ರಾಹುಲ್ ಗಾಂಧಿಗೆ ರಾಜೀವ್ ಚಂದ್ರಶೇಖರ್ ಬಹಿರಂಗ ಪತ್ರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ನವೆಂಬರ್ 4: ರಾಮ್ ಕಿಶನ್ ಗ್ರೇವಾಲ್ ಆತ್ಮಹತ್ಯೆ ನಂತರ ಭಾರತೀಯರಲ್ಲಿ ಸಿಟ್ಟೊಂದು ಮೂಡಿದೆ. ಈ ಮಧ್ಯೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಅಂತ ವಂದಿ ಮಾಗಧರ ಜತೆಗೆ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಹೋಗಿದ್ದಾರೆ.

ಎಲ್ಲೆಲ್ಲೂ ಒಂದೇ ಕೂಗು 'ರಾಹುಲ್ ಗಾಂಧಿಗೆ ಜೈ'. ಆ ಆಸ್ಪತ್ರೆಯಲ್ಲೋ ರೋಗಿಗಳು, ದುಃಖದಿಂದ ಇದ್ದ ಕುಟುಂಬಗಳು. ಇದೇನಾ ಹಿರಿಯರ ಬಗ್ಗೆ ಕಾಳಜಿ ತೋರುವ ವಿಧಾನ...ಪ್ರಶ್ನೆ ಹೀಗೆ ಶುರುವಾಗುತ್ತದೆ. ಅಂದಹಾಗೆ, ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಅವರು ಏಕ ಶ್ರೇಣಿ-ಏಕ ಪಿಂಚಣಿ ಬಗ್ಗೆ ರಾಹುಲ್ ಗಾಂಧಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಸಂಸತ್ತಿಗೆ ರಾಜೀವ್ ಚಂದ್ರಶೇಖರ್ ಮೊದಲ ಸಲ ಕಾಲಿಟ್ಟಿದ್ದು 2006ರಲ್ಲಿ. ಅಗ ಯುಪಿಎ-1ರ ಆಡಳಿತಾವಧಿ. ಆಗಿನಿಂದ ಏಕ ಶ್ರೇಣಿ-ಏಕ ಪಿಂಚಣಿ ಜಾರಿಗಾಗಿ ಆಗ್ರಹಿಸುತ್ತಲೇ ಇದ್ದಾರೆ. ಅದಾದ ನಂತರ ಯುಪಿಎ-2 ಬಂತು. ಹಲವು ಸಾರಿ ಈ ಬಗ್ಗೆ ಪತ್ರ ಬರೆದು, ಆಗಿನ ಪ್ರಧಾನಿ, ರಕ್ಷಣಾ ಸಚಿವರು, ಯುಪಿಎ ಅಧ್ಯಕ್ಷೆ ಎಲ್ಲರನ್ನೂ ಏಕ ಶ್ರೇಣಿ-ಏಕ ಪಿಂಚಣಿ ಜಾರಿಗೆ ಕೇಳಿಕೊಂಡರೂ ಬದಲಿಗೆ ಸಿಕ್ಕಿದ್ದು 'ಅದು ಅಗಲ್ಲ' ಎಂಬ ಉತ್ತರ ಅಥವಾ ಕಲ್ಲಿನಂಥ ಮೌನ.

ಇದಕ್ಕಾಗಿ ಕೋಷಿಯಾರಿ ನೇತೃತ್ವದಲ್ಲಿ ಸಂಸತ್ ಸಮಿತಿಯೇ ರಚಿಸಿ, ಅರ್ಜಿಯನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿದವರಲ್ಲಿ ಮುಖ್ಯವಾಗಿದ್ದವರು ರಾಜೀವ್ ಚಂದ್ರಶೇಖರ್. ಅ ವರದಿಯನ್ನು 2011ರಲ್ಲಿ ಸಲ್ಲಿಸಲಾಯಿತು. ಅದನ್ನು ಕೂಡ ಯುಪಿಎ ಸರಕಾರ ನಿರ್ಲಕ್ಷ್ಯ ಮಾಡಿತು.

