ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕಾ ಗಾಂಧಿ ಮನೆಯಲ್ಲಿ ಭದ್ರತಾ ವೈಫಲ್ಯ: ಒಳನುಗ್ಗಿದ ಗುಂಪು

|
Google Oneindia Kannada News

ನವದೆಹಲಿ, ಡಿಸೆಂಬರ್ 2: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್‌ ಅನ್ನು (ಎಸ್‌ಪಿಜಿ) ಹಿಂದಕ್ಕೆ ಪಡೆದುಕೊಂಡ ಒಂದು ವಾರದಲ್ಲಿಯೇ ಅವರ ನಿವಾಸದಲ್ಲಿ ಭದ್ರತಾ ವೈಫಲ್ಯ ಉಂಟಾದ ಘಟನೆ ನಡೆದಿರುವುದು ತಡವಾಗಿ ವರದಿಯಾಗಿದೆ.

ನ. 26ರಂದೇ ಈ ಘಟನೆ ನಡೆದಿದ್ದು, ಭದ್ರತಾ ವೈಫಲ್ಯದ ಬಗ್ಗೆ ಪ್ರಿಯಾಂಕಾ ಗಾಂಧಿ ಅವರ ಕಚೇರಿ ಸೋಮವಾರ ಮಾಹಿತಿ ಬಹಿರಂಗಪಡಿಸಿದೆ. ಇದರಿಂದ ಅವರ ಭದ್ರತೆಯ ಕುರಿತು ಕಳವಳ ವ್ಯಕ್ತವಾಗಿದೆ.

ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?

ಕೇಂದ್ರ ದೆಹಲಿಯಲ್ಲಿರುವ ಅಧಿಕ ಭದ್ರತೆಯ ಲೋಧಿ ಎಸ್ಟೇಟ್‌ ಒಳಗೆ ಬಾಲಕಿಯೊಬ್ಬಳು ಸೇರಿದಂತೆ ಐವರು ಕುಳಿತಿದ್ದ ಕಾರ್ ನೇರವಾಗಿ ಪ್ರವೇಶಿಸಿದೆ. ಉದ್ಯಾನದ ಸಮೀಪ ಗಾಡಿ ನಿಲ್ಲಿಸಿದ ಜನರ ಗುಂಪು ಸೀದಾ ಉದ್ಯಾನದೊಳಗೆ ನಡೆದು ಸಾಗಿದೆ. ಬಳಿಕ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಬೇಕೆಂದು ಬೇಡಿಕೆ ಮುಂದಿರಿಸಿದೆ. ತಾವು ಉತ್ತರ ಪ್ರದೇಶದಿಂದ ಬಂದ ಕುಟುಂಬವಾಗಿದ್ದು, ತಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳಬೇಕೆಂಬ ಬಯಕೆಯಿಂದ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

Security Breach At Priyanka Gandhis Home After Losing SPG

ತಮ್ಮನ್ನು ಭೇಟಿ ಮಾಡಲು ಯಾರೂ ಮುಂಗಡ ಹೆಸರು ಕಾಯ್ದಿರಿಸಿಲ್ಲದ ಕಾರಣ ಪ್ರಿಯಾಂಕಾ ಗಾಂಧಿ ಅಚ್ಚರಿಗೊಂಡಿದ್ದರು. ಆಕೆಯನ್ನು ಭೇಟಿ ಮಾಡಲು ಯಾರಾದರೂ ಬರಲು ಸಮಯ ನಿಗದಿ ಮಾಡಲಾಗಿದೆ ಎಂಬುದನ್ನು ಅವರ ಭದ್ರತೆಗೆ ನಿಯೋಜಿಸಿರುವ ಸಿಆರ್‌ಪಿಎಫ್ ಕೂಡ ಮಾಹಿತಿ ನೀಡಿರಲಿಲ್ಲ. ತಮಗೆ ತಿಳಿಯದಂತೆ, ಅದೂ ಕಾರ್‌ನಲ್ಲಿ ಜನರು ಒಳಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆ ವಾಪಸ್ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆ ವಾಪಸ್

ಇದು ಅತ್ಯಂತ ಆತಂಕಕಾರಿ ಭದ್ರತಾ ವೈಫಲ್ಯವಾಗಿದೆ. ಕಾವಲುಗಾರರು ಕಾರ್‌ಅನ್ನು ಒಳಗೆ ಬಿಟ್ಟಿರುವುದು ಮಾತ್ರವಲ್ಲದೆ, ಅದರ ಒಳಗಿದ್ದವರ ಗುರುತನ್ನು ಸಹ ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಹಾಗಿದ್ದರೂ ಪ್ರಿಯಾಂಕಾ ಗಾಂಧಿ ಗಾಬರಿಗೊಳಗಾಗದೆ ಒಳಗೆ ಬಂದ ಜನರೊಂದಿಗೆ ಚೆನ್ನಾಗಿ ಮಾತನಾಡಿದರು. ಅವರೊಂದಿಗೆ ಫೋಟೊ ಕೂಡ ತೆಗೆಸಿಕೊಂಡರು. ಬಳಿಕ ಅವರು ಮರಳಿದರು ಎಂದು ಅವರ ಕಚೇರಿ ತಿಳಿಸಿದೆ.

ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು (ಎಸ್‌ಪಿಜಿ) ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದುಕೊಂಡಿತ್ತು. ಅವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು.

English summary
A major security breach was reported at Congress leader Priyanka Gandhi's home on Nov 26, after the one week of central government has downgraded the security to Z plus from SPG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X