ರೈಲ್ವೆ ಪ್ರಯಾಣ ದರ ಏರಿಕೆಗೆ ಸಾರ್ವತ್ರಿಕ ಖಂಡನೆ

ಬೆಂಗಳೂರು, ಜೂ. 21: ಜೆಡಿಎಸ್ ಅಧಿನಾಯಕ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಮತ್ತು ದೇಶಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ.

'ಅಭಿವೃದ್ಧಿ ದೃಷ್ಟಿಕೋನದಿಂದ ಮತ್ತು ಸಮರ್ಥ ಆಡಳಿತ ನೀಡಲು ಕೆಲ ಕಠಿಣ ನಿರ್ಧಾರಗಳು ಅನಿವಾರ್ಯವಾಗಿವೆ. ರೈಲ್ವೆ ಇಲಾಖೆಯಲ್ಲಿನ ನಷ್ಟವನ್ನು ತಡೆಯಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಾಗಾಗಿ ದರ ಏರಿಕೆ ನಿರ್ಧಾರ ವಾಪಸ್ ಪಡೆಯುವುದು ಸಾಧ್ಯವಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರುಗಳು ಸ್ಪಷ್ಟಪಡಿಸಿದ್ದಾರೆ.

ಬಜೆಟ್ಟಿಗೆ ಮುನ್ನ ದರ ಹೆಚ್ಚಳ ಮಾಡಿದ ಕ್ರಮ ಸರಿಯಲ್ಲ. ನಾನು ರೈಲು ಮಂತ್ರಿಯಾಗಿದ್ದಾಗ ರೈಲ್ವೆ ಮಂಡಳಿಯು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸಂಸತ್ತಿನಲ್ಲಿ ಚರ್ಚಿಸಲು ಸಮಯಯಾವಕಾಶ ಇಲ್ಲ ಎಂಬ ಕಾರಣಕ್ಕೆ ದರ ಏರಿಕೆಯನ್ನು ನಾನು ತಡೆಹಿಡಿದಿದ್ದೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

 Opposition leaders flay rail fare hike

ನಗರದಲ್ಲಿ ಜನತಾದಳ ಕಚೇರಿಯಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ದೇವೇಗೌಡರು ಕೇಂದ್ರ ನೂತನ ಸರಕಾರ ಭಾರಿ ಪ್ರಮಾಣದಲ್ಲಿ ರೈಲ್ವೆ ಪ್ರಯಾಣ ದರ ಏರಿಸಿರುವ ಕ್ರಮವನ್ನು ತೆಗಳಿದ್ದಾರೆ. ಚುನಾವಣೆ ವೇಳೆ ಬೆಲೆ ಏರಿಕೆ ವಿರುದ್ಧ ಹರಿಹಾಯುತ್ತಿದ್ದ ನರೇಂದ್ರ ಮೋದಿ ಇದೀಗ ತಮ್ಮ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಬೆಲೆ ಏರಿಕೆ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ. ಬಜೆಟ್ ಮಂಡನೆವರೆಗೂ ಕಾಯಬಹುದಿತ್ತು. ಜತೆಗೆ ರೈಲ್ವೆ ಮಂತ್ರಿ ಸದಾನಂದ ಗೌಡರು ಹೇಳುವಂತೆ ಬೆಲೆ ಏರಿಕೆ ನಿರ್ಧಾರವನ್ನು ಹಿಂದಿನ ಸರಕಾರದ ಕೈಗೊಂಡಿತ್ತು ಎಂದು ಹೇಳಿ, ಕೈತೊಳೆದುಕೊಳ್ಳುವುದು ಸಮಂಜಸವಲ್ಲ ಎಂದು ದೇವೇಗೌಡರು ಝಾಡಿಸಿದ್ದಾರೆ.

ಪತ್ರಕರ್ತ ಕಾಂಚನ ಗುಪ್ತಾ ಅವರ ಟ್ವೀಟ್ ಹೀಗಿದೆ:


ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರೈಲು ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ತಿಂಗಳು ತುಂಬುವ ಮುನ್ನವೇ ರೈಲ್ವೆ ದರವನ್ನು ಏರಿಕೆ ಮಾಡಿ ಜನಸಾಮಾನ್ಯರಿಗೆ ಭಾರೀ ಹೊಡೆತ ಕೊಟ್ಟಿರುವುದು ಸರಿಯಲ್ಲ. ಕೂಡಲೇ ದರ ಏರಿಕೆ ಆದೇಶ ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೇಳುವುದು ಒಂದು, ಮಾಡುವುದು ಇನ್ನೊಂದು. ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಪಾರು ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ತಿಂಗಳು ತುಂಬುವ ಮುನ್ನವೇ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಹೊಡೆತ ಕೊಟ್ಟಿದೆ' ಎಂದು ಕಿಡಿಕಾರಿದರು.

