ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯ ರೈಫಲ್ ಫ್ಯಾಕ್ಟರಿ ಕುರಿತು ರಾಹುಲ್, ಸ್ಮೃತಿ ಟ್ವಿಟ್ಟರ್ ವಾರ್

|
Google Oneindia Kannada News

ನವದೆಹಲಿ, ಮಾರ್ಚ್ 4: ಅಮೇಥಿಯ ಆರ್ಡನೆನ್ಸ್ ಫ್ಯಾಕ್ಟರಿ ಗೆ ನಾನು 2010ರಲ್ಲೇ ಶಂಕು ಸ್ಥಾಪನೆ ನೆರವೇರಿಸಿದ್ದೆ, ಆದರೆ ಅದಕ್ಕೆ ಮತ್ತೆ ಚಾಲನೆ ನೀಡುವ ಮೂಲಕ ಸುಳ್ಳು ಹೇಳುವ ಪ್ರವೃತ್ತಿಯನ್ನು ನೀವು ಮುಂದುವರೆಸಿದ್ದೀರಿ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಾರೆ.

ಅಮೇಥಿಯ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ರಷ್ಯಾ ಸಹಭಾಗಿತ್ವದಲ್ಲಿ ಎಕೆ-203 ರೈಫಲ್​ಗಳ ತಯಾರಿಕೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ ವಿಷಯವಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ಟ್ವಿಟರ್​ ಯುದ್ಧ ನಡೆದಿದೆ.

Rahul targets Modi over Amethi rifle Factory

ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ ಎಕೆ 47 ಹೋಲುವ ಎಕೆ 203 ಉತ್ಪಾದನೆಗೆ ಮೋದಿಯಿಂದ ಚಾಲನೆ

ಇದಕ್ಕೆ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದು, ಅಮೇಥಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಒಂದೊಮ್ಮೆ ಕ್ಷೇತ್ರ ಕೈತಪ್ಪಿದರೆ ಎನ್ನುವ ಭಯ ನಿಮ್ಮನ್ನು ಕಾಡುತ್ತಿರಬಹುದಲ್ಲವೇ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ನಾವು ಅಮೇಥಿ ಗೆದ್ದಿಲ್ಲ, ಇಲ್ಲಿಯ ಜನರ ಹೃದಯ ಗೆದ್ದಿದ್ದೇವೆ : ನರೇಂದ್ರ ಮೋದಿ ನಾವು ಅಮೇಥಿ ಗೆದ್ದಿಲ್ಲ, ಇಲ್ಲಿಯ ಜನರ ಹೃದಯ ಗೆದ್ದಿದ್ದೇವೆ : ನರೇಂದ್ರ ಮೋದಿ

ಪ್ರಧಾನಿ ಮೋದಿಯವರು ಎಕೆ-203 ರೈಫಲ್ ಗಳ ಉತ್ಪಾದನೆಗೆ ಚಾಲನೆ ನೀಡಿದ್ದಾರೆಯೇ ಹೊರತು ಆರ್ಡನೆನ್ಸ್ ಫ್ಯಾಕ್ಟರಿಗೆ ಅಲ್ಲ, ಇದನ್ನು ಅರಿತುಕೊಳ್ಳ್ದೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

English summary
AICC president Rahul Gandhi Today accused Prime minister Narendra Modi for re inaugrationg Amethi Ordnance Rifle Factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X