ಆಸ್ತಿ ವ್ಯಾಜ್ಯದಲ್ಲಿ ತಂದೆಯೊಂದಿಗೆ ಜಗಳ ಮಾಡಿ, ಕೊಂದು- ಇಪ್ಪತ್ತೈದು ತುಂಡು ಮಾಡಿದ ಮಗ

ನವದೆಹಲಿ, ಮೇ 22: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೇ ಹತ್ಯೆ ಮಾಡಿದ ಆರೋಪದಲ್ಲಿ ಇಪ್ಪತ್ತೆರಡು ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಮಾನ್ ಕುಮಾರ್ ಬಂಧಿತ. ಆತ ತನ್ನ ತಂದೆಯನ್ನು ಕೊಂದು, ದೇಹವನ್ನು ಇಪ್ಪತ್ತೈದು ತುಂಡುಗಳಾಗಿ ಕತ್ತರಿಸಿ, ನಾಲ್ಕು ಬ್ಯಾಗ್ ಗಳಲ್ಲಿ ತುಂಬಿಟ್ಟಿದ್ದ.

ಆತನ ಶಾದರ ಮನೆಯ ಹೊರ ಭಾಗದಲ್ಲಿ ನಾಲ್ಕು ಬ್ಯಾಗ್ ನ ಸಹಿತವಾಗಿ ಬಂಧಿಸಲಾಗಿದೆ. ತನ್ನ ಇತರ ನಾಲ್ವರು ಸ್ನೇಹಿತರ ಜತೆಗೂಡಿ ಆತ ಶವದ ವಿಲೇವಾರಿಗೆ ಮುಂದಾಗಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆತನ ಮೂವರು ಸ್ನೇಹಿತರು ತಪ್ಪಿಸಿಕೊಂಡಿದ್ದಾರೆ. ಆರೋಪಿಯು ತನ್ನ ತಂದೆ ನಲವತ್ತೆಂಟು ವರ್ಷದ ಸಂದೇಶ್ ಅಗರ್ ವಾಲ್ ರನ್ನು ಹತ್ಯೆ ಮಾಡಿದ ಆರೋಪ ಹೊತ್ತಿದ್ದಾನೆ.

ಆಸ್ತಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಶಾದರಾದ ಫರ್ಶ್ ಬಜಾರ್ ನಲ್ಲಿ ಕೊಲೆ ಮಾಡಿದ್ದಾನೆ. "ನನ್ನ ತಂದೆ ಸದಾ ಬೈಯ್ಯುತ್ತಿದ್ದರು. ಸಿಟ್ಟಿನ ಭರದಲ್ಲಿ ಅವರನ್ನು ಕೊಂದುಬಿಟ್ಟೆ. ಆ ನಂತರ ಶವವನ್ನು ವಿಲೇವಾರಿ ಮಾಡುವ ಸಲುವಾಗಿ ದೇಹವನ್ನು ತುಂಡುತುಂಡಾಗಿ ಕತ್ತರಿಸಿದೆ" ಎಂದು ಹೇಳಿಕೊಂಡಿದ್ದಾನೆ.

Son murdered father and cut in to 25 pieces over property dispute

ಇನ್ನು ಮೃತ ಸಂದೇಶ್ ಕುಮಾರ್ ಸೋದರ ಹೇಳುವ ಪ್ರಕಾರ್: ತಿಂಗಳ ಹಿಂದೆಯೇ ಕೊಲ್ಲುವುದಾಗಿ ಅಮಾನ್ ಬೆದರಿಕೆ ಹಾಕಿದ್ದ. ಈ ಕೊಲೆಯಲ್ಲಿ ಸಂದೇಶ್ ಪತ್ನಿ ಮತ್ತು ಇತರ ಮಕ್ಕಳ ಕೈವಾಡವೂ ಇದೆ.

"ಸೌಂದರ್ಯ ಸಾಮಗ್ರಿಯ ಮಾರಾಟ ಮಳಿಗೆ ನಡೆಸುತ್ತಿದ್ದ ನನ್ನ ಸೋದರನಿಗೆ ಆಸ್ತಿ ವಿಚಾರವಾಗಿ ಅವರೆಲ್ಲ ತೊಂದರೆ ನೀಡುತ್ತಿದ್ದರು. ಈಗಾಗಲೇ ಕೋರ್ಟ್ ವ್ಯಾಜ್ಯ ನಡೆಯುತ್ತಿದೆ. ಈಗಾಗಲೇ ಸಂದೇಶ್ ಅರ್ಧ ಆಸ್ತಿಯನ್ನು ಹೆಂಡತಿ, ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿದ್ದ. ಅವರು ಮಳಿಗೆಯನ್ನೂ ಕೇಳುತ್ತಿದ್ದರು" ಎಂದು ಸಂದೇಶ್ ಸೋದರ ತಿಳಿಸಿದ್ದಾರೆ.

ಸಂದೇಶ್ ಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಅಮಾನ್ ದೊಡ್ಡವನು. ಜತೆಗೆ ಮಗಳೊಬ್ಬಳಿದ್ದಾಳೆ. ಕೊಲೆಯಾದ ದಿನ ಸಂದೇಶ್ ರ ಪತ್ನಿಯು ತಮ್ಮ ಮಗ ಹಾಗೂ ಮಗಳ ಜತೆಗೆ ಹೊರಗೆ ಹೋಗಿದ್ದರು. ಆದ್ದರಿಂದ ಅವರ ಮೇಲೂ ಅನುಮಾನ ಇದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+