ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿ ಸೋನಿಯಾ 3 ಸೀಕ್ರೆಟ್ ಬ್ಯಾಂಕ್ ಖಾತೆ!

|
Google Oneindia Kannada News

ನವದೆಹಲಿ, ಏ. 19 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಗಳಲ್ಲಿ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಕೆಲವು ದಿನಗಳ ಹಿಂದೆ 10 ಬಿಲಿಯನ್ ಹಣವನ್ನು ಪಡೆದಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಆರೋಪಿಸಿದ್ದಾರೆ.

ಇಷ್ಟು ದಿನ ಸೋನಿಯಾ ಗಾಂಧಿ ಅಳಿಯ ರಾರ್ಬಟ್ ವಾದ್ರಾ ವಿರುದ್ಧ ಆರೋಪ ಮಾಡುತ್ತಿದ್ದ ಸ್ವಾಮಿ ಸದ್ಯ ಸೋನಿಯಾ ಗಾಂಧಿ ಅವರ ವಿರುದ್ಧವೇ ಆರೋಪ ಮಾಡಲು ಆರಂಭಿಸಿದ್ದಾರೆ. ಗೌಹಾತಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸುಬ್ರಮಣ್ಯ ಸ್ವಾಮಿ, ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಇಂತಹ ಆರೋಪ ಮಾಡಿದ್ದಾರೆ.

Subramanian Swamy

ಸೋನಿಯಾ ಗಾಂಧಿ ಅವರು ವಿದೇಶದಲ್ಲಿ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಈ ಖಾತೆಗಳಲ್ಲಿ 1.5 ಲಕ್ಷ ಕೋಟಿ ಹಣವಿದೆ. ಕೆಲವು ದಿನಗಳ ಹಿಂದೆ ವ್ಯಾಟಿಕನ್ ನಲ್ಲಿರುವ ಬ್ಯಾಂಕಿನಿಂದ 10 ಬಿಲಿಯನ್ ಹಣ ಪಡೆದಿದ್ದಾರೆ ಎಂಬುದು ಸ್ವಾಮಿ ಅವರ ಆರೋಪ. [ಸೋನಿಯಾ ಗಾಂಧಿ ಆಸ್ತಿ ಎಷ್ಟು?]

ವಿದೇಶದ ಬ್ಯಾಂಕುಗಳಲ್ಲಿ ಸೋನಿಯಾ ಗಾಂಧಿ ಖಾತೆ ಹೊಂದಿದ್ದಾರೆ. ವ್ಯಾಟಿಕನ್, ಸಿಟ್ಜರ್ ಲ್ಯಾಂಡ್ ಮತ್ತು ಜುರಿಚ್ ಗಳಲ್ಲಿ ಅವರ ಬ್ಯಾಂಕ್ ಖಾತೆಗಳಿವೆ ಎಂದು ಸುಬ್ರಮಣ್ಯಸ್ವಾಮಿ ಆರೋಪಿಸಿದ್ದಾರೆ. ದೇಶದ 120 ಲಕ್ಷ ಕೋಟಿ ಹಣ ವಿದೇಶದಲ್ಲಿ ಇಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಇದನ್ನು ವಾಪಸ್ ತರುವುದಾಗಿ ಅವರು ಸ್ವಾಮಿ ಹೇಳಿದರು.

ಸೋನಿಯಾ, ರಾಹುಲ್, ಪ್ರಿಯಾಂಕ, ವಾದ್ರಾ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಕಳೆದವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು, ರಾರ್ಬಟ್ ವಾದ್ರಾ ಭೂ ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.

ಅಂದಹಾಗೆ ಏ.3ರಂದು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ಬಳಿ 9.28 ಕೋಟಿ ಆಸ್ತಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ತಮ್ಮ ಬಳಿ ಸ್ವಂತದ್ದೊಂದು ಕಾರೂ ಇಲ್ಲ. ಪುತ್ರ ರಾಹುಲ್ ಗಾಂಧಿ ಅವರಿಗೇ 9 ಲಕ್ಷವನ್ನು ನೀಡಿದ್ದೇನೆ ಎಂದು ಹೇಳಿದ್ದರು.

English summary
BJP leader Subramanian Swamy has accused Congress president Sonia Gandhi of possessing three secret foreign bank accounts and that she has recently withdrawn $10 billion from a bank based in Vatican.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X