ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿಯಿಂದ ಸ್ಯಾನಿಟರಿ ನ್ಯಾಪ್ಕಿನ್ ಬೆಲೆಯಲ್ಲಿ ಭಾರೀ ಇಳಿಕೆಯೇನಿಲ್ಲ!

|
Google Oneindia Kannada News

ನವದೆಹಲಿ, ಜುಲೈ 23: ಮಹಿಳೆಯರ ಹೋರಾಟದ ಪ್ರತಿಫಲ ಎಂಬಂತೆ ಕೊನೆಗೂ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಜಿಎಸ್ ಟಿ(ಸರಕು ಮತ್ತು ಸೇವಾ ತೆರಿಗೆ) ಮುಕ್ತಗೊಳಿಸಲಾಗಿದೆ.

ಇಷ್ಟು ದಿನ ಶೇ.12 ಇದ್ದ ಸ್ಯಾನಿಟರ್ ನ್ಯಾಪ್ಕಿನ್ ಮೇಲಿನ ತೆರಿಗೆಯನ್ನು ಸಂಪೂರ್ಣ ಕಡಿತಗೊಳಿಸಿರುವುದರಿಂದ ಇನ್ನು ಮೇಳೆ ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ ತೆರಿಗೆ ಪಾವತಿಸಬೇಕಿಲ್ಲ.ಇದರಿಂದ ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆ ಸಾಕಷ್ಟು ಕಡಿಮೆಯಾಗಲಿದೆ ಎಂದು ನೀವೇನಾದರೂ ನಿರೀಕ್ಷಿಸಿದ್ದರೆ ಆ ನಿರೀಕ್ಷೆ ಮಾತ್ರ ಸುಳ್ಳು!

ಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆಜಿಎಸ್ಟಿ ದರ ಕಡಿತ : ಯಾವ್ಯಾವ ಉತ್ಪನ್ನಗಳು ಸೋವಿಯಾಗಿವೆ

ಸ್ಯಾನಿಟರಿ ನ್ಯಾಪ್ಕಿನ್ ತಯಾರಕರು ಇನ್ ಪುಟ್ ಟ್ಯಾಕ್ಸ್ ಲಾಭವನ್ನು ಪಡೆಯುವುದಾದರೆ ಮಾತ್ರವೇ ಗ್ರಾಹಕ(end user)ರಿಗೂ ಲಾಭವಾಗುತ್ತದೆ. ಇಲ್ಲವಾದಲ್ಲಿ 10 ಸ್ಯಾನಿಟರಿ ನ್ಯಾಪ್ಕಿನ್ ಗಳಿಗೆ 50 ಪೈಸೆಯಷ್ಟೇ ಲಾಭವಾಗಲಿದೆ.

Sanitary pad prices will not be reduced much after GST exemption

ಸ್ಯಾನಿಟರಿ ನ್ಯಾಪ್ಕಿನ್ ಗಳ ಮೇಲಿನ ತೆರಿಗೆಯನ್ನು ಶೇ.12 ರಿಂದ ಇಳಿಸಿ, ತೆರಿಕೆ ಮುಕ್ತ ಮಾಡಬೇಕು ಎಂದು ಸಾಕಷ್ಟು ಹೋರಾಟ ನಡೆದಿತ್ತು. ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಮನವಿ ಬರೆದು ಕೇಂದ್ರ ಸಚಿವರಿಗೆ ಕಳಿಸುವ, ಆಕ್ರೋಷವನ್ನೂ ವ್ಯಕ್ತಪಡಿಸಲಾಗಿತ್ತು. ಈ ಕುರಿತು ಆನ್ ಲೈನ್ ಅಭಿಯಾನವೂ ನಡೆದಿತ್ತು.

ಸ್ಯಾನಿಟರಿ ನ್ಯಾಪ್‌ಕಿನ್ ಇನ್ನು ತೆರಿಗೆಮುಕ್ತ ಸ್ಯಾನಿಟರಿ ನ್ಯಾಪ್‌ಕಿನ್ ಇನ್ನು ತೆರಿಗೆಮುಕ್ತ

ಆದ್ದರಿಂದ ಜಿಎಸ್ಟಿ ಮುಕ್ತವಾಗಿದೆ ಎಂದು ಮಹಿಳೆಯರು ಹಿಗ್ಗುವಂತಿಲ್ಲ! ಜು.21 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಒಟ್ಟು 88 ಸರಕುಗಳ ಮೇಲಿನ ಜಿಎಸ್ಟಿಯನ್ನು ಕಡಿಮೆ ಮಾಡಲಾಗಿದ್ದು, ಅವುಗಳಲ್ಲಿ ಗೃಹೋಪಯೋಗಿ ವಸ್ತುಗಳಾದ ವಾಷಿಂಗ್ ಮಷಿನ್, ಫ್ರಿಡ್ಜ್, ವಾಕ್ಯೂಮ್ ಕ್ಲೀನರ್ ಮುಂತಾದವು ಸೇರಿವೆ.

English summary
Sanitary pad prices unlikely to come down much after GST exemption. Here are the reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X