• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಲಿತ ಮಹಿಳೆಯನ್ನು ಮದುವೆಯಾದರೆ ರಾಹುಲ್‌ಗೆ 2.5 ಲಕ್ಷ

|

ನವದೆಹಲಿ, ಫೆಬ್ರವರಿ 17: ಕೇಂದ್ರ ಸಚಿವ ಹಾಗೂ ದಲಿತ ಮುಖಂಡ ರಾಮದಾಸ್ ಅಠವಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹೊಸ ಸಲಹೆಯೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು "ನಾವಿಬ್ಬರು ನಮಗಿಬ್ಬರು" ಎಂಬ ಘೋಷಣೆಯನ್ನು ಪ್ರಚಾರ ಮಾಡಲು ಬಯಸುವುದಾದರೆ, ಮೊದಲು ದಲಿತ ಮಹಿಳೆಯನ್ನು ಮದುವೆಯಾಗಬೇಕು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಈ ಯೋಜನೆಯಡಿಯಲ್ಲಿ ಫಲಾನುಭವಿಯಾದ ಕಾರಣಕ್ಕೆ ಅವರಿಗೆ ಲಕ್ಷ ರೂಪಾಯಿಯನ್ನೂ ನೀಡಲಾಗುವುದು ಎಂದಿದ್ದಾರೆ. ಈಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಈ ಘೋಷಣೆಯ ಉಲ್ಲೇಖ ಮಾಡಿದ್ದು, ಅದಕ್ಕೆ ರಾಮದಾಸ್ ಅಠವಳೆ ತಿರುಗುತ್ತರ ನೀಡಿದ್ದಾರೆ. ಮುಂದೆ ಓದಿ...

"ರಾಹುಲ್ ಗಾಂಧಿ ಮೊದಲು ಮದುವೆಯಾಗಲಿ"

ಈ ಮುನ್ನ ನಾವಿಬ್ಬರು, ನಮಗಿಬ್ಬರು ಎಂಬ ಘೋಷಣೆಯನ್ನು ಕುಟುಂಬ ಯೋಜನೆಯ ಪ್ರಚಾರಕ್ಕೆ ಬಳಸಲಾಗುತ್ತಿತ್ತು. ರಾಹುಲ್ ಗಾಂಧಿ ಅದನ್ನು ಈಗ ಪ್ರಚುರಪಡಿಸಬೇಕೆಂದರೆ, ಅವರು ಮೊದಲು ಮದುವೆ ಆಗಬೇಕು. ದಲಿತ ಮಹಿಳೆಯನ್ನು ಮದುವೆಯಾಗಿ, ಜಾತಿ ಪದ್ಧತಿ ತೊಲಗಿಸುವ ಮಹಾತ್ಮ ಗಾಂಧಿಯವರ ಕನಸನ್ನು ನನಸು ಮಾಡಬೇಕು. ಇದರಿಂದ ಯುವಕರಿಗೆ ಸ್ಫೂರ್ತಿ ತುಂಬಿದಂತೆಯೂ ಆಗುತ್ತದೆ ಎಂದು ರಾಮದಾಸ್ ತಿರುಗೇಟು ನೀಡಿದ್ದಾರೆ.

ಸ್ಮೃತಿ ಸವಾಲು; ನಿಮಗೆ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧಿಸಿ ನೋಡಿ

"ರಾಹುಲ್ ಗಾಂಧಿಗೆ 2.5 ಲಕ್ಷ ರೂಪಾಯಿ"

ರಾಹುಲ್ ಗಾಂಧಿಯವರು ದಲಿತ ಮಹಿಳೆಯನ್ನು ಮದುವೆಯಾಗಿದ್ದೇ ಆದರೆ, ನಮ್ಮ ಸಚಿವಾಲಯದ ಕಡೆಯಿಂದ ರಾಹುಲ್ ಗಾಂಧಿಯವರಿಗೆ ಅಂತರ ಜಾತಿ ಮದುವೆ ಯೋಜನೆಯಡಿಯಲ್ಲಿ ಸರ್ಕಾರದಿಂದ ನೀಡಲಾಗುವ 2.5 ಲಕ್ಷ ರೂಪಾಯಿಯನ್ನು ಕೊಡಲಾಗುತ್ತದೆ ಎಂದಿದ್ದಾರೆ.

