• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಡ್‌ನ್ಯೂಸ್: ಸೆಪ್ಟೆಂಬರ್ 12ರಿಂದ 80 ವಿಶೇಷ ರೈಲುಗಳ ಸಂಚಾರ

|

ನವದೆಹಲಿ, ಸೆಪ್ಟೆಂಬರ್ 05: ಕೇಂದ್ರ ಸರ್ಕಾರವು ಅನ್‌ಲಾಕ್‌ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಾ, ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುತ್ತಿದ್ದು, ಸೆಪ್ಟೆಂಬರ್ 12ರಿಂದ ಮತ್ತೆ 80 ವಿಶೇಷ ರೈಲುಗಳು ಸಂಚರಿಸಲಿವೆ.

   ಭಾರತೀಯರನ್ನು ಅಪಹರಿಸಿದ China ಸೇನೆ , Arunachal pradeshದಲ್ಲಿ ಘಟನೆ | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಸೆಪ್ಟೆಂಬರ್ 12ರಿಂದ 40 ಜೋಡಿ ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದ್ದು, ಸೆಪ್ಟೆಂಬರ್ 10ರಿಂದ ಬುಕಿಂಗ್ ಆರಂಭವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ.

   '' ರಾಜ್ಯಗಳಿಂದ ಪರೀಕ್ಷೆ ಮತ್ತು ಇತರ ಕಾರಣಗಳಿಗಾಗಿ ರೈಲಿಗೆ ಬೇಡಿಕೆಗಳು ಬಂದಾಗ ನಾವು ರೈಲು ಓಡಿಸುತ್ತೇವೆ'' ಎಂದು ಯಾದವ್ ತಿಳಿಸಿದ್ದಾರೆ.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಈಗಾಗಲೇ ದೇಶದಲ್ಲಿ 230 ರೈಲುಗಳು ಸಂಚರಿಸುತ್ತಿದ್ದು, ಈಗ ಹೆಚ್ಚುವರಿಯಾಗಿ ಮತ್ತೆ 80 ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ಹೇಳಲಾಗಿದೆ. ನಿರ್ದಿಷ್ಟ ರೈಲಿಗೆ ಬೇಡಿಕೆ ಇದ್ದರೆ ಅಥವಾ ವೈಟಿಂಗ್ ಪಟ್ಟಿ ದೊಡ್ಡದಾಗಿದ್ದರೆ ಅಂತಹ ಸಂದರ್ಭದಲ್ಲಿ ನಾವು ವಿಶೇಷ ರೈಲುಗಳನ್ನು ಓಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

   ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್‌ 25ರಿಂದ ರೈಲ್ವೆ ತನ್ನ ಪ್ರಯಾಣಿಕ, ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಬಳಿಕ ಕಾರ್ಮಿಕರ ಪ್ರಯಾಣಕ್ಕಾಗಿ ವಿಶೇಷ ರೈಲುಗಳನ್ನು ಮೇ 1ರಿಂದ ಆರಂಭಿಸಿತ್ತು.

   English summary
   Indian Railways on Tuesday said it will run another 80 special trains from September 12, in order to increase inter-state and intra-state mobility options for individuals
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X