• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಕ್ಕಿಂನ ಎಸ್ ಡಿಎಫ್ 10 ಶಾಸಕರು ಬಿಜೆಪಿಗೆ; ಕೇಸರಿ ವಿಪಕ್ಷ

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 13: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ ಶಾಸಕರು ಸೋಮವಾರದಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೀಗ ಸಿಕ್ಕಿಂನಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದೆ. ಎಸ್ ಡಿಎಫ್ ಈ ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿತ್ತು. ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಎಫ್ ಸೋಲನುಭವಿಸಿತ್ತು. ಅದಕ್ಕೂ ಮುನ್ನ ಇಪ್ಪತ್ತೈದು ವರ್ಷ ಪಕ್ಷ ಅಧಿಕಾರದಲ್ಲಿ ಇತ್ತು.

ಏಪ್ರಿಲ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹದಿನೈದು ಸ್ಥಾನಗಳಲ್ಲಿ ಎಸ್ ಡಿಎಫ್ ಜಯಿಸಿತ್ತು. ಪಕ್ಷದ ಇಬ್ಬರು ನಾಯಕರು ಎರಡು ಸ್ಥಾನಗಳಿಂದ ಜಯಿಸಿದ್ದರು. ಹಾಗೆ ಲೆಕ್ಕ ನೋಡಿದರೆ, ಎಸ್ ಡಿಎಫ್ ನ ಹದಿಮೂರು ಶಾಸಕರ ಪೈಕಿ ಹತ್ತು ಮಂದಿ ಬಿಜೆಪಿ ಸೇರಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

25 ವರ್ಷಗಳ ನಂತರ ಸಿಕ್ಕಿಂಗೆ ಸಿಕ್ಕಿದ ಹೊಸ ಸಿಎಂ; ವಾರದಲ್ಲಿ ಎರಡು ರಜಾ ಮೊದಲ ಘೋಷಣೆ

ಈ ಮೂಲಕ ಬಿಜೆಪಿಯು ಸಿಕ್ಕಿಂನಲ್ಲಿ ಪ್ರಮುಖ ಪ್ರತಿಪಕ್ಷ ಆಗಲಿದೆ. ನಾವು ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ- ಸದ್ಯಕ್ಕೆ ವಿಪಕ್ಷ ನಾಯಕರಾಗಿರುವ ಪವನ್ ಚಾಮ್ಲಿಂಗ್ ಅವರು ಬಿಜೆಪಿಗೆ ಸೇರ್ಪಡೆ ಆಗಿಲ್ಲ.

ಮಾಜಿ ಸಚಿವರಾದ ದೋರ್ಜಿ ತ್ಸೆರಿಂಗ್ ಲೆಪ್ಚಾ ಮಾತನಾಡಿ, ಸಿಕ್ಕಿಂನಲ್ಲಿ ಬಿಜೆಪಿಯ ನೆಲೆ ವಿಸ್ತರಿಸಲು ನಾವು ಕೆಲಸ ಮಾಡಲಿದ್ದೇವೆ. ಸಿಕ್ಕಿಂನಲ್ಲಿ ಕಮಲ ಅರಳಬೇಕಿದೆ. ಪ್ರಧಾನಿ ಮೋದಿ ಅವರ ನೀತಿಗಳ ಬಗ್ಗೆ ಯುವ ಜನಾಂಗಕ್ಕೆ ಒಪ್ಪಿಗೆ ಇದೆ ಎಂದಿದ್ದಾರೆ.

ಇನ್ನು ಸದ್ಯಕ್ಕೆ ಸಿಕ್ಕಿಂನಲ್ಲಿ ಅಧಿಕಾರದಲ್ಲಿ ಇರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದಿಂದ ಕುಂಗಾ ನಿಮಾ ಲೆಪ್ಚಾ ಕೂಡ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ, ಎರಡರಲ್ಲಿ ಗೆದ್ದಿದ್ದರು. ಅವರು ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಇದೀಗ ಒಟ್ಟು ಮೂರು ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಿದೆ.

'ಸಿಕ್ಕಿಂ ಜನರ ಸರಾಸರಿ ಆಯುಷ್ಯ 100 ವರ್ಷ ತಲುಪಿಸಲು ಸರಕಾರ ಚಿಂತನೆ'

ಒಂದು ವೇಳೆ ಈ ಮೂರೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದರೆ ಮೂವತ್ತೆರಡು ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯಲ್ಲಿ ಹದಿಮೂರು ಸ್ಥಾನಗಳಲ್ಲಿ ಬಿಜೆಪಿ ಇದ್ದಂತಾಗುತ್ತದೆ. ಬಹುಮತಕ್ಕೆ ಹದಿನೇಳು ಸ್ಥಾನಗಳು ಇರಬೇಕು. ಒಂದು ಸ್ಥಾನದಲ್ಲಿ ಸಿಕ್ಕಿಂ ಕ್ರಾಂತಿ ಮೋರ್ಚಾ ಸೋತರೆ ಸಂಖ್ಯೆ ಹದಿನಾರಕ್ಕೆ ಇಳಿಕೆ ಆಗುತ್ತದೆ. ಸಿಕ್ಕಿಂನಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚಿಸಲು ಸಾಧ್ಯವಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

English summary
BJP now official opposition party in Sikkim. Out of 13 Sikkim Democratic Front MLA's 10 joined BJP in New Delhi on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X