ಅಷ್ಟೆಲ್ಲ ಯಾಕೆ, 2011ರಲ್ಲಿ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಬಗ್ಗೆ ಹಾಗೂ ಶಸ್ತ್ರಸಜ್ಜಿತ ಪಡೆಗೆ ಇರುವ ಸಮಸ್ಯೆಗಳ ಬಗ್ಗೆ ಪತ್ರ ಬರೆಯಲಾಗಿತ್ತು. ಉಹುಂ, ಯಾವುದಕ್ಕೂ ಉತ್ತರ ಬರಲಿಲ್ಲ. 'ಆಗ ನಿಮಗೆ ಆ ವಿಚಾರದಲ್ಲಿ ಈಗಿರುವಂಥ ರಾಜಕೀಯ ಆಸಕ್ತಿ ಇರಲಿಲ್ಲ ಅನಿಸುತ್ತೆ. ಆ ಸಮಸ್ಯೆ ಹೆಸರಿಸೋದಿಕ್ಕೆ ನಿಮಗೆ ವರ್ಷಗಳು ಬೇಕಾದವು. ಅದೂ ಎಲೆಕ್ಷನ್ ಮುಂಚೆ ಸುಮ್ಮನೆ ತೋರಿಕೆಗಾಗಿ' ಎಂದು ರಾಜೀವ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾರೆ.

ಇನ್ನು ರಾಜೀವ್ ಚಂದ್ರಶೇಖರ್ ಅವರ ಪತ್ರದಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳು ಹೀಗಿವೆ.

500 ಕೋಟಿ ಸಾಕಾ?

500 ಕೋಟಿ ಸಾಕಾ?

ನಾನು ಬರೆದ ಪತ್ರಗಳೆಲ್ಲ ಯಾವ ಕಾಲದವು, ನಿಮ್ಮ ನಿರ್ಧಾರ ಎಷ್ಟು ನಿಧಾನವಾಗುತ್ತಿದೆ ಎಂದು ನಿಮಗೆ ನೆನಪಿಸಿ, ಇನ್ನೂ ತಡವಾದರೆ ಎಂತಹ ಸಮಸ್ಯೆ ಆಗುತ್ತೆ ಎಂದು ಗಮನಕ್ಕೆ ತಂದಿದ್ದೆ. ಯುಪಿಎ ಸರಕಾರ ಚುನಾವಣೆಗೆ ಮುಂಚೆ ಆತುರಾತುರವಾಗಿ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಘೋಷಿಸಿತು. ಅದಕ್ಕೆ ನಿಮ್ಮ ಹಣಕಾಸು ಸಚಿವರು ಎತ್ತಿಟ್ಟ ಮೊತ್ತ ಐನೂರು ಕೋಟಿ ರುಪಾಯಿ-ತಮಾಷೆ ಅಂದರೆ ಆ ಹಣದಲ್ಲಿ ಶೇ 10ರಷ್ಟು ಪೆನ್ಷನ್ ದಾರರಿಗೂ ಏನೂ ಕೊಡಕ್ಕೆ ಆಗಲ್ಲ.

ಆರ್ಥಿಕ ಹೊರೆ, ಜಾರಿಯಾಗಲ್ಲ

ಆರ್ಥಿಕ ಹೊರೆ, ಜಾರಿಯಾಗಲ್ಲ

ವಿತ್ತ ಸಚಿವಾಲಯದ ಆಕ್ಷೇಪದ ಮಧ್ಯೆಯೂ ಒಂದು ವರ್ಷಕ್ಕೆ ಅಗುವ 8,300 ಕೋಟಿ ಹೊರೆ ಮತ್ತು ಒಂದು ಸಲಕ್ಕೆ ಎದುರಾಗುವ 20 ಸಾವಿರ ಕೋಟಿ ಭಾರವನ್ನು ಹೊತ್ತುಕೊಂಡ ಈಗಿನ ಸರಕಾರ, ನಾಲ್ಕು ದಶಕಗಳ ಅನ್ಯಾಯವನ್ನು ಸರಿಪಡಿಸುತ್ತಿದೆ. ಇಂದಿರಾಗಾಂಧಿ, ಸೋನಿಯಾ ಗಾಂಧಿ ಯಾರೂ ಸಮಸ್ಯೆ ಬಗೆಹರಿಸಲಿಲ್ಲ. ಅಷ್ಟೇ ಯಾಕೆ, 2004ರಲ್ಲಿ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಕಾಂಗ್ರೆಸ್ ನ ಚುನಾವಣೆ ಪ್ರಣಾಳಿಕೆಯಲ್ಲೇ ಇತ್ತು. ಆದರೆ ಆ ಇಡೀ ಅವಧಿಗೆ ಹಾಗೂ ಆ ನಂತರವೂ ಏನೂ ಮಾಡಲಿಲ್ಲ.

