ನಿತೀಶ್ ಬಗ್ಗೆ ಹೇಳಿಕೆ ನೀಡಿ ಧರ್ಮಸಂಕಟಕ್ಕೆ ಸಿಲುಕಿದ ರಾಹುಲ್

Posted By:
Subscribe to Oneindia Kannada

ನವದೆಹಲಿ, ಜುಲೈ 28: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸ್ವಪಕ್ಷೀಯರಿಂದಲೇ ಪ್ರಶ್ನೆಗಳನ್ನು ಎದುರಿಸುತ್ತಿದ್ದು, ಹೊಸ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.

ಸ್ವಹಿತಾಸಕ್ತಿ ಕಾಪಾಡಲು ನಿತೀಶ್ ಏನು ಬೇಕಾದ್ರೂ ಮಾಡ್ತಾರೆ: ರಾಹುಲ್

ಆರ್ ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಅವರಿಂದ ದೂರವಾಗಿ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ಬುಧವಾರ (ಜುಲೈ 26) ಸಂಜೆ ರಾಜಿನಾಮೆ ಸಲ್ಲಿಸಿದ್ದ ನಿತೀಶ್ ಕುಮಾರ್, ಗುರುವಾರ ಬೆಳಗ್ಗೆಯೇ ಬಿಜೆಪಿ ಜತೆಗೆ ತಮ್ಮ ಪಕ್ಷವಾದ ಜೆಡಿಯು ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Rahul Gandhi says ‘knew Nitish plan’, Congress leaders: what did we do?

ಈ ಹಿನ್ನೆಲೆಯಲ್ಲಿ, ನಿತೀಶ್ ವಿರುದ್ಧ ಕಿಡಿ ಕಾರಿದ್ದ ರಾಹುಲ್ ಗಾಂಧಿ, ನಿತೀಶ್ ತಮ್ಮ ಸ್ವಾರ್ಥಕ್ಕಾಗಿ ಯಾರ ಜತೆಗಾದರೂ ಕೈ ಜೋಡಿಸುತ್ತಾರೆ ಎಂದಿದ್ದರು. ಅಲ್ಲದೆ, ನಿತೀಶ್ ರಾಜಿನಾಮೆಯ ತಂತ್ರಗಾರಿಕೆ ಎರಡು-ಮೂರು ತಿಂಗಳ ಹಿಂದೆಯೇ ನಡೆದಿತ್ತು. ಅವರು ರಾಜಿನಾಮೆ ಸಲ್ಲಿಸುವ ವಿಚಾರ ತಮಗೆ ಗೊತ್ತಿತ್ತು ಎಂದಿದ್ದರು.

ಕಾಂಗ್ರೆಸ್ಸಿಗೆ ಮೋಸ ಮಾಡಿದ ನಿತೀಶ್ : ರಾಹುಲ್ ವಾಗ್ದಾಳಿ

ರಾಹುಲ್ ಅವರ ಈ ಉತ್ತರ ಹಲವಾರು ಕಾಂಗ್ರೆಸ್ಸಿಗರಲ್ಲಿ ಅಚ್ಚರಿ ತಂದಿದೆ. ಎರಡು-ಮೂರು ತಿಂಗಳ ಹಿಂದೆಯೇ ಬಿಹಾರದಲ್ಲಿ ಕಾಂಗ್ರೆಸ್-ಜೆಡಿಯು-ಆರ್ ಜೆಡಿ ಮೈತ್ರಿಕೂಟದ ಸರ್ಕಾರ ಪತನವಾಗುತ್ತದೆ ಎಂದು ತಿಳಿದಿತ್ತಾದರೆ, ರಾಹುಲ್ ಗಾಂಧಿ ಅವರು ಏಕೆ ಮೊದಲೇ ಎಚ್ಚೆತ್ತುಕೊಳ್ಳಲಿಲ್ಲ.

ಲಾಲೂ, ನಿತೀಶ್ ನಡುವಿನ ಭಿನ್ನಾಭಿಪ್ರಾಯಗಳು ಪರಾಕಾಷ್ಠೆಗೆ ಮುಟ್ಟಿದ್ದಾಗಲೂ ರಾಹುಲ್ ಮೌನ ವಹಿಸಿದ್ದೇಕೆ? ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಪ್ರಕರಣ ತಿಳಿಗೊಳಿಸಲು ಪ್ರಯತ್ನಿಸಲಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

131 ಶಾಸಕರ ಬೆಂಬಲದೊಂದಿಗೆ ವಿಶ್ವಾಸ ಮತ ಗೆದ್ದ ನಿತೀಶ್

ಆದರೆ, ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿಲ್ಲ. ಹಾಗಾಗಿ, ಇದು ಹಿಟ್ ರನ್ ಕೇಸ್ ಎಂದು ಹಲವಾರು ಮಂದಿ ಆಡಿಕೊಳ್ಳುವಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
While Congress vice-president Rahul Gandhi on Thursday lashed out at Nitish Kumar, and said, he knew about this “planning” for “three or four months”, many in his party wondered why the Congress did not intervene effectively in that case to prevent the split.
Please Wait while comments are loading...