ನಾಳೆಯಿಂದ ಎಟಿಎಂಗಳಲ್ಲಿ 2 ಸಾವಿರ ರೂ. ನೋಟು
ಮಂಗಳವಾರದಿಂದ ದೇಶದ ಕೆಲವು ಎಟಿಂ ಯಂತ್ರಗಳಲ್ಲಿ ಹೊಸ 2 ಸಾವಿರ ರೂ. ನೋಟುಗಳು ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ನವದೆಹಲಿ, ನವೆಂಬರ್, 14: ಹೊಸದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ 2ಸಾವಿರ ರೂ. ಮುಖಬೆಲೆಯ ಹೊಸ ನೋಟುಗಳು ಮಂಗಳವಾರದಿಂದ ದೇಶದ ಕೆಲವು ಎಟಿಎಂಗಳಲ್ಲಿ ದೊರೆಯಲಿವೆ.
ಮಂಗಳವಾರದಿಂದ ಎಟಿಎಂಗಳಲ್ಲಿ ಹೊಸ 2 ಸಾವಿರ ರೂ. ನೋಟುಗಳ ಲಭ್ಯತೆ ಕುರಿತು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.[2 ಸಾವಿರ ರೂ. ನಕಲಿ ನೋಟು ಚಲಾವಣೆ: ಇಬ್ಬರ ಬಂಧನ]

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಅಂಚೆ ಕಚೇರಿಗಳಿಗೆ ಹೆಚ್ಚಿನ ನೋಟುಗಳನ್ನು ರವಾನೆ ಮಾಡಲಾಗಿದೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]
ಎಟಿಎಂ ಗಳಲ್ಲಿ ಹೊಸ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಿತ್ ಡ್ರಾ ಮಾಡಲು ಸಾಧ್ಯವಾಗುವಂತೆ ವಿಶೇಷ ತಂಡ ಕಾರ್ಯನಿರತವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಗ್ರಾಹಕರ ಅನುಕೂಲಕ್ಕಾಗಿ ಹೊಸ ಮೈಕ್ರೋ ಕ್ಯಾಶ್ ಮೆಷಿನ್ ಗಳನ್ನು ಸ್ಥಾಪಿಸಲಾಗಿದೆ ಎಂದು ದಾಸ್ ಹೇಳಿದ್ದಾರೆ.
ಎಟಿಎಂ ಯಂತ್ರಗಳಲ್ಲಿ ಹೊಸ ನೋಟುಗಳನ್ನು ಜೋಡಿಸಲು ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ನೋಟುಗಳನ್ನು ಎಟಿಎಂಗಳಲ್ಲಿ ಇಡಲು ಸಾಧ್ಯವಾಗಿರಲಿಲ್ಲ.












Click it and Unblock the Notifications