ರೈಲ್ವೆ ಮತ್ತು ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿ
ನವದೆಹಲಿ, ಜೂನ್ 23: ಪ್ರಧಾನಿ ನರೆಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರಕಾರವು ಭಾರಿ ನಿರೀಕ್ಷೆಯ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಅನ್ನು ಕ್ರಮವಾಗಿ ಜುಲೈ 8 ಮತ್ತು ಜುಲೈ 10ರಂದು ಮಂಡಿಸಲಿದೆ.
ರೈಲ್ವೆ ಸಚಿವ ಡಿವಿ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ಅನ್ನು ಜುಲೈ 8ರಂದು ಮಂಗಳವಾರ ಮಂಡಿಸಲಿದ್ದಾರೆ. ಇನ್ನು ವಿತ್ತ ಸಚಿವ ಆರುಣ್ ಜೇಟ್ಲಿ ಅವರು ಜುಲೈ 10ರಂದು ಗುರುವಾರ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ.
ಇಡೀ ಬಜೆಟ್ ಅಧಿವೇಶನ ಜುಲೈ 7 ರಂದು ಪ್ರಾರಂಭವಾಗಿ 68ನೇ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಆಗಸ್ಟ್ 14ರಂದು ಕೊನೆಯಗೊಳ್ಳಲಿದೆ.



Click it and Unblock the Notifications
