ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಗುಡುಗು ಸಹಿತ ಭಾರಿ ಮಳೆ, ತಾಪಮಾನ ಇಳಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 12: ದೆಹಲಿಯಲ್ಲಿ ಗುಡಗು ಸಹಿತ ಭಾರಿ ಮಳೆಯಾಗುತ್ತಿದ್ದು, ತಾಪಮಾನದಲ್ಲಿ ಕೊಂಚ ಇಳಿಕೆಯಾಗಿದೆ. ಶುಕ್ರವಾರ ಬೆಳಗಿನ ಜಾವದಿಂದಲೇ ಮಳೆ ಶುರುವಾಗಿದೆ, ದೆಹಲಿ, ಎನ್‌ಸಿಆರ್‌ನಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಜೊತೆಗೆ ಗಾಳಿಯು ಕೂಡ ತೀವ್ರವಾಗಿದ್ದು, ಅನಾಹುತ ಸೃಷ್ಟಿ ಮಾಡುವ ಸಾಧ್ಯತೆ ಇದೆ, ಗುರುವಾರ ಸಂಜೆಯಿಂದಲೇ ಸಾಧಾರಣ ಮಳೆ ಶುರುವಾಗಿತ್ತು. ತಾಪಮಾನ ಮೂರರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ.

ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಮುನ್ಸೂಚನೆ

ಮಧ್ಯಪ್ರದೇಶದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ, ಹಾಗೆಯೇ ಪಾಕಿಸ್ತಾನ,ರಾಜಸ್ಥಾನದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.

 ಮಾರ್ಚ್ 10,11 ರಂದು ಮಳೆಯಾಗಿತ್ತು

ಮಾರ್ಚ್ 10,11 ರಂದು ಮಳೆಯಾಗಿತ್ತು

ದೆಹಲಿಯಲ್ಲಿ ಮಾರ್ಚ್ 10 ಹಾಗೂ 11 ರಂದು ಸಾಧಾರಣ ಮಳೆಯಾಗಿತ್ತು, ಆದರೆ ತಾಪಮಾನ ಹೆಚ್ಚಿತ್ತು, ಶುಕ್ರವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನವೂ ಇಳಿಕೆಯಾಗಿದೆ.

 ಮಾರ್ಚ್ 12 ರಂದು ಎಲ್ಲೆಲ್ಲಿ ಮಳೆ ಸಾಧ್ಯತೆ

ಮಾರ್ಚ್ 12 ರಂದು ಎಲ್ಲೆಲ್ಲಿ ಮಳೆ ಸಾಧ್ಯತೆ

ಗಾಳಿಯು 30-40 ಕೆಎಂಪಿಎಚ್ ವೇಗದಲ್ಲಿ ಬೀಸುತ್ತಿದೆ. ಹಿಮಾಚಲಪ್ರದೇಶ, ಉತ್ತರಾಖಂಡ್, ಪಂಜಾಬ್, ಹರ್ಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ , ವಿದರ್ಭಾ, ಗಿಲ್ಗಿಟ್, ಒಡಿಶಾ, ಲಡಾಖ್‌ನಲ್ಲಿ ಕೂಡ ಮಳೆಯಾಗಲಿದೆ.

 ಮಾರ್ಚ್ 16ರವರೆಗೆ ದೇಶದ ವಿವಿಧೆಡೆ ಮಳೆ

ಮಾರ್ಚ್ 16ರವರೆಗೆ ದೇಶದ ವಿವಿಧೆಡೆ ಮಳೆ

ಮೇಘಾಲಯ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮುಜಾಫರಾಬಾದ್, ಹಿಮಾಚಲಪ್ರದೇಶ, ಲಡಾಖ್, ಸಿಕ್ಕಿಂ,ಜಾರ್ಖಂಡ್ ಸೇರಿದಂತೆ ಹಲವೆಡೆ ಮಳೆ ಮುಂದುವರೆಯಲಿದೆ.

 ಕರ್ನಾಟಕದ 8 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದ 8 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಭಾಗಗಳಲ್ಲಿ ಮಳೆಯಾಗಲಿದೆ. ಜತೆಗೆ ಉತ್ತರ ಕನ್ನಡ, ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

English summary
Parts of Delhi received light rain, thunderstorm and gusty winds on Friday morning. India Meteorological Department (IMD) scientists said that this was forecasted, and was a result of an active western disturbance passing over northwest India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X