ಮೇಲ್ವರ್ಗದವರಿಗೂ ಮೀಸಲಾತಿ! ಮೋದಿ ಸರ್ಕಾರದ ನಡೆಗೆ ಟ್ವಿಟ್ಟಿಗರು ಏನಂದ್ರು?

ನವದೆಹಲಿ, ಜನವರಿ 07: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೂ ಸರ್ಕಾರಿ ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಣಯವನ್ನು ಸೋಮವಾರ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ.

ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತಲೂ ಕಡಿಮೆ ಇರುವ ಪ್ರತಿಭಾನ್ವಿತ ಮೇಲ್ವರ್ಗದ ಯುವಕರು, ಕೇವಲ ಜಾತಿಯ ಕಾರಣಕ್ಕಾಗಿ ಉದ್ಯೋಗ ಪಡೆಯದೇ ಇರುವಂಥ ಸನ್ನಿವೇಶವನ್ನು ತಪ್ಪಿಸುವ ಸಲುವಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಮೋದಿ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಹಲವರು ಸ್ವಾಗತಿಸಿ, 'ಉಘೆ' ಎಂದಿದ್ದರೆ, ಕೆಲವರು ಈ ನಿರ್ಣಯವನ್ನು ಖಂಡಿಸಿದ್ದಾರೆ. ಸರ್ಕಾರದ ಈ ಕ್ರಮದಿಂದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಮತ್ತಷ್ಟು ಜನ ದೂರಿದ್ದಾರೆ.

Array

ಜಾತಿ ಆಧಾರಿತ ಮೀಸಲಾತಿಗಿಂತ ಇದೇ ಮೇಲು!

ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕಿಂತ ಆರ್ಥಿವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಾದ ಕ್ರಮ. ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಹೀಗೇ ಎಲ್ಲಾ ಜಾತಿ ಆಧಾರಿತ ಮೀಸಲಾತಿಗಳೂ ದೂರವಾಗಲಿ ಎಂದು ಶಿಲ್ಪಿ ರಾಯ್ ಟ್ವೀಟ್ ಮಾಡಿದ್ದಾರೆ.

Array

ಮೀಸಲಾತಿಯ ವಿಡಂಬನೆ

ಇದು ಮೀಸಲಾತಿಯ ವಿಡಂಬನೆ. ಮೀಸಲಾತಿ ಎಂಬುದು ಎಂದಿಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಲ್ಲಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕ್ರಮ ಅಂಬೇಡ್ಕರ್ ಅವರಿಗೆ ನೀಡುವ ಗೌರವವಲ್ಲ ಎಂದಿದ್ದಾರೆ ಹೇಮಾರ್ಘ್ಯ.

ಹಳೆಯ ಮೀಸಲಾತಿಗಳಿಗೆ ಧಕ್ಕೆಯಿಲ್ಲ!

ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ನೀಡಿದ ಮೋದಿ ಸರ್ಕಾರ ಈಗಾಗಲೇ ಅಸ್ತಿತ್ವದಲ್ಲಿದ್ದ ಯಾವುದೇ ಮೀಸಲಾತಿಗೂ ಧಕ್ಕೆ ತಂದಿಲ್ಲ ಎಂದು ಈ ಕ್ರಮವನ್ನು ಸ್ವಾಗತಿಸಿದ್ದಾರೆ ಬಿಪಿನ್ ಕುಮಾರ್ ತಿವಾರಿ.

ಇದನ್ನೇ ನಿರೀಕ್ಷಿಸಿದ್ದೆವು

ಮೋದಿ ಸರ್ಕಾರದಿಂದ ನಾವು ಹಲವು ದಿನಗಳಿಂದ ಈ ನಿರ್ಧಾರವನ್ನೇ ನಿರೀಕ್ಷಿಸಿದ್ದೆವು. ನಿಮೆ ನಮ್ಮ ಸಲಾಂ ಎಂದಿದ್ದಾರೆ ರವಿ ಕೆ ಎಸ್.

ಐತಿಹಾಸಿಕ ನಡೆ

ಮೋದಿ ಸರ್ಕಾರದಿಂದ ಐತಿಹಾಸಿಕ ನಡೆ. ಇದೊಂದು ಅನಿರೀಕ್ಷಿತ ನಡೆ ಸಹ. ಮೋದಿ ಸರ್ಕಾರದ ಈ ನಡೆಯಿಂದ 2019 ರ ಲೋಕಸಭಾ ಚುನಾವಣೆಯ ದಿಕ್ಕೇ ಬದಲಾಗಬಹುದು ಎಂದು ಮೋಡಿಫೈಡ್ ಇಂಡಿಯನ್ ಟ್ವೀಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+