 ಸಂಸತ್‌ನಲ್ಲಿ

ಸಂಸತ್‌ನಲ್ಲಿ "ನಾವಿಬ್ಬರು, ನಮಗಿಬ್ಬರು" ಲೇವಡಿ ಮಾಡಿದ್ದ ರಾಹುಲ್

ಕಳೆದ ವಾರ ಸಂಸತ್‌ನಲ್ಲಿ ಮಾತನಾಡುವ ಸಂದರ್ಭ ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶವನ್ನು 'ನಾವಿಬ್ಬರು ನಮಗಿಬ್ಬರು' ನೀತಿಯಡಿ ನಡೆಸುತ್ತಿದ್ದಾರೆ. 'ಹಮ್ ದೋ ಹಮಾರೆ ದೋ' ನೀತಿಯು ಅಪನಗದೀಕರಣ, ಸರಕು ಮತ್ತು ಸೇವೆಗಳ ತೆರಿಗೆ, ಲಾಕ್‌ಡೌನ್ ಮತ್ತು ಇತ್ತೀಚಿನ ಮೂರು ಕೃಷಿ ಕಾಯ್ದೆಗಳಲ್ಲಿ ಜಾರಿಯಲ್ಲಿದೆ" ಎಂದು ಟೀಕಿಸಿದ್ದರು. ''ಕುಟುಂಬ ಯೋಜನೆಗೆ ನಾವು ಬಳಸುತ್ತಿದ್ದ 'ನಾವಿಬ್ಬರು, ನಮಗಿಬ್ಬರು' ಎಂಬ ಘೋಷಣೆ ನಿಮಗೆಲ್ಲರಿಗೂ ನೆನಪಿರಬೇಕು. ಆ ಘೋಷಣೆಗೆ ಈ ಸರ್ಕಾರ ಹೊಸ ಅರ್ಥ ನೀಡುತ್ತಿದೆ. ಈ ಸರ್ಕಾರವು ನಾಲ್ಕು ಜನರಿಂದ ನಡೆಯುತ್ತಿದೆ. 'ನಾವಿಬ್ಬರು, ನಮಗಿಬ್ಬರು' ಎಂದು ಲೇವಡಿ ಮಾಡಿದ್ದರು.

ಕೇಂದ್ರ ಸರ್ಕಾರಕ್ಕೆ ಅತಿಯಾದ ಆತ್ಮವಿಶ್ವಾಸ; ರಾಹುಲ್ ಗಾಂಧಿ

 ರಾಹುಲ್‌ಗೆ ನಿರ್ಮಲಾ ಸೀತಾರಾಮನ್ ತಿರುಗೇಟು

ರಾಹುಲ್‌ಗೆ ನಿರ್ಮಲಾ ಸೀತಾರಾಮನ್ ತಿರುಗೇಟು

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ಈ ಹಮ್ ದೋ ಹಮಾರೆ ದೋ ನೀತಿ ರಾಹುಲ್, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರ ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದರು. ಈ ನಾವಿಬ್ಬರು ನಮಗಿಬ್ಬರು ಘೋಷಣೆಯನ್ನು ರಾಹುಲ್ ಅಜ್ಜಿಯವರು ಪರಿಚಯಿಸಿದ್ದು ಎಂಬುದು ಬಹುಶಃ ರಾಹುಲ್ ಗಾಂಧಿಗೆ ತಿಳಿದಿಲ್ಲವೇನೋ ಎಂದು ಹರಿಯಾಣ ಸಚಿವ ಅನಿಲ್ ವಿಜ್ ಕೂಡ ವಾಗ್ದಾಳಿ ಮಾಡಿದ್ದರು.

English summary
If Rahul Gandhi wants to propagate the idea of ‘Hum do, Humare do’, he should marry a Dalit girl suggested Union minister and Dalit leader Ramdas Athawale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X