ಎಲೆಕ್ಟ್ರಿಕಲ್ ಬಸ್ ಖರೀದಿಗೆ ನೆರವು ಕೋರಿದ ಸಚಿವ ರಾ.ಲಿಂ.ರೆಡ್ಡಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 21: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆ ರಾಜ್ಯ ಸಚಿವರಾದ ಮನ್ ಸುಖ್ ಲಕ್ಷ್ಮಣ್ ಭಾಯ್ ಮಂಡಾವಿಯಾ ಅವರನ್ನು ಬುಧವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಗೆ (ಬಿಎಂಟಿಸಿ) ಎಲೆಕ್ಟ್ರಿಕಲ್ ಬಸ್ ಗಳನ್ನು ಖರೀದಿಸಬೇಕು. ಅದಕ್ಕಾಗಿ ಕೇಂದ್ರದ ಹಣಕಾಸು ನೆರವನ್ನು ಕೋರಿದ್ದಾರೆ.

ಬಿಎಂಟಿಸಿ ಬಸ್ ಗಳ ಪೈಕಿ ಹಲವು ಬಸ್ ಗಳ ಬಳಕೆ ಕಾಲಾವಧಿ ಮುಕ್ತಾಯವಾಗುತ್ತಿದೆ. ಜತೆಗೆ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಎಲೆಕ್ಟ್ರಿಕಲ್ ಬಸ್ ಗಳ ಖರೀದಿಗೆ ಬಿಎಂಟಿಸಿ ಮುಂದಾಗಿದೆ. ಇದಕ್ಕೆ ಹೆಚ್ಚಿನ ಹಣ ಅಗತ್ಯ ಇರುವುದರಿಂದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ದೆಹಲಿಗೆ ತೆರಳಿ ಕೇಂದ್ರದ ನೆರವು ಕೋರಿದ್ದಾರೆ.[150 ಎಸಿ ಬಸ್ ಖರೀದಿ ಮಾಡಲಿದೆ ಬಿಎಂಟಿಸಿ]

Reddy sought help from center to buy Electric bus

ಸಕಾರಾತ್ಮಕ ಸ್ಪಂದನೆ ದೊರೆತ ಬಗ್ಗೆ ಮೂಲಗಳು ತಿಳಿಸಿವೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಬೆಂಗಳೂರು ರಸ್ತೆಗಳಲ್ಲಿ ಎಲೆಕ್ಟ್ರಿಕಲ್ ಬಸ್ ಗಳನ್ನು ಕಾಣಬಹುದಾಗಿದೆ. ಈ ವೇಳೆ ಕೇಂದ್ರ ಸಚಿವರಾದ ಅನಂತಕುಮಾರ್, ಮೇನಕಾ ಗಾಂಧಿ, ಬಿಎಂಟಿಸಿ ಚೇರ್ ಮನ್ ನಾಗರಾಜ್ ಯಾದವ್, ಕಾರ್ಯನಿರ್ವಾಹಕ ನಿರ್ದೇಶಕ ಏಕ್ ರೂಪ್ ಕೌರ್, ರೆಸಿಡೆಂಟ್ ಕಮಿಷನರ್ ಅತುಲ್ ಕುಮಾರ್ ತಿವಾರಿ ಮತ್ತಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minister of transport, Karnataka Ramalinga reddy sought help from center to buy electrical bus for BMTC on Wednesday in New Delhi .
Please Wait while comments are loading...