಿ ರೂ. ಸಂಗ್ರಹಿಸುವ ಗುರಿಯಿದೆ. ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಮೂಲಕ ಜನರ ಜತೆ ಸಂಪರ್ಕ ಸಾಧಿಸಲಾಗುತ್ತಿದೆ" ಎಂದು ಕೇಜ್ರಿವಾಲ್ ಹೇಳಿದ್ದರು. ದೇಣಿಗೆ ಬಗ್ಗೆ ಮೊದಲ ಹೇಳಿಕೆ ಇಲ್ಲಿದೆ












Click it and Unblock the Notifications