5000 ಅಡಿ ಎತ್ತರದಲ್ಲಿ ಮೇಲೆ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ
ನವದೆಹಲಿ, ಜು.2: ದೆಹಲಿಯಿಂದ ಜಬಲ್‌ಪುರಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಾಸ್ ಆದ ಘಟನೆ ನಡೆದಿದೆ. ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಯಾವುದೇ ಯಾರಿಗೂ ತೊಂದರೆ ಕಂಡು ಬಂದಿಲ್ಲ ಎನ್ನಲಾಗಿದೆ.
ವಿಮಾನವು 5,000 ಅಡಿ ಎತ್ತರದಲ್ಲಿದ್ದಾಗ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಸ್ಪೈಸ್ ಜೆಟ್ ವಿಮಾನವು ಶನಿವಾರ ಬೆಳಗ್ಗೆ ದೆಹಲಿಯಿಂದ ಜಬಲ್‌ಪುರ್‌ಗೆ ಹಾರಾಟ ನಡೆಸುತ್ತಿತ್ತು. 5000 ಅಡಿ ಮೇಲೆ ಹಾರುವಾಗ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ ನಂತರ ವಿಮಾನ ಸಿಬ್ಬಂದಿ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿಸಿದರು. ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ.
#WATCH | A SpiceJet aircraft operating from Delhi to Jabalpur returned safely to the Delhi airport today morning after the crew noticed smoke in the cabin while passing 5000ft; passengers safely disembarked: SpiceJet Spokesperson pic.twitter.com/R1LwAVO4Mk
— ANI (@ANI) July 2, 2022

ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿರುವ ದೃಶ್ಯವು ಹೊಗೆ ತುಂಬಿದ ಕ್ಯಾಬಿನ್ ಅನ್ನು ತೋರಿಸಿದ್ದು, ವಿಮಾನವು ದೆಹಲಿಗೆ ಹಿಂದಿರುಗಿದ ನಂತರ ಪ್ರಯಾಣಿಕರು ನಿರ್ಗಮಿಸುತ್ತಿರುವ ದೃಶ್ಯಗಳನ್ನು ತೋರಿಸಿವೆ. 15 ದಿನಗಳಲ್ಲಿ ಸ್ಪೈಸ್ ಜೆಟ್ ವಿಮಾನಕ್ಕೆ ಇದು ಎರಡನೇ ತುರ್ತು ಲ್ಯಾಂಡಿಂಗ್ ಆಗಿದೆ. ಜೂನ್ 19 ರಂದು 185 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದ ವಿಮಾನವು ಟೇಕ್-ಆಫ್ ಆದ ತಕ್ಷಣ ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಏಕೆಂದರೆ ಅದರ ಎಡ ಇಂಜಿನ್‌ಗೆ ಹಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿತ್ತು.

ಆಗ ವಿಮಾನದಲ್ಲಿದ್ದ ಪ್ರಯಾಣಿಕ ಸೌರಭ್ ಛಾಬ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಮಾನದೊಳಗೆ ನಡೆದ ಘಟನೆಯನ್ನು ವಿವರಿಸಿದ್ದರು. ಸ್ಪೈಸ್‌ಜೆಟ್ ಅಸುರಕ್ಷಿತವಾಗಿದೆ ಎಂದು ತೋರುತ್ತಿದೆ. ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಒಮ್ಮೆಗೆ ಪ್ರಯಾಣಿಕರು ಭಯಭೀತರಾಗಲು ಪ್ರಾರಂಭಿಸಿದರು. ಬಳಿಕ ಅವರು ದೆಹಲಿಗೆ ಹಿಂತಿರುಗಿದರು. ಅದೃಷ್ಟವಶಾತ್ ನಾವು ಸುರಕ್ಷಿತವಾಗಿದ್ದೇವೆ ಎಂದು ಅವರು ಬರೆದಿದ್ದರು.












Click it and Unblock the Notifications