ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮೌನವೇಕೆ? ಏಕೆ ಅಡಗಿಕೊಂಡಿದ್ದಾರೆ? ಪಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

|
Google Oneindia Kannada News

ಲಡಾಖ್, ಜೂನ್ 17: ಚೀನಾ ಮತ್ತು ಭಾರತದ ನಡುವೆ ಘರ್ಷಣೆ ನಡೆದಿದೆ, 20 ಮಂದಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Recommended Video

Rahul Gandhi wants Modi to speak up about Indo China issue | Oneindia Kannada

ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆಯಲ್ಲಿ 20 ಯೋಧರ ಮೃತಪಟ್ಟಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ.

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ''ಮೋದಿ ಏಕೆ ಮೌನವಾಗಿದ್ದಾರೆ? ಅವರು ಏಕೆ ಅಡಗಿಕೊಂಡಿದ್ದಾರೆ? ಸಾಕಾಗಿದೆ, ಚೀನಾ ವಿಚಾರದಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗಬೇಕಿದೆ.....

'ಸರ್ಕಾರದ ಗುತ್ತಿಗೆಗಳಿಂದ ಚೀನಾ ನಿಷೇಧಿಸಿ, ಹುತಾತ್ಮ ಯೋಧರನ್ನು ಗೌರವಿಸಿ''ಸರ್ಕಾರದ ಗುತ್ತಿಗೆಗಳಿಂದ ಚೀನಾ ನಿಷೇಧಿಸಿ, ಹುತಾತ್ಮ ಯೋಧರನ್ನು ಗೌರವಿಸಿ'

ನಮ್ಮ ಯೋಧರನ್ನು ಕೊಲ್ಲಲು ಚೀನಾ ಎಷ್ಟು ಧೈರ್ಯ?

ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಎಷ್ಟು ಧೈರ್ಯ?'' ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

Rahul Gandhi questions PM’s silence over the Indo-China face off, asks “why is he hiding

ಸೋಮವಾರ ನಡೆದ ಈ ಘರ್ಷಣೆಯಲ್ಲಿ ಚೀನಾದ ಸುಮಾರು 43 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಈ ಕುರಿತು ಚೀನಾ ಅಧಿಕೃತ ಹೇಳಿಕೆ ನೀಡಿಲ್ಲ.

ಇಂತಹ ಸಂದರ್ಭದಲ್ಲಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಪ್ರಧಾನಿ ಅವರನ್ನು ಒತ್ತಾಯಿಸಿವೆ.

English summary
Why is the PM silent? Why is he hiding? How dare China kill our soldiers and take our land? - Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X