ಐದನೇ ಕ್ಲಾಸ್ ಗೆ ಓದಿಗೆ ಎಳ್ಳು ನೀರು ಬಿಟ್ಟ ಈತ ದಯಾಮಯಿ ಕಳ್ಳ!

ನವದೆಹಲಿ, ಜುಲೈ 17 : ಸಿನಿಮಾಗಳ ಪ್ರಭಾವ ಹೇಗೆ ಜನರ ಮೇಲೆ ಆಗುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇರ್ಫಾನ್ ಎಂಬಾತ ದೆಹಲಿಯಲ್ಲಿ ಶ್ರೀಮಂತರ ಬಳಿ ದೋಚಿದ್ದ ಚಿನ್ನಾಭರಣಗಳನ್ನು ಮಾರಿ, ತನ್ನ ಗ್ರಾಮದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತಿದ್ದನಂತೆ.

ಜತೆಗೆ ಮದುವೆಗೆಗಳಿಗೆ ಕೂಡ ಸಹಾಯ ಮಾಡಿದ್ದಾನೆ. ಬಿಹಾರದಲ್ಲಿರುವ ಗ್ರಾಮದವನು ಈ ಇರ್ಫಾನ್. ಐದನೇ ತರಗತಿ ಶಾಲೆ ಬಿಟ್ಟಿರುವ ಈತನನ್ನು ಹನ್ನೆರಡು ಮಂದಿ ಶ್ರೀಮಂತರ ಮನೆಯಲ್ಲಿ ಚಿನ್ನಾಭರಣ-ನಗದು ದೋಚಿದ ಪ್ರಕರಣದಲ್ಲಿ ಬಿಹಾರದಲ್ಲಿರುವ ಈತನ ಮನೆಯಲ್ಲೇ ವಶಕ್ಕೆ ಪಡೆಯಲಾಗಿದೆ.

Irfan

ಈತ ಕಳವು ಮಾಡುತ್ತಿದ್ದ ಎಂಬ ವಿಚಾರವನ್ನು ಪೊಲೀಸರು ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಹಳ್ಳಿಯವರು ಇರಲಿಲ್ಲ. ಅಂದಹಾಗೆ, ಇರ್ಫಾನ್ ಕೈಯಲ್ಲಿ ರೋಲೆಕ್ಸ್ ವಾಚ್ ಕೂಡ ಇತ್ತು. ಅದನ್ನು ಯಾರದೋ ಶ್ರೀಮಂತರ ಮನೆಯಲ್ಲಿ ಎಗರಿಸಿದ್ದ. ಚಿನ್ನಾಭರಣವನ್ನು ಮಾರಿ ಹೋಂಡಾ ಸಿವಿಕ್ ಕಾರನ್ನು ಖರೀದಿಸಿದ್ದನಂತೆ.

ಒಮ್ಮೆ ಬಾರ್ ವೊಂದರಲ್ಲಿ ತನಗೆ ಇಷ್ಟವಾದ ಹಾಡನ್ನು ಹಾಕುವಂತೆ ಅಲ್ಲಿನ ಮ್ಯಾನೇಜರ್ ಗೆ ಹತ್ತು ಸಾವಿರ ರುಪಾಯಿ ಕೊಟ್ಟಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+