ಸೋನಿಯಾ ರಕ್ಷಣಾ ಸಿಬ್ಬಂದಿ ದಯನೀಯ ಸ್ಥಿತಿಯಲ್ಲಿ ಪತ್ತೆ

Posted By:
Subscribe to Oneindia Kannada

ನವದೆಹಲಿ, ಸೆ. 07: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಕ್ಷಣೆಗಾಗಿ ನಿಯೋಜಿತರಾಗಿದ್ದ ಎಸ್​ಪಿಜಿ ಯೋಧ ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಸುದ್ದಿ ಓದಿರುತ್ತೀರಿ. ಈಗ ಈ ಯೋಧ ದೆಹಲಿಯಲ್ಲಿ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ದೆಹಲಿಯ ತಿಲಕ್​ ಮಾರ್ಗ್​ ಬಳಿ ಆಹಾರ, ನೀರು ಬೇಡುವ ಸ್ಥಿತಿಯಲ್ಲಿ ರಕ್ಷಣಾ ಸಿಬ್ಬಂದಿ ರಾಕೇಶ್ ಕುಮಾರ್ ಕಂಡು ಬಂದಿದ್ದಾರೆ.

Sonia Gandhi’s missing SPG commando found

ರಾಕೇಶ್ ಬಳೀ ಎಸ್​ಪಿಜಿ ಕಮ್ಯಾಂಡೋ ಐಡಿ ಕಾರ್ಡ್​ ಇರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಬಂದು ವಿಚಾರಿಸಿದಾಗ, ಈತನೇ ರಾಕೇಶ್ ಕುಮಾರ್ ಎಂಬುದು ಸಾಬೀತಾಗಿದೆ.

ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಕೇಶ್ ಅವರು ಸುಮಾರು 4 ಲಕ್ಷ ರು ಸಾಲ ಪಡೆದಿದ್ದರು. ಆಗಸ್ಟ್ 31ರಂದು ಸಾಲದ ಕಂತು 40 ಸಾವಿರ ರೂಪಾಯಿ ಪಾವತಿಸಬೇಕಿತ್ತು. ಆದರೆ, ತನ್ನ ಬಳಿ ಹಣ ಇಲ್ಲದಿರುವುದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಒದ್ದಾಡಿದ್ದಾರೆ.

ಸೋನಿಯಾ ಗಾಂಧಿ ಅವರ 10, ಜನಪಥ ನಿವಾಸದಲ್ಲಿ ಭದ್ರತೆಗಾಗಿ ನಿಯೋಜಿಸಿದ ಸಿಬ್ಬಂದಿಗಳ ಪೈಕಿ ರಾಕೇಶ್ ಕುಮಾರ್ ಕೂಡಾ ಒಬ್ಬರು. ಸೆಪ್ಟೆಂಬರ್​ 1 ರಂದು ಕರ್ತವ್ಯಕ್ಕೆ ಹಾಜರಾಗಿ ನಂತರ ಹೊರಗೆ ಹೋದವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ಫೋನ್ ಕಚೇರಿಯಲ್ಲೇ ಬಿಟ್ಟಿದ್ದರು. ರಾಕೇಶ್ ಕುಮಾರ್ ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rakesh Kumar, a Special Protection Group (SPG) commando from Congress president Sonia Gandhi's security cover, was reported missing, the Delhi police found him roaming around in Delhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