3,500 ಕೋಟಿಗೂ ಹೆಚ್ಚು ಹೊರೆ

3,500 ಕೋಟಿಗೂ ಹೆಚ್ಚು ಹೊರೆ

2008ರಲ್ಲಿ ಆಗಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿಕೆ ನೀಡಿದರು: ಯುಪಿಎ ಸರಕಾರ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಒಪ್ಪಲು ಆಗಲ್ಲ. ಯುಪಿಎ ಸರಕಾರ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಬೇಡಿಕೆಯನ್ನೇ ತಿರಸ್ಕರಿಸಿತು. ಅದಕ್ಕೆ ಕೊಟ್ಟ ಕಾರಣ 3,500 ಕೋಟಿಗೂ ಹೆಚ್ಚು ಹೊರೆ ಬೀಳುತ್ತೆ.

ಯಾರೂ ಮಾತನಾಡಲಿಲ್ಲ

ಯಾರೂ ಮಾತನಾಡಲಿಲ್ಲ

ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಆಗಲಿಲ್ಲ ಎಂಬ ಕಾರಣಕ್ಕೆ ಡಿಸೆಂಬರ್ 2008ರಲ್ಲಿ ಆ ಹಿರಿಯರು ಜಂತರ್ ಮಂತರ್ ನಲ್ಲಿ ಉಪವಾಸ ಕುಳಿತರು ಅಥವಾ ರಾಷ್ಟ್ರಪತಿ ಭವನಕ್ಕೆ ಪಾದಯಾತ್ರೆ ಮಾಡಿ ತಮ್ಮ ಪದಕಗಳನ್ನೆಲ್ಲ ಹಿಂತಿರುಗಿಸಿದರಲ್ಲಾ 2009ರಲ್ಲಿ, ಆಗ ರಾಹುಲ್ ಆಗಲಿ ಅಥವಾ ಇನ್ಯಾರೇ ಕಾಂಗ್ರೆಸ್ ನಾಯಕರಾಗಲಿ ಅವರನ್ನು ಬೆಂಬಲಿಸಿ ಒಂದು ಪದ ಆಡಲಿಲ್ಲ, ಏನೂ ಮಾಡಲೂ ಇಲ್ಲ.

ಕೋಷಿಯಾರಿ ಸಮಿತಿ ವರದಿ

ಕೋಷಿಯಾರಿ ಸಮಿತಿ ವರದಿ

ಏಕ ಶ್ರೇಣಿ-ಏಕ ಪಿಂಚಣಿ ಜಾರಿಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಿರಾಕರಿಸಿದಾಗ ರಾಜೀವ್ ನೇತೃತ್ವದಲ್ಲಿ ನಾಗರಿಕರು ಹಾಗೂ ಹಿರಿಯರು ಸಮಿತಿಗೆ ಅರ್ಜಿ ಹಾಕಿದ್ದರಿಂದ ಕೋಷಿಯಾರಿ ಸಮಿತಿ ರಚನೆಯಾಗಿ, 2011ರಲ್ಲಿ ವರದಿ ಸಂಸತ್ ನಲ್ಲಿ ಇಡಲಾಯಿತು. ಅದಕ್ಕೆ ಯುಪಿಎ ಸರಕಾರದ ಪ್ರತಿಕ್ರಿಯೆ: 'ಆಡಳಿತಾತ್ಮಕ, ಆರ್ಥಿಕ ಹಾಗೂ ಕಾನೂನಾತ್ಮಕ ಸಮಸ್ಯೆಗಳಿವೆ. ಆದ್ದರಿಂದ ಏಕ ಶ್ರೇಣಿ-ಏಕ ಪಿಂಚಣಿ ಜಾರಿ ಸಾಧ್ಯವಿಲ್ಲ'.

ವೇತನ ತಗೊಳಲ್ಲ

ವೇತನ ತಗೊಳಲ್ಲ

ಏಕ ಶ್ರೇಣಿ-ಏಕ ಪಿಂಚಣಿ ಸಮಸ್ಯೆ ಇತ್ಯರ್ಥ ಆಗುವವರೆಗೆ ಸಂಸದರಿಗೆ ಮಾಡಿದ ವೇತನ ಹೆಚ್ಚಳವನ್ನು ತೆಗೆದುಕೊಳ್ಳುವುದಿಲ್ಲ ಎಂದು 2010ರ ಆಗಸ್ಟ್ ನಲ್ಲಿ ರಾಜೀವ್ ಚಂದ್ರಶೇಖರ್ ಘೋಷಿಸಿದ್ದರು,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajeev Chandrashekhar, Rajya sabha member wrote open letter to AICC Vice president Rahul Gandhi regarding OROP. Stated that, Stop political oppotunism over OROP, wrote five letters to Congress on OROP, got no response.
Please Wait while comments are loading...