ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯಲ್ಲಿ 2 ವರ್ಷದಲ್ಲಿ 4 ಲಕ್ಷ ಹುದ್ದೆಗೆ ನೇಮಕಾತಿ

|
Google Oneindia Kannada News

ನವದೆಹಲಿ, ಜನವರಿ 23: ರೈಲ್ವೆ ಇಲಾಖೆಯಲ್ಲಿ ಪ್ರಸ್ತುತ 1.32 ಲಕ್ಷ ಹುದ್ದೆಗಳು ಖಾಲಿ ಇದ್ದು, ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಿಗಳು ನಿವೃತ್ತರಾಗಲಿದ್ದಾರೆ. ರೈಲ್ವೆಯು ನಾಲ್ಕು ಲಕ್ಷ ಉದ್ಯೋಗ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.32 ಲಕ್ಷ ಸೀಟುಗಳು ಸದ್ಯ ಖಾಲಿ ಇವೆ. ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ನೌಕರರು ನಿವೃತ್ತರಾಗಲಿದ್ದಾರೆ. ಹೀಗಾಗಿ ಸುಮಾರು 2.32 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಾಗಲಿದೆ. ಕಳೆದ ವರ್ಷ ನಾವು 1.50 ಲಕ್ಷ ಜನರಿಗೆ ಉದ್ಯೋಗ ಒದಗಿಸಲು ಮಿಷನ್ ಆರಂಭಿಸಿದ್ದೆವು. ಇದು ಇನ್ನು ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ಭಾರೀ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಅಲ್ಲಗಳೆದ ಬಿಜೆಪಿ ಭಾರೀ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಅಲ್ಲಗಳೆದ ಬಿಜೆಪಿ

ಅಲ್ಲದೆ, ಹಳೆಯ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಹುದ್ದೆಗಳ ಭರ್ತಿ ಬಾಕಿ ಉಳಿದಿವೆ. ಇನ್ನು ಎರಡು ವರ್ಷಗಳಲ್ಲಿ ರೈಲ್ವೆ ಇಲಾಖೆ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಅವುಗಳ ಭರ್ತಿಗೆ ಸೇರ್ಪಡೆ ಮಾಡಿಕೊಳ್ಳಲಿದೆ. ಹೀಗಾಗಿ ಒಟ್ಟಾರೆ ಸುಮಾರು ನಾಲ್ಕು ಲಕ್ಷ ಹುದ್ದೆಗಳು ಖಾಲಿ ಉಳಿಯಲಿವೆ ಎಂದು ತಿಳಿಸಿದ್ದಾರೆ.

railways to recruit 4 lakh employees in 2 years railway minister piyush goyal

81 ವಿವಿಧ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಕರೆದ ನೈಋತ್ಯ ರೈಲ್ವೆ 81 ವಿವಿಧ ಹುದ್ದೆಗೆ ಭರ್ತಿ ಮಾಡಲು ಅರ್ಜಿ ಕರೆದ ನೈಋತ್ಯ ರೈಲ್ವೆ

ಎರಡು ವರ್ಷಗಳಲ್ಲಿ ನಿವೃತ್ತರಾಗಲಿರುವ ಒ೦ದು ಲಕ್ಷ ನೌಕರರ ಸ್ಥಾನಗಳಿಗೆ ಈಗಲೇ ನೇಮಕಾತಿ ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಿಂದುಳಿದ ವರ್ಗದವರು ಮತ್ತು ಅಂಗವಿಕಲರ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಈ ಉದ್ಯೋಗಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇ 10ರ ಮೀಸಲಾತಿ ನೀಡಲಾಗುವುದು ಎಂದಿದ್ದಾರೆ.

English summary
Railway Minister Piyush Goyal said that Railways will recruit 4 lakh employees in next 2 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X