• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಾಹ್ಮಣರನ್ನು ನೋಯಿಸಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ಟ್ವಿಟ್ಟರ್

|

ನವದೆಹಲಿ, ನವೆಂಬರ್ 20: "ಬ್ರಾಹ್ಮಣರ ಪ್ರಭುತ್ವ ಹತ್ತಿಕ್ಕಿ" ಎಂಬ ಪ್ಲಕಾರ್ಡ್ ಹಿಡಿದು ಭಾರತದ ಕೆಲ ಮಹಿಳಾ ಪತ್ರಕರ್ತರೊಂದಿಗೆ ಟ್ವಿಟ್ಟರ್ ಸಿಇಒ ಜಾಕ್ ಡೋರ್ಸಿ ಪೋಸು ಕೊಟ್ಟಿದ್ದು ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು.

'ಬ್ರಾಹ್ಮಣರ ಪ್ರಭುತ್ವವನ್ನು ಹತ್ತಿಕ್ಕಿ' ಎಂದ ಟ್ವಿಟ್ಟರ್ ಸಿಇಒಗೆ ಟ್ವಿಟ್ಟರ್ ನಲ್ಲೇ ಗೂಸಾ!

ಸಾಮಾಜಿಕ ಜಾಲತಾಣಗಳಲ್ಲಿ ಡೋರ್ಸಿ ಅವರ ನಡೆಯನ್ನು ಸಾಕಷ್ಟು ಜನ ತರಾಟೆಗೆ ತೆಗೆದುಕೊಂಡಿದ್ದರಿಂದ ಎಚ್ಚೆತ್ತುಕೊಂಡ ಟ್ವಿಟ್ಟರ್ ಕ್ಷಮೆ ಕೇಳಿದೆ.

ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾದ ಆನಂದ್ ನ್ಯಾಮಗೌಡ ಹೇಳಿಕೆ

ಟ್ವಿಟ್ಟರ್ ನ ಕಾನೂನು, ಭದ್ರತಾ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಅವರು ಟ್ವೀಟ್ ಈ ಕುರಿತು ಪ್ರತಿಕ್ರಿಯೆ ನೀಡಿ, "ನಮ್ಮಿಂದ ತಪ್ಪಾಗಿದೆ. ಇದು ಖಂಡಿತ ನಮ್ಮ ಅಭಿಪ್ರಾಯದ ಪ್ರತಿಧ್ವನಿಯಲ್ಲ. ನಮಗೆ ಒಬ್ಬರು ನೀಡಿದ ಉಡುಗೊರೆ ಇದು. ಕೆಲವರೊಂದಿಗೆ ವೈಯಕ್ತಿಕವಾಗಿ ಫೋಟೋ ತೆಗೆಸಿಕೊಳ್ಳುವಾಗ ಆ ಚಿತ್ರವನ್ನು ಡೋರ್ಸಿ ಹಿಡಿದಿದ್ದರು. ಕ್ಷಮಿಸಿ." ಎಂದಿದ್ದಾರೆ.

ಬ್ರಾಹ್ಮಣರ ಬಗ್ಗೆ ಹೇಳಿಕೆ : ಸ್ಪಷ್ಟನೆ ಕೊಟ್ಟ ಶಾಸಕ ಆನಂದ್ ನ್ಯಾಮಗೌಡ

ಭಾರತೀಯರು ಟ್ವಿಟ್ಟರ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬ ಕುರಿತಂತೆ ನಡೆದ ಸಭೆಯಲ್ಲಿ ಮಹಿಳಾ ಪತ್ರಕರ್ತೆಯರೊಂದಿಗೆ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಡೋರ್ಸಿ ಮಾತುಕತೆ ನಡೆಸಿದ್ದರು. ನಂತರ ಕೆಲವು ಮಹಿಳಾ ಪತ್ರಕರ್ತೆಯರೊಂದಿಗೆ ನಿಂತು ತೆಗೆಸಿಕೊಂಡ ಫೋಟೋದಲ್ಲಿ ಅವರು ಹಿಡಿದ ಪ್ಲೆಕಾರ್ಡ್ ವೊಂದು ಸಾಕಷ್ಟು ವಿವಾದ ಸೃಷ್ಟಿಸಿತ್ತು.

English summary
After Twitter ceo Jack Dorsey's controversial placard holding photo, twitter asks sorry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X