ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಪ್ರಕರಣ: ತರುಣ್ ತೇಜ್ಪಾಲ್ ಗೆ ಜಾಮೀನು

By Mahesh
|
Google Oneindia Kannada News

ನವದೆಹಲಿ, ಜು.1: ತೆಹೆಲ್ಕಾ ಸಂಸ್ಥೆಯ ಸಹದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹಲ್ಕಾ ಪತ್ರಿಕೆಯ ಸ್ಥಾಪಕ, ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರಿಗೆ ಮಂಗಳವಾರ ಮಧ್ಯಾಹ್ನ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ತರುಣ್ ತೇಜ್ಪಾಲ್ ಅವರನ್ನು ಅತ್ಯಾಚಾರಿ ಎಂದು ಹೆಸರಿಸಿ ವಿರುದ್ಧ ಗೋವಾ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಮಂಗಳವಾರ ತರುಣ್ ತೇಜ್ಪಾಲ್ ಸಲ್ಲಿಸಿದ್ದ ಜಾಮೀನು ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜಸ್ಟೀಸ್ ವಿಕ್ರಮ್ ಜೀತ್ ಸಿಂಗ್ ಹಾಗೂ ಜಸ್ಟೀಸ್ ಎಸ್.ಕೆ ಸಿಂಗ್ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದ್ದಾರೆ.

ಆದರೆ, 51 ವರ್ಷದ ತರುಣ್ ಅವರ ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕಿದೆ. ಸಾಕ್ಷಿಗಳಿಗೆ ಬೆದರಿಕೆ, ಸಾಕ್ಷಿ ನಾಶಕ್ಕೆ ಯತ್ನ ಯಾವುದೇ ಒಂದು ಷರತ್ತನ್ನು ಮೀರಿ ನಡೆದರೆ ತಕ್ಷಣವೇ ಜೈಲುಶಿಕ್ಷೆಗೊಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ವಿಧಿಸಲಾಗಿದೆ.

ಮಾಜಿ ಪತ್ರಕರ್ತ ತರುಣ್ ತೇಜ್ಪಾಲ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಎಂಟು ತಿಂಗಳಿನಲ್ಲಿ ಇತ್ಯರ್ಥಗೊಳಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಕಳೆದ ಶುಕ್ರವಾರ ತೇಜ್ಪಾಲ್ ಗೆ ನೀಡಲಾಗಿದ್ದ ಮಧ್ಯಂತರ ಜಾಮೀನಿನ ಅವಧಿಯನ್ನು ಜುಲೈ.1ರ ತನಕ ವಿಸ್ತರಿಸಲಾಗಿತ್ತು.

Sexual assault case: SC grants bail to Tehelka founder Tarun Tejpal

ಮೇ.19ರಂದು ತೇಜ್ಪಾಲ್ ಗೆ ಮೂರು ವಾರಗಳ ಕಾಲ ಮಧ್ಯಂತರ ಜಾಮೀನು ಮಂಝೂರು ಮಾಡಲಾಗಿತ್ತು. ತಮ್ಮ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ತೇಜ್ಪಾಲ್ ಗೆ ಅನುಮತಿ ನೀಡಲಾಗಿತ್ತು.

ಗೋವಾದ ಗ್ರ್ಯಾಂಡ್ ಹಯಾತ್ ಪಂಚತಾರ ಹೋಟೆಲೊಂದರಲ್ಲಿ ಆಯೋಜಿಸಲಾಗಿದ್ದ ತೆಹಲ್ಕಾ ಪತ್ರಿಕೆಯ ಕಾರ್ಯಕ್ರಮದ ವೇಳೆ ಕಿರಿಯ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಳೆದ ನವೆಂಬರ್ 30ರಂದು ತೇಜ್ಪಾಲ್‌ರನ್ನು ಗೋವಾ ಪೊಲೀಸರು ಬಂಧಿಸಿದ್ದರು.

ತೆಹೆಲ್ಕಾ ಸಂಸ್ಥೆಯ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಬಂಧನಕ್ಕೊಳಗಾಗಿದ್ದ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಅವರ ಪುರುಷತ್ವ ಪರೀಕ್ಷೆಯನ್ನು ನಡೆಸಲಾಗಿತ್ತು. ಗೋವಾ ಮೆಡಿಕಲ್ ಕಾಲೇಜಿನಲ್ಲಿ ಡಿಎನ್ಎ ಹಾಗೂ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು,'ಪಾಸಿಟಿವ್' ಎಂದು ಫಲಿತಾಂಶ ಬಂದಿದೆ ಎಂದು ತಿಳಿದು ಬಂದಿತ್ತು.

ತೇಜಪಾಲ್ ಅವರ ಮೇಲೆ ಐಪಿಸಿ ಸೆಕ್ಷನ್ 354,354 ಎ, 376, 376(2) (ಕೆ), 376(2) (ಎಫ್) ಅನ್ವಯ ಪ್ರಕರಣ ದಾಖಲಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ ಗೋವಾ ಪೊಲೀಸರು ಅರೋಪಪಟ್ಟಿ ಸಲ್ಲಿಸಿದ್ದರು.[ತೆಹೆಲ್ಕಾ ತೇಜಪಾಲ್ ರೇಪಿಸ್ಟ್: ಆರೋಪಪಟ್ಟಿ](ಪಿಟಿಐ)

English summary
Supreme Court on Tuesday(July.1) granted regular bail to Tehelka founder Tarun Tejpal in a sexual assault case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X