ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ರೈಲಿನಲ್ಲೂ ಗೋಲ್ಡ್ ಕ್ಲಾಸ್ ಪ್ರಯಾಣ ಸಾಧ್ಯ

|
Google Oneindia Kannada News

Recommended Video

ಇನ್ಮುಂದೆ ರೈಲುಗಳಲ್ಲಿ ಗೋಲ್ಡ್ ಕ್ಲಾಸ್ ಪ್ರಯಾಣ ಕೂಡ ಸಾಧ್ಯ | Oneindia Kannada

ನವದೆಹಲಿ, ನವೆಂಬರ್ 06 : ರೈಲ್ವೆ ಇಲಾಖೆಯ ಮೊತ್ತ ಮೊದಲ ಗೋಲ್ಡ್ ಕ್ಲಾಸ್ ವಿಭಾಗವನ್ನು ನವೆಂಬರ್ 6ರ ಸೋಮವಾರ ದೆಹಲಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಮುಂಚೆ ಎ.ಸಿ 3 ಟೈರ್ ರೈಲ್ವೆಯ ಉನ್ನತ ಪ್ರಯಾಣ ಸೇವೆಯಾಗಿತ್ತು.

IRCTC ಜತೆ ಆಧಾರ್ ಲಿಂಕ್ ಆಗಿದ್ರೆ ಹೆಚ್ಚು ಟಿಕೆಟ್ ಬುಕ್ ಮಾಡಿIRCTC ಜತೆ ಆಧಾರ್ ಲಿಂಕ್ ಆಗಿದ್ರೆ ಹೆಚ್ಚು ಟಿಕೆಟ್ ಬುಕ್ ಮಾಡಿ

ದೆಹಲಿ- ಕತ್ಗೋದಾಮ್ ನಡುವಿನ ಶತಾಬ್ಧಿ ಎಕ್ಸ್ಪ್ರೆಸ್ ರೈಲು ಗೋಲ್ಡ್ ಕ್ಲಾಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಮೊದಲ ಭಾರತೀಯ ರೈಲು ಎಂಬ ಹಿರಿಮೆ ಪಡೆದುಕೊಂಡಿದೆ.

Railway to Unvile its Gold standard on November 6

ಗೋಲ್ಡ್ ಕ್ಲಾಸ್ ಪ್ರಯಾಣಿಕರಿಗೆ ಮನರಂಜನೆ, ಸುಗ್ರಾಸ ಭೊಜನ, ಅತ್ಯಾಧುನಿಕ ಒಳಾಂಗಣ ವಿನ್ಯಾಸ, ಸುಖಾಸನ ವ್ಯವಸ್ಥೆ, ಎ.ಸಿ, ಸ್ವಯಂಚಾಲಿತ ಡೋರ್ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯಗಳಿಗೂ ಆಧುನಿಕತೆಯ ಸ್ಪರ್ಷ ನೀಡಿದ್ದು, ಸ್ವಯಂ ಚಾಲಿತ ಫ್ಲಷ್ ವ್ಯವಸ್ಥೆ, ದುರ್ಗಂದ ನಿವಾರಕ, ನೈರ್ಮಲ್ಯ ಕಾಪಾಡಲು ವಿಶೇಷ ಆಟೋಮ್ಯಾಟಿಕ್ ವ್ಯವಸ್ಥೆ ಬಳಸಲಾಗಿದೆ.

ಇನ್ಮುಂದೆ ರೈಲ್ವೆ ಎಸಿ ಕೋಚ್ ಪ್ರಯಾಣಿಕರಿಗೆ ಹೊಸ ಹೊದಿಕೆಇನ್ಮುಂದೆ ರೈಲ್ವೆ ಎಸಿ ಕೋಚ್ ಪ್ರಯಾಣಿಕರಿಗೆ ಹೊಸ ಹೊದಿಕೆ

ಗೋಲ್ಡ್ ಕ್ಲಾಸ್ ನಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಹಾಗೂ ಸಿ.ಆರ್.ಎಫ್ ಜವಾನರನ್ನೂ ನೇಮಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗೆ ರೈಲು ಇಲಾಖೆಯ ಹೊಸ ತಂತ್ರಪ್ರಯಾಣಿಕರ ಸುರಕ್ಷತೆಗೆ ರೈಲು ಇಲಾಖೆಯ ಹೊಸ ತಂತ್ರ

ಭಾರತದ ರೈಲುಗಳ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾರ್ನ್ (SWARN) ಪ್ರಾಜೆಕ್ಟ್ ನ ಅಡಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ಮುಂದೆ ಭಾರತದ ಇನ್ನಷ್ಟು ಶತಾಬ್ದಿ, ರಾಜಧಾನಿ ರೈಲುಗಳ ಗುಣಮಟ್ಟ ಸುಧಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 30 ರೈಲುಗಳ ಗುಣಮಟ್ಟ ಸುಧಾರಣೆಗೆಂದು ಸ್ವಾರ್ನ್ ಗೆ 25 ಕೋಟಿ ಮಂಜೂರು ಮಾಡಲಾಗಿದೆ.

ಸ್ವಾರ್ನ್ ಯೋಜನೆಯಡಿ ಬರುವ 30 ರೈಲುಗಳ ಸಮಯಪಾಲನೆಯ ಬಗ್ಗೆಯೂ ಗಮನಹರಿಸಲಾಗಿದ್ದು, ರೈಲುಗಳು ಸಮಯಕ್ಕೆ ಸರಿಯಾಗಿ ನಿಗದಿತ ನಿಲ್ದಾಣಗಳನ್ನು ತಲುಪಲು ಆಧುನಿಕ ತಂತ್ರಜ್ಞಾನ ಸಹಾಯ ಪಡೆಯುವ ಜೊತೆಗೆ ರೈಲುಗಳ ವೇಗಮಿತಿ ಹೆಚ್ಚಿಸುವತ್ತಲೂ ಗಮನ ಹರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

English summary
The Railway will showcase its first (gold standard) on Monday. The New delhi-Kathgodam Shatabdi Express will be the first to be launched as part of the railways' 'Swarn' project which aims to renovate India's premium trains, including Rajdhanis and Shatabdis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X