ತಮಿಳುನಾಡಿಗೆ ನೀರು ಬಿಡೆವು: ಸಿದ್ದರಾಮಯ್ಯ

Posted By:
Subscribe to Oneindia Kannada

ದೆಹಲಿ, ಜನವರಿ 13: 7 ಟಿಎಂಸಿ ಅಡಿ ಕಾವೇರಿ ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿಗಳು ಮಾಡಿದ್ದ ಮನವಿಗೆ ಸಿದ್ದರಾಮಯ್ಯ ಅವರು ಸ್ಪಷ್ಟ ನಕಾರ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಭೇಟಿಗೆ ದೆಹಲಿ ಹೋಗಿರುವ ಸಿದ್ದರಾಮಯ್ಯ ಅವರು ಅಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿ 'ನಮ್ಮ ರಾಜ್ಯದ ರೈತರಿಗೆ ನೀರಿನ ಅವಶ್ಯಕತೆ ಇದ್ದು, ಈ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ' ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

7 ಟಿಎಂಸಿ ಅಡಿ ನೀರು ಬಿಡಿಸಿ: ಸಿದ್ದರಾಮಯ್ಯಗೆ ತ.ನಾಡು ಸಿಎಂ ಪತ್ರ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು, ಮುಂದಿನ ತಿಂಗಳು ಅದರ ತೀರ್ಪು ಹೊರ ಬೀಳಲಿದೆ, ತೀರ್ಪು ನಮ್ಮ ಪರವಾಗಿಯೇ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

Siddaramaiah says 'we don't give water to Tamilnadu'

ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರು 7 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟು ಇಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು, ಪತ್ರದಲ್ಲಿ ಈಗ 7 ಟಿಎಂಸಿ ಅಡಿ ನೀರು ಬಿಡಿ ಇನ್ನು ಹದಿನೈದು ದಿನದಲ್ಲಿ ಉಳಿದ 8 ಟಿಎಂಸಿ ಅಡಿ ನೀರು ಬಿಡಿ ಎಂದು ಹೇಳಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah refuses water request of Tamilnadu and said government will not give water to Tamilnadu. Tribunal Judgment is going to out next month, we hope Judgment will be on our favor.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