• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಆದಾಯವನ್ನು ಅರ್ಧಕ್ಕಿಳಿಸಿದ ಸೂಟು ಬೂಟಿನ ಸರ್ಕಾರ: ರಾಹುಲ್ ಕಿಡಿ

|

ನವದೆಹಲಿ,ಡಿಸೆಂಬರ್ 2: ಈ ಸೂಟು ಬೂಟಿನ ಸರ್ಕಾರವು ರೈತರ ಆದಾಯವನ್ನು ಅರ್ಧಕ್ಕಿಳಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಅವಧಿಯಲ್ಲಿ ಸರ್ಕಾರದ ಸ್ನೇಹಿತರ ಆದಾಯ ಮಾತ್ರ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ತಮ್ಮ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಧ್ವನಿಮುದ್ರಣದ ಜೊತೆಗೆ, ಪ್ರತಿಭಟನಾ ನಿರತ ರೈತರ ವಿರುದ್ಧ ದೌರ್ಜನ್ಯ ಮತ್ತು ಬಲಪ್ರಯೋಗ ನಡೆಸಿದ ವಿಡಿಯೋವನ್ನೂ ರಾಹುಲ್ ಗಾಂಧಿ ಶೇರ್ ಮಾಡಿದ್ದಾರೆ.

ಇದು ಸೂಟು ಬೂಟಿನ ಸರ್ಕಾರ ಎಂದ ರಾಹುಲ್ ಗಾಂಧಿ: ಕಾರಣವೇನು?

ಕೇಂದ್ರದ ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ರಾಷ್ಟ್ರ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ.

ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಅವರು ಹೇಳಿದ್ದರು, ಆದರೆ ಅವರ ಅಂದರೆ ಸರ್ಕಾರದ ಸ್ನೇಹಿತರ ಆದಾಯ ದ್ವಿಗುಣಗೊಳ್ಳುತ್ತಿದೆ, ರೈತರ ಆದಾಯ ಅರ್ಧಕ್ಕೆ ಇಳಿದಿದೆ ಎಂದು, ಸೂಟು-ಬೂಟು ಸರ್ಕಾರ ಲೂಟಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರೈತ ವಿರೋಧಿ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಿರಿ, ಕೇವಲ ಮಾತುಗಳಿಂದ ರೈತರನ್ನು ನಿಮ್ಮತ್ತ ಸೆಳೆಯುವುದನ್ನು ನಿಲ್ಲಿಸಿ, ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದ್ದಾರೆ.

English summary
Congress leader Rahul Gandhi on Wednesday made a blistering attack on the Centre over its claim of doubling farmers' income and alleged that their income has in fact "halved" under the 'suit-boot ki sarkar', while that of its crony friends has grown four times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X