ಗಂಭೀರ್ ಟ್ವೀಟ್ ಗೆ ಸೆಹ್ವಾಗ್ ನೀಡಿದ ಪ್ರತಿಕ್ರಿಯೆ ಏನು?

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 31: ರಾಜಧಾನಿ ನವದೆಹಲಿಯ ಮಹಾಮಳೆ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ. ಮಳೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಮತ್ತು ಸಮಸ್ಯೆ ಹಾಗೂ ಪರಿಹಾರಗಳು ಟ್ವಿಟರ್ ನಲ್ಲಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ.

ಗೌತಮ್ ಗಂಭೀರ್ ಅವರ ಟ್ವೀಟ್ ಗೆ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ ರೀತಿಯನ್ನು ನೋಡಲೇಬೇಕು. ಪ್ರತಿಕ್ರಿಯೆ ನೀಡುತ್ತ ಸೆಹ್ವಾಗ್ ನವದೆಹಲಿಯ ಸಮ-ಬೆಸ ಪದ್ಧತಿಯನ್ನು ತಮ್ಮದೇ ಶೈಲಿಯಲ್ಲಿ ಅಣಕವಾಡಿದ್ದಾರೆ.[ಜಾನ್ ಕೆರಿಗೆ ಟ್ರಾಫಿಕ್ ನರಕ ತೋರಿಸಿದ ದೆಹಲಿ ಮಳೆ]

twitter

ಟ್ವೀಟ್ ಮಾಡಿರುವ ಗೌತಮ್ ಗಂಭಿರ್, ಇದು ಬೋಟ್ ಗಳನ್ನು ಖರೀದಿ ಮಾಡಲು ಸರಿಯಾದ ಸಮಯ. ಜನರ ಮೂಲಭೂತ ಸಮಸ್ಯೆ ನಿವಾರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸೆಹ್ವಾಗ್ 'ಇದು ಒಳ್ಳೆಯ ಯೋಚನೆ, ಆದರೆ ಒಂದು ಸಮ ಮತ್ತೊಂದು ಬೆಸ ಸಂಖ್ಯೆಯ ಬೋಟ್ ನ್ನು ಖರೀದಿ ಮಾಡಬೇಕು' ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ಪ್ರವಾಸದಲ್ಲಿರುವ ಅಮೆರಿಕ ಕಾರ್ಯದರ್ಶಿ ಜಾನ್ ಕೆರಿ ನವದೆಹಲಿ ಮಳೆಯನ್ನು ತಮಾಷೆ ಮಾಡಿದ್ದಾರೆ. ಐಐಟಿ- ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾನ್ ಕೆರಿ, ನೀವೇನು ಬೋಟ್ ನಲ್ಲಿ ಬಂದ್ರಾ? ಅಥವಾ ನೆಲ, ನೀರು ಎರಡರಲ್ಲೂ ಸಂಚರಿಸುವ ವಾಹನಗಳಲ್ಲಿ ಬಂದ್ರಾ ? ಎಂದು ಹಾಸ್ಯ ಮಾಡಿದ್ದಾರೆ. ನವದೆಹಲಿಯ ಮಹಾಮಳೆಯನ್ನು ಟ್ವಿಟ್ಟರ್ ಲೋಕದಲ್ಲಿ ನೋಡಿಕೊಂಡು ಬನ್ನಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Heavy Rain hits New Delhi on August 31, 2016. Heavy rainfall caused massive traffic jams and water-logging in several areas of Delhi and Gurugram on Wednesday. Here is the Twitter reaction on #Delhi Rain.
Please Wait while comments are loading...