ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಐಟಿ ದಾಳಿ, 3.25 ಕೋಟಿ ರು ವಶ!

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 14: ಇಲ್ಲಿನ ಕರೋಲ್ ಭಾಗ್ ಪ್ರದೇಶದ ಹೋಟೆಲೊಂದರ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೆಸರು ಹಾಗೂ ಐಟಿ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕರೋಲ್ ಭಾಗ್ ಪ್ರದೇಶದ ಚೆನ್ನೈ ಮಾರ್ಕೆಟ್ ನಲ್ಲಿ ಹೋಟೆಲ್ ತಕ್ಷ್ ನ 202 ಹಾಗೂ 206 ರೂಮಿನ ಮೇಲೆ ದಾಳಿ ನಡೆಸಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ 3.25 ಕೋಟಿ ರೂ. ನೋಟುಗಳನ್ನು ವಶ ಪಡಿಸಿಕೊಂಡು,, ಐವರನ್ನು ಬಂಧಿಸಲಾಗಿದೆ.

Rs 3.25 cr in old notes seized from Karol Bagh Hotel, 5 held

ಮಂಗಳವಾರ ರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಬಂಧಿತರಾದವರು ಮುಂಬೈ ಮೂಲದ ಹವಾಲಾ ಆಪರೇಟರ್ ಗಳು ಎಂದು ತಿಳಿದು ಬಂದಿದೆ. ವಿಶೇಷವಾಗಿ ಸೂಟ್ ಕೇಸ್ ಹಾಗೂ ಟೇಪುಗಳನ್ನು ಬಳಸಿ ಈ ನೋಟುಗಳನ್ನು ಪ್ಯಾಕ್ ಮಾಡಲಾಗಿತ್ತು. ಇದು ವಿಮಾನ ನಿಲ್ದಾಣದ ಸ್ಕ್ಯಾನಿಂಗ್ ಮಷಿನ್ ಗೂ ತಿಳಿಯದಂತೆ ಸೂಕ್ಷ್ಮವಾಗಿ ಪ್ಯಾಕಿಂಗ್ ಮಾಡಿದ್ದರು.

ಬಂಧಿತರನ್ನು ಅನ್ಸಾರಿ ಅಬುಜಾರ್, ಫಜಲ್ ಖಾನ್, ಅನ್ಸಾರಿ ಅಫಾನ್, ಲಾಡೂ ರಾಮ್ ಹಾಗೂ ಮಹವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಮಹವೀರ್ ಹಾಗೂ ರಾಮ್ ಇಬ್ಬರು ರಾಜಸ್ಥಾನದವರಾಗಿದ್ದು, ಉಳಿದವರು ಮುಂಬೈ ಮೂಲದವರಾಗಿದ್ದಾರೆ.

English summary
The Income Tax Department and Crime Branch of Delhi police, seized around huge amount of Rs 3.25 crore in Delhi's Karol Bagh hotel. The joint operation was conducted by IT department and Crime Branch of Delhi Police in early hours of Wednesday.Investigations have shown that the money belonged to a hawala operator from Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X