ಸುಮಿತ್ರಾ ಮಹಾಜನ್ ಕ್ಷಮೆ ಕೇಳಿದ ಶಶಿ ತರೂರ್

ನವದೆಹಲಿ, ಏಪ್ರಿಲ್ 23: ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಬಳಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಕ್ಷಮೆ ಕೇಳಿದ್ದಾರೆ.

ಗುರುವಾರ ಸಂಜೆ ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದ ಶಶಿ ತರೂರ್ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದರು.

ಈ ಕುರಿತು ಸುಮಿತ್ರಾ ಮಹಾಜನ್ ಪುತ್ರನ ಬಳಿ ತಾವು ನಡೆದುಕೊಂಡ ರೀತಿಗೆ ಕ್ಷಮೆ ಕೇಳಿದ್ದು, ಸುಮಿತ್ರಾ ಮಹಾಜನ್ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿದ್ದಾರೆ. ಅವರಿಗೆ ವಿಷಯ ಅರ್ಥವಾಗಿ ಕೃಪಾದೃಷ್ಟಿ ಹೊಂದಿದ್ದಾರೆ, ಸುಮಿತ್ರಾ ಮಹಾಜನ್ ಅವರು ಚೆನ್ನಾಗಿದ್ದಾರೆಂದು ತಿಳಿದು ಸಂತಸವಾಗಿದೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಸುಮಿತ್ರಾ ಮಹಾಜನ್ ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಶಶಿತರೂರ್ ಅವರು ಟ್ವೀಟ್ ಮಾಡಿದ್ದರು. ಈ ಸುದ್ದಿ ಗಮನಕ್ಕೆ ಬರುತ್ತಿದ್ದಂತೆ ಬಿಜೆಪಿ ನಾಯಕರು ಕಾಲೆಳೆದಿದ್ದರು.

ಮಹಾಜನ್ ಅವರು ಆರೋಗ್ಯವಾಗಿದ್ದಾರೆ ಯಾಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದೀರಾ ಎಂದು ಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗೀಯ ಟ್ವೀಟ್ ಮಾಡಿದ್ದರು. ತಕ್ಷಣಕ್ಕೆ ಎಚ್ಚೆತ್ತುಕೊಂಡ ಶಶಿ ತರೂರ್ ಕೂಡಲೇ ತಮ್ಮ ಟ್ವೀಟ್ ಅಳಿಸಿಹಾಕಿದ್ದರು.

 Shashi Tharoor Convey Apologies To Sumitra Mahajan

ಬಳಿಕ ಶಶಿ ತರೂರ್ ಅವರ ಈ ಸುಳ್ಳು ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರು ಮಹಾಜನ್ ಅವರ ಕುಟುಂಬದ ಬಳಿ ಕ್ಷಮೆ ಯಾಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+