ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಭಾರಿ ಮಳೆ, ರಸ್ತೆಗಳು ಜಲಾವೃತ, ಮುಂದಿನ 3 ದಿನ ಮಳೆ ಮುಂದುವರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ.

ರಾಜಧಾನಿ ದೆಹಲಿ ಅಕ್ಷರಶಃ ಮಳೆ ನೀರಲ್ಲಿ ತೊಯ್ದು ತೊಪ್ಪೆಯಾಗಿದೆ. ಬುಧವಾರ ಸುರಿದ ವಿಪರೀತ ಮಳೆಯಿಂದ ಬೆಳಗಿನ ಜನ ಓಡಾಟದ ಅವಧಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ರಾಜಧಾನಿ ಹಾಗೂ ನೆರೆಯ ಗುರ್‌ಗಾಂವ್ ಹಾಗೂ ನೋಯ್ಡಾಗಳಲ್ಲಿನ ಅನೇಕ ಭಾಗಗಳಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಫ್ಲೈ ಓವರ್‌ಗಳು ನದಿಯಂತಾಗಿ ರಭಸದಿಂದ ನೀರು ಸಾಗಿಸುತ್ತಿದ್ದರೆ, ಅನೇಕ ರಸ್ತೆಗಳು, ವಸತಿ ಪ್ರದೇಶಗಳು ಕೆರೆಯಂತಾಗಿದ್ದವು. ಮನೆಗಳ ಒಳಗೆ ನೀರು ನುಗ್ಗಿದ ಪರಿಣಾಮ ಜನರು ಏನು ಮಾಡುವುದೆಂದು ತೋಚದೆ ದಿಕ್ಕೆಟ್ಟರು. ಮನೆ, ಅಂಗಡಿಗಳಿಂದ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ. ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂತಾದವು ನೀರು ನುಗ್ಗಿ ಹಾಳಾಗಿವೆ. ಕಟ್ಟಡದೊಳಗೆ ತುಂಬಿದ ಕೆಸರು ನೀರನ್ನು ಹೊರಹಾಕಲು ಹರಸಾಹಸ ಮಾಡುವಂತಾಗಿದೆ.

 Streets Flooded, Massive Traffic Jams As Delhi Receives Highest Rain

ರಾಜ್‌ಘಾಟ್‌ಗೆ ತೆರಳುವ ಯಮುನಾ ಸೇತುವೆ ಪ್ರದೇಶದಲ್ಲಿ ನೀರು ತುಂಬಿದ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ಬಹಳ ನಿಧಾನಗತಿಯ ಸಂಚಾರ ಕಂಡುಬಂದಿದೆ.

1963ರ ಸೆಪ್ಟೆಂಬರ್ 16ರಂದು ಸುರಿದ 172.6 ಮಿಮೀ ಮಳೆ ಸಾರ್ವಕಾಲಿಕ ದಾಖಲೆಯಾಗಿದೆ. ಬುಧವಾರ ಬೆಳಿಗ್ಗೆ 8.30ರ ಬಳಿಕ ಕೇವಲ ಮೂರು ಗಂಟೆಯಲ್ಲಿ 75.6 ಮಿಮೀ ಮಳೆಯಾಗಿದೆ. ಇಡೀ ತಿಂಗಳ ವಾಡಿಕೆ ಮಳೆ ಮೊದಲ ಎರಡು ದಿನಗಳಲ್ಲಿಯೇ ಸುರಿದಿದೆ ಎಂದು ಐಎಂಡಿ ತಿಳಿಸಿದೆ.

ಗುರ್‌ಗಾಂವ್‌ನಲ್ಲಿ ಕೂಡ ಇದೇ ರೀತಿಯ ಸನ್ನಿವೇಶ ಉಂಟಾಗಿದೆ. ಇಲ್ಲಿ ಕಳೆದ 24 ಗಂಟೆಗಳಲ್ಲಿ 64.2 ಮಿಮೀ ಮಳೆ ಸುರಿದಿದೆ. ರಸ್ತೆಗಳು, ಮಾರುಕಟ್ಟೆಗಳು ಜಲಾವೃತವಾಗಿವೆ. ರಾಜಧಾನಿಯಲ್ಲಿ 2002ರ ಸೆಪ್ಟೆಂಬರ್ 13ರಂದು 126.8 ಮಿಮೀ ಮಳೆ ಸುರಿದಿತ್ತು.

ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಿಗ್ಗೆ 8.30ರ ಅವಧಿಯಲ್ಲಿ ದಿಲ್ಲಿಯಲ್ಲಿ 112.1 ಮಿಮೀ ಮಳೆ ಸುರಿದಿದೆ. ಇದು ಕಳೆದ 12 ವರ್ಷಗಳಲ್ಲಿಯೇ ಅತ್ಯಧಿಕವಾಗಿದ್ದರೆ, ಸೆಪ್ಟೆಂಬರ್ ತಿಂಗಳ ಮಳೆ ದಾಖಲೆಗಳಲ್ಲಿ ಕಳೆದ 19 ವರ್ಷಗಳಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ದಿಲ್ಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದೆಹಲಿಯಲ್ಲಿ ಬೆಳಗ್ಗೆ 8 ಗಂಟೆವರೆಗೆ 75.6 ಮಿ.ಮೀ ಮಳೆಯಾಗಿದೆ.

English summary
Visuals of submerged streets, massive traffic jams flooded social media as Delhi received record rainfall on Wednesday, the highest single-day precipitation in September in nearly two decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X