ನಾಚಿಕೆಗೇಡು, ಬೇಜವಾಬ್ದಾರಿಯ ಪರಮಾವಧಿ! ರಾಹುಲ್ ಗೆ ಬಿಜೆಪಿ ತರಾಟೆ
ನವದೆಹಲಿ, ಫೆಬ್ರವರಿ 12: ರಫೇಲ್ ಡಿಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೊದಿ ಅವರ ಮೇಲೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳು ನಾಚಿಕೆಗೇಡು ಮತ್ತು ಬೇಜವಾಬ್ದಾರಿಯ ಪರಮಾವಧಿ ಎಂದು ಬಿಜೆಪಿ ದೂರಿದೆ.
ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಮಾಡುವುದಾಗಿ ಪ್ರಕಟಿಸಿದ ಎರಡು ವಾರ ಮುಂಚೆಯಷ್ಟೇ ಉದ್ಯಮಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಉದ್ಯಮಿ ಅನಿಲ್ ಅಂಬಾನಿ ಅವರ ಮಿಡ್ಲ್ ಮ್ಯಾನ್ ಎಂದು ರಾಹುಲ್ ಗಾಂಧಿ ದೂರಿದ್ದರು. ರಫೇಲ್ ಡಿಲ್ ಗೆ ಸಂಬಮಧಿಸಿದ ಇ ಮೇಲ್ ಪ್ರತಿಯನ್ನೂ ಮಾಧ್ಯಮಗಳಿಗೆ ನೀಡಿದ್ದರು. ಆದರೆ ಇದನ್ನುಕಟು ಶಬ್ದಗಳಿಂದ ಟೀಕಿಸಿರುವ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರದು ಬೇಜವಾಬ್ದಾರಿಯ ಪರಮಾವಧಿ ಎಂದಿದ್ದಾರೆ.

ರಾಹುಲ್ ಗಾಂಧಿ ತೋರಿಸಿರುವ ಇಮೇಲ್ ಪ್ರತಿ ರಪೇಲ್ ಡಿಲ್ ಗೆ ಸಂಬಂಧಿಸಿದ್ದಲ್ಲ. ಅದು ಚಾಪರ್ ಡೀಲ್ ಗೆ ಸಂಬಂಧಿಸಿದ್ದು, ಆ ಪ್ರತಿಯನ್ನು ಏರ್ ಬಸ್ ಮೂಲಕ ರಾಹುಲ್ ಗಾಂಧಿ ಪಡೆದಿದ್ದು ಹೇಗೆ ಎಂಬುದನ್ನು ಅವರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications