ಸ್ವಚ್ಛ ಭಾರತ ಟ್ವೀಟ್, ಜಗ್ಗಿ ವಾಸುದೇವ್ ರನ್ನು ಜಾಲಾಡಿದ ಟ್ವಿಟ್ಟಿಗರು

Posted By:
Subscribe to Oneindia Kannada

ನವದೆಹಲಿ, ಜುಲೈ 12 : ಸ್ವಚ್ಛ ಭಾರತ ಅಭಿಯಾನವನ್ನು ಮುಂದು ಮಾಡಿಕೊಂಡು ಪ್ರಧಾನಿ ನರೇಂದ್ತ ಮೋದಿ ಅವರನ್ನು ಹೊಗಳಿ, ವಿಡಿಯೋವೊಂದನ್ನು ಟ್ವೀಟ್ ಮಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆರೆಸ್ಸೆಸ್ ವಾಗ್ದಾಳಿ

ಆನೆಯೊಂದು ಕಸದ ಬುಟ್ಟಿಗೆ ಕಸ ಹಾಕುವ ವಿಡಿಯೋ ಟ್ವೀಟ್ ಮಾಡಿ, 'ಇದು ಸ್ವಚ್ಛ ಭಾರತ ಅಭಿಯಾನದ ಫಲಶ್ರುತಿ. ಪ್ರಧಾನಿಗೆ ಅಭಿನಂದನೆ' ಎಂದು ಒಕ್ಕಣೆ ಹಾಕಿದ್ದರು. ಅಸಲಿಗೆ ಆಗಿದ್ದೇನೆಂದರೆ, ಆ ವಿಡಿಯೋ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Sadguru Jaggi Vasudev trolled in twitter for swachh bharath tweet

ಇನ್ನು ಅದು ಮೂರು ವರ್ಷದ ಹಿಂದಿನದು. ಅದಕ್ಕೂ ಸ್ವಚ್ಛ ಭಾರತ ಅಭಿಯಾನಕ್ಕೂ ಯಾವ ಬಾದರಾಯಣ ಸಂಬಂಧವೂ ಇಲ್ಲ ಎಂದು ಸಾವಿರಾರು ಮಂದಿ ಟ್ವೀಟ್ ಮಾಡುವ ಮೂಲಕ ಜಗ್ಗಿ ವಾಸುದೇವ್ ಅವರಿಗೆ ತಮಾಷೆ ಮಾಡಿದ್ದಾರೆ. ಆದರೆ ಸದ್ಗುರು ಪರವಾಗಿಯೂ ಕೆಲವರು ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಈ ಟ್ವೀಟ್ ಪರ ಹಾಗೂ ವಿರೋಧ ಚರ್ಚೆಯಂತೂ ನಡೆಯುತ್ತಿದೆ. ಈ ಮಧ್ಯೆ, "ಈ ವಿಡಿಯೋ ದಕ್ಷಿಣ ಆಫ್ರಿಕಾದ್ದು ಎಂಬ ಸಂಗತಿ ನನಗೂ ತಿಳಿದಿತ್ತು" ಎಂದು ಜಗ್ಗಿ ವಾಸುದೇವ್ ಟ್ವೀತ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sadguru Jaggi Vasudev tweeted three year old, South Africa national park video of an elephant with a note of 'congratulation to PM Modi for swachh bharath capaign'. After that he trolled in twitter.
Please Wait while comments are loading...