ರೈಲು ಪ್ರಯಾಣದರ ಏರಿಕೆ ಅವೈಜ್ಞಾನಿಕವಾಗಿದೆ, ಅದು ಸರಿಯಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ಒಂದೇ ಬಾರಿ ಪ್ರಯಾಣ ದರವನ್ನು (ಶೇ. 14ರಷ್ಟು) ಹಿಂದೆಂದೂ ಏರಿಕೆ ಮಾಡಿಲ್ಲ. ಹಿಂದಿನ ಸರ್ಕಾರದ ನಿರ್ಧಾರದಿಂದ ದರ ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಸದಾನಂದ ಗೌಡ ಹೇಳಿರುವುದು ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಸಿದ್ದರಾಮಯ್ಯ ಲೇವಡಿಯಾಡಿದರು.

ಇದೇ ವೇಳೆ ರೈಲು ಪ್ರಯಾಣ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿಲುವಿಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಟನೆ ನಡೆಸಿದ್ದಾರೆ. ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಕಾಂಗ್ರೆಸ್ ಮುಖಂಡ ಅರವಿಂದರ್ ಲೌಲಿ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಜತೆಗೆ, ವಾರಣಾಸಿಯಲ್ಲಿಯೂ ಕೂಡ ರೈಲು ದರ ಏರಿಕೆ ವಿರೋಧಿಸಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಲಹಾಬಾದಿನಲ್ಲಿಯೂ ದರ ಏರಿಕೆ ಖಂಡಿಸಿ ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

Railway passenger train fare hike-nationwide huge protests

ಇನ್ನು ಕೇಂದ್ರ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ಖಂಡಿಸಿರುವ ವಿವಿಧ ರಾಜಕೀಯ ಪಕ್ಷಗಳು, ಜನರಿಗೆ ಹುಸಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ದೇಶದ ಜನತೆಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಈ ಬಗ್ಗೆ ಮಾತನಾಡಿ, ರೈಲು ದರ ಏರಿಕೆಯಿಂದಾಗಿ ಮಧ್ಯಮ ಮತ್ತು ಬಡ ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಯುಪಿಎ ಸರ್ಕಾರ ಕೂಡ ಬೆಲೆ ಏರಿಕೆಯಿಂದಾಗಿಯೇ ಕುಖ್ಯಾತಿಗಳಿಸಿತ್ತು. ಇದೀಗ ಬಿಜೆಪಿ ಸರ್ಕಾರ ಕೂಡ ಯುಪಿಎ ಸರ್ಕಾರಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ರೈಲು ದರ ಏರಿಕೆಯಿಂದ ಬಡವರ ಮೇಲೆ ಹೆಚ್ಚು ಹೊಡೆತ ಬೀಳಲಿದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಸಂಸತ್ತಿನ ಒಪ್ಪಿಗೆ ಪಡೆಯದೇ, ಶ್ವೇತ ಪತ್ರವನ್ನೂ ಹೊರಡಿಸದೆಯೇ ರೈಲು ಪ್ರಯಾಣ ದರವನ್ನು ಹಠಾತ್ತನೆ ಏರಿಸಿರುವ ಕ್ರಮ ಸರಿಯಲ್ಲ ಎಂದಿದ್ದಾರೆ.

ಅಂತೆಯೇ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರು ಮಾತನಾಡಿ, ಚುನಾವಣೆ ವೇಳೆ ಭಾರತಕ್ಕೆ ಒಳ್ಳೆ ದಿನಗಳು ಬರಲಿವೆ ಎಂಬ ಘೋಷಣೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇದೇನಾ ಅವರ ಒಳ್ಳೆ ದಿನಗಳು? ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಒಂದು ವರ್ಗದ ಜನ ಮಾತ್ರ ಅದರಿಂದ ಲಾಭ ಪಡೆಯುತ್ತಾರೆ ಎಂದು ರೈಲು ಇಲಾಖೆಯ ಸಚಿವರು ಕೂಡ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರು ಇದೇ ಸಂದರ್ಭದಲ್ಲಿ ಗಂಭೀರ ಅರೋಪ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+