ದೇಶಾದ್ಯಂತ ಮೈಕ್ರೋ ಎಟಿಎಂಗೆ ಆರ್ ಬಿಐ ಒತ್ತು

Posted By:
Subscribe to Oneindia Kannada

ನವದೆಹಲಿ ನವೆಂಬರ್ 14 : ನಾವು ದೇಶಾದ್ಯಂತ ಮೈಕ್ರೋ ಎಟಿಎಂಗಳನ್ನು ಹೆಚ್ಚಿಸುತ್ತೇವೆ ಎಂದು ಆರ್ ಬಿಐನ ಕಾರ್ಯದರ್ಶಿ ಶಶಿಕಾಂತ್ ದಾಸ್ ಸೋಮವಾರ ದೆಹಲಿಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೊಸ ನೋಟುಗಳಿಗಾಗಿ ಜನರು ಪರಿತಪಿಸುತ್ತಿದ್ದು ಹಣ ಬದಲಾಯಿಸಲು ಜನರಿಗೆ ತೊಂದರೆಯಾಗುತ್ತಿದೆ ಈ ಕಾರಣದಿಂದಾಗಿ ಇನ್ನು ಮುಂದೆ ಮೈಕ್ರೋ ಎಟಿಎಂಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

rbi

ಮೈಕ್ರೋ ಎಟಿಎಂ ಎಂದರೇನು?
ಮೈಕ್ರೋ ಎಟಿಎಂ ಎಂದರೆ ಫಿಂಗರ್ ಪ್ರಿಂಟ್ ಸ್ಕಾನರ್ ನಿಂದ ಕಾರ್ಯ ನಿರ್ವಹಿಸುವ, ಜಿಪಿಆರ್ ಎಸ್ ಸಂಪರ್ಕ ಹೊಂದಿರುವ ಯಂತ್ರ.

ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿ ಅಕೌಂಟ್ ಮಾಡಿಸುವಾಗ ಆಧಾರ್, ಪ್ಯಾನ್, ಅಗತ್ಯ ದಾಖಲನೆಗಳನ್ನು ಆನ್ ಲೈನಿನಲ್ಲಿ ತುಂಬಿ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿರುತ್ತದೆ, ಇದರ ಜೊತೆಗೆ ವ್ಯಕ್ತಿಗೆ ಎಟಿಎಂ, ಕ್ರೆಡಿಟ್ ಕಾರ್ಡ್ ಗಳನ್ನು ಕೊಡಲಾಗುತ್ತದೆ.

ಕಾರ್ಡ್ ಗಳನ್ನು ಆ ಮಿಷನ್ ಗೆ ಸ್ವ್ಯಾಪ್ ಮಾಡಿದಾಗ ಅಗತ್ಯ ದಾಖಲೆ ಜಿಪಿಆರ್ ಎಸ್ ಮೂಲಕ ತೆರೆದುಕೊಳ್ಳುತ್ತದೆ. ಪಾಸ್‌ ವರ್ಡ್ ನಿಂದ ತಮ್ಮ ಹಣವನ್ನು ವರ್ಗಾಯಿಸುವ ಮತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಇದು ಸಹಕಾರಿ ಎಂದು ಆರ್ ಬಿಐ ತಿಳಿಸಿದೆ.[ಎಟಿಎಂ, ಹಣ ಹಿಂಪಡೆತ: ಬ್ಯಾಂಕುಗಳಿಗೆ ಕೇಂದ್ರದ ಮಹತ್ವದ ಸೂಚನೆ]

ಇದು ಮೈಕ್ರೋ ಎಟಿಎಂಗಳನ್ನು ಬ್ಯಾಂಕ್ ಮತ್ತು ಎಟಿಎಂ ಇಲ್ಲದ ಗ್ರಾಮೀಣ ಮತ್ತು ರಿಮೋಟ್ ಏರಿಯಾಗಳಿಗಾಗಿಯೇ ಪ್ರಚುರ ಪಡಿಸಲಾಗುತ್ತದೆ ಎಂದು ಆರ್ ಬಿಐ ಹೇಳಿದೆ. ಅಲ್ಲದೆ ಬ್ಯಾಂಕಿಗೆ ಹೋಗಲಾರದವರಿಗೆ ಬ್ಯಾಂಕೇ ಅವರ ಹತ್ತಿರ ತಲುಪುವಂತೆ ಮಾಡುವುದು. ಬ್ಯಾಂಕು ಮತ್ತು ಗ್ರಾಹಕರ ನಡುವೆ ಸಂಬಂಧ ಉತ್ತಮ ಪಡಿಸುವುದು ಇದರ ಉದ್ದೇಶವಾಗಿದೆ ಎಂದು ಆರ್ ಬಿಐ ತಿಳಿಸಿದೆ.

ಮೈಕ್ರೋ ಎಟಿಎಂಗಳಿಂದಾಗಿ ದೇಶದಲ್ಲಿ ನಗದು ವ್ಯವಹಾರಗಳು ಗಣಕದಲ್ಲಿ ದಾಖಲಾಗಿ ಎಲ್ಲವೂ ಪಾರದರ್ಶಕ ವಾಗಲಿ, ಹಾಗೂ ಯಾರು ಸಹ ಕಾಳಧನವನ್ನು ಯಾವ ಕಾರಣದಿಂದಲೂ ಇಟ್ಟಕೊಳ್ಳ ಬಾರದೆಂಬ ಉದ್ದೇಶ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RBI intend to promote micro ATMs said in press meet RBI Secretary Shashikanth das in new Delhi.
Please Wait while comments are loading...