• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಮಳೆ, ಬಿರುಗಾಳಿಗೆ ತತ್ತರಿಸಿದ ರಾಜಧಾನಿ ನವದೆಹಲಿ

|
Google Oneindia Kannada News

ನವೆಹಲಿ, ಜುಲೈ 5: ರಾಜಧಾನಿ ದೆಹಲಿ ಭಾರಿ ಮಳೆ, ಬಿರುಗಾಳಿ ತತ್ತರಿಸಿದೆ. ಭಾನುವಾರ ಬೆಳಗ್ಗೆ ಮಂಜು ಮುಸುಕಿದ ವಾತಾವರಣ, ತುಂತುರು ಮಳೆ ನಿರೀಕ್ಷಿಸಿದ್ದ ದೆಹಲಿ ಜನತೆ, ಈ ಪ್ರಮಾಣದ ಮಳೆಗೆ ಬೆಚ್ಚಿದ್ದಾರೆ.

ಸಫ್ದರ್ಜಂಗ್ ವೀಕ್ಷಣಾಲಯದ ಮಾಹಿತಿಯಂತೆ ಬೆಳಗ್ಗೆ 5.30ಕ್ಕೆ ದೆಹಲಿಯಲ್ಲಿ 33.6 ಎಂಎಂ ಮಳೆಯಾಗಿದೆ, ಪಾಲಂ ಕೇಂದ್ರದಲ್ಲಿ ಮಳೆ ಪ್ರಮಾಣ 43.4 ಎಂಎಂ ತೋರಿಸಿದೆ.

ಚುರುಕುಗೊಂಡ ಮುಂಗಾರು; ಜುಲೈ 9ರ ತನಕ ಭಾರಿ ಮಳೆಚುರುಕುಗೊಂಡ ಮುಂಗಾರು; ಜುಲೈ 9ರ ತನಕ ಭಾರಿ ಮಳೆ

ಮುಂದಿನ ಮುರ್ನಾಲ್ಕು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ಜೂನ್ 25ಕ್ಕೆ ಮುಂಗಾರು ಮಾರುತಗಳು ದೆಹಲಿಯನ್ನು ಪ್ರವೇಶಿಸಿದೆ. ಈ ಅವಧಿಯಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿತ್ತು, ಆದರೆ ಈಗ ಭಾರಿ ಮಳೆ ಬೀಳುತ್ತಿದೆ. ಬುಧವಾರದ ವೇಳೆಗೆ 34 ಡಿಗ್ರಿ ಸೆಲ್ಸಿಯಸ್ ನಷ್ಟಕ್ಕೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದೆಹಲಿಯ ಲೋಧಿ ರಸ್ತೆ, ಇಂಡಿಯಾ ಗೇಟ್, ಕನಕ್ಟ್ ಪ್ಯಾಲೇಸ್ ಮುಂತಾದೆಡೆ ಭಾರಿ ಮಳೆ ಬಿದ್ದಿದೆ. ಗುಡುಗು, ಮೀಂಚು ಸಹಿತ ಮಳೆ ಬೀಳುತ್ತಿದೆ ಎಂದು ವಿಡಿಯೋಗಳನ್ನು ಸಾರ್ವಜನಿಕರು ಹಂಚಿಕೊಳ್ಳುತ್ತಿದ್ದಾರೆ.

ಪ್ರತಿ ಗಂಟೆಗೆ 20 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ದೆಹಲಿ, ಹಾನ್ಸಿ, ನರ್ವಾನಾ, ಕೈಥಾಲ್, ಹಿಸ್ಸಾರ್, ಜಿಂದ್, ರೊಹ್ಟಕ್, ಗೊಹಾನಾ, ಗನೌರ್, ಸೋನಿಪಾಟ್, ಬರಾತ್, ಪಾಣಿಪಟ್, ಕರ್ನಾಲ್, ಶಾಮ್ಲಿ, ಮುಝಾಫರ್ ನಗರ್, ಬಿಜ್ನೋರ್, ಝಜ್ಜಾರ್, ಭಿವಾನಿ, ಮಹೇಂದ್ರ ಘರ್, ಕೊಸ್ಲಿ, ಗುರುಗ್ರಾಮ್, ಮಾನೇಸರ್, ರೆವಾರಿ, ಭಿವಾರಿ, ನರ್ನಾಲ್, ಮೀರತ್, ಹಾಪೂರ್, ಪಾಲ್ವಾಲ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಬುಲಂಡ್ ಶಹರ್ ಗಳಲ್ಲಿ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ಹೇಳಿದೆ.

English summary
A fresh bout of rain and high-velocity winds lashed the national capital overnight, bringing the mercury down by several notches on Sunday morning. Light rain and generally cloudy weather is expected during the